ವಿಶ್ವಕಪ್ ಫೈನಲ್‍ಗೆ ಲಗ್ಗೆಯಿಟ್ಟ ಫ್ರಾನ್ಸ್

Social Share

ಅಲ್ ಖೋರ್, ಡಿ. 15- ತಡ ರಾತ್ರಿ ಇಲ್ಲಿ ನಡೆದ ಫೀಫ ವಿಶ್ವಕಪ್‍ನ ಎರಡನೇ ಸಮಿಫೈನಲ್‍ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್‍ನಲಿ ಫ್ರಾನ್ಸ್ ಎದುರಾಳಿ ಮೊರಾಕೊ ವಿರುದ್ದ 2-0 ಅಂತರದಿಂದ ಜಯ ಸಾಧಿಸಿ ಫೈನಲ್‍ಗೆ ಲಗ್ಗೆ ಇಟ್ಟಿದೆ.

ಭಾರಿ ರೋಚಕತೆ ಮೂಡಿಸಿದ್ದ ಪಂದ್ಯ ಏಕಪಕ್ಷೀಯವಾಗಿದ್ದಂತೆ ಕಂಡುಬಂದು ಫ್ರಾನ್ಸ್ ನಿಜಕ್ಕೂ ಚಾಂಪಿಯನ್ ರೀತಿ ಆಡಿ ಮೊರಾಕೊಗೆ ದೊಡ್ಡ ಪೆಟ್ಟು ನೀಡಿದೆ. ಪ್ರಾನ್ಸ್ ದೇಶದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೂಡ ಪಂದ್ಯವನ್ನು ನೋಡಿ ಖುಷಿಗೆ ಪಾರವೇ ಇರಲಿಲ್ಲ ಪಂದ್ಯ ಆರಂಭಗೊಂಡ 5 ನೇ ನಿಮಿಷದಲ್ಲಿ ಪ್ರಾನ್ಸ್‍ನ ಮುಂಚೂಣಿ ಆಟಾಗಾರ ಥಿಯೋ ಹೆರ್ನಾಂಡೆಜ್ ಚಮತ್ಕಾರಿ ಆಟದ ಮೂಲಕ ಮೊದಲ ಗೋಲು ದಾಖಲಿಸಿ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಇದರಿಂದ ವಿಚಲಿತರಾದ ಮೊರಾಕೊ ಆಟಗಾರರು ಅಕ್ರಮಣಕಾರಿ ಆಟಕ್ಕೆ ಮುಂದಾಗಿ ಗೋಲು ಗಳಿಸುವ ಸಾಕಷ್ಟು ಅವಕಾಶ ಕೈಚಲ್ಲಿದರು. ಮೊದಲರ್ಧದಲ್ಲಿ ಮುನ್ನಡೆ ಸಾಧಿಸಿದ ಪ್ರಾನ್ಸ್ ಸ್ವಲ್ಪ ಕಾರ್ಯತಂತ್ರ ಬದಲಿಸಿ ದ್ವಿತೀಯಾರ್ಧದಲ್ಲಿ ಡಿಫೆಂಡ್‍ಗೆ ಹೆಚ್ಚಿನ ಆದ್ಯತೆ ನೀಡಿತ್ತುಸಮಬಲ ಸಾಧಿಸುವ ಅವಕಾಶ ಪಡೆದ ಮೊರಾಕೊ ಆಸೆಗೆ ಫ್ರಾನ್ಸ್ ಗೋಲ್‍ಕೀಪರ್ ತಡೆಯಾದರು.

ಅಮೆರಿಕ ಸಂಸತ್ತಿನ ಮೊದಲ ಮಹಿಳಾ ಸ್ಪೀಕರ್ ಪೆಲೋಸಿಗೆ ಬೀಳ್ಕೊಡುಗೆ

ಅಂತಿಮ ಕ್ಷಣದ ಸಮೀಪಿಸುವಾಗ ಬದಲಿ ಆಟಗಾರ ಮೈದಾನಕಿಳಿದ ರಾಂಡಲ್ ಕೊಲೊ ಮುವಾನಿ 79 ನೇ ನಿಮಿಷದಲ್ಲಿ ಚಾಕಚಕ್ಯತೆಯಿಂದ ಚೆಂಡನ್ನು ಬಲೆಗೆ ತಲುಪಿಸಿ ಪ್ರಾನ್ಸ್‍ಗೆ 2ನೇ ಗೋಲು ತಂದುಕೊಟ್ಟರು.

ಸ್ಪೇನ್ ಮತ್ತು ಪೋರ್ಚುಗಲ್‍ನಂತಹ ತಂಡವನ್ನು ಮಣಿಸಿದ್ದ ಆಫ್ರಿಕಾದ ಮೊರಾಕೊ ತಂಡ ಎಲ್ಲರ ಹುಬ್ಬೇರುವಂತೆ ಮಾಡಿತ್ತು ಆದರೆ ಸಮೀಪೈನಲ್‍ನಲ್ಲಿ ಅದೃಷ್ಠ ಕೈಕೊಟ್ಟಿತ್ತು. ಅಂತಿಮ ಸೀಟಿಯ ನಂತರ ಹತಾಶೆಯಿಂದ ನೆಲದ ಮೇಲೆ ಕುಸಿದು ಆಟಗಾರರನ್ನು ಸಮಾಧಾನ ಮಡಲಾಯಿತು

ಮತ್ತೆ ಗುಂಡಿಮಯವಾದ ಸಿಲಿಕಾನ್ ಸಿಟಿ ರಸ್ತೆಗಳು

ನಾವು ಮೊರೊಕನ್ ಜನರಿಗೆ ನಿರಾಶೆಗೊಂಡಿದ್ದೇವೆ ಮುಂದೆ ಅವರ ಕನಸನ್ನು ಜೀವಂತವಾಗಿಡಲು ನಾವು ಬಯಸಿದ್ದೇವೆ ಎಂದು ಮೊರಾಕೊ ತಂಡದ ತರಬೇತುದಾರ ವಾಲಿದ್ ರೆಗ್ರಾಗುಯಿ ಹೇಳಿದರು.

ಮುಂದೆ ಅತ್ಯಂತ ಸ್ಪರ್ಧಾತ್ಮಕ ತಂಡವನ್ನು ಎದುರಿಸಲು ನಮಗೆ ನಮ್ಮ ಎಲ್ಲಾ ಶಕ್ತಿಯನ್ನು ಬಳಸುವ ಅಗತ್ಯವಿದೆ ಎಂದು ಫ್ರಾನ್ಸ್ ಗೋಲ್ಕೀಪರ್ ಹ್ಯೂಗೋ ಲೋರಿಸ್ ಹೇಳಿದ್ದಾರೆ.

ಏಕಕಾಲದಲ್ಲಿ 3 ಕಡೆ ಸಿಸಿಬಿ ದಾಳಿ, 35 ಲಕ್ಷ ಮೌಲ್ಯದ ಮಾಲು ವಶ

ಭಾನುವಾರ ಅರ್ಜೆಂಟೀನಾ-ಪ್ರಾನ್ಸ್ ನಡುವೆ ಪೈನಲ್ ಪಂದ್ಯ ನಡೆಯಲಿದೆ ವಿಶ್ವದ ದಿಗ್ಗಜ ಅಟಗಾರರ ಆಟ ನೋಡಲು ವಿಶ್ವದ ಕ್ರೀಡಾ ಪ್ರೀಯರು ಕಾತರರಾಗಿದ್ದಾರೆ.

FRANCE, MOROCCO, FIFA WORLD CUP, SEMIFINALS,

Articles You Might Like

Share This Article