ಸಿಎ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಿ ಕೋಟ್ಯಂತರ ರೂ.ವಂಚನೆ

Social Share

ಬೆಂಗಳೂರು, ನ.5- ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಕಲ್ಲುಬಾಳು ಗ್ರಾಮ ಪಂಚಾಯತ್ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಉದ್ಯಾನವನ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ನಿವೇಶ ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಸುಮಾರು 150 ಕೋಟಿ ರೂ.ಗಳನ್ನು ನಿರ್ಮಾಣ್ ಶೆಲ್ಟರ್ ರಿಯಲ್ ಎಸ್ಟೇಟ್ ಸಂಸ್ಥೆ ವಂಚಿಸಿದೆ ಎಂದು ಗ್ರಾಪಂ ಸದಸ್ಯ ಸದಾನಂದ ಆರೋಪಿಸಿದ್ದಾರೆ.

ಸಂಸ್ಥೆಯಿಂದ ನಿವೇಶನ ಪಡೆದು ವಂಚನೆಗೊಳಗಾದವರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಿಯಲ್ ಎಸ್ಟೆಟ್ ಸಂಸ್ಥೆಯವರು ಉದ್ಯಾನವನ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಮೀಸ ಲಿಟ್ಟಿದ್ದ 10.5 ಎಕರೆ ಪ್ರದೇಶದಲ್ಲಿ ನಿವೇಶನ ಹಂಚಿಕೆ ಮಾಡಿ ಭಾರೀ ಪ್ರಮಾಣದಲ್ಲಿ ಮಾರಾಟ ಮಾಡಿದೆ. ನಿವೇಶನ ಖರೀದಿಸಿದವರಿಗೆ 150 ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟವಾಗಿದೆ ಎಂದರು.

ನೂರಾರು ಕೋಟಿ ರೂಪಾಯಿ ಅಕ್ರಮ ನಡೆದಿರುವ ಪ್ರಕರಣದ ಬಗ್ಗೆ ತಕ್ಷಣವೇ ಬಿಎಂಆರ್ಡಿಎ ಇಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕೂಡಲೇ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಈ ಅವ್ಯವಹಾರದಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳು ಬಿಲ್ಡರ್ಸ್ ಗಳ ಜೊತೆ ಶಾಮೀಲಾಗಿರುವ ಸಾಧ್ಯತೆಗಳಿವೆ. ಇವರ ಅಕ್ರಮದಿಂದ ಜೀವನ ಪರ್ಯಂತ ಗಳಿಸಿದ ಹಣದಲ್ಲಿ ನಿವೇಶನ ಪಡೆದು ಮೋಸ ಹೋಗಿರುವ ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ನಿಸರ್ಗ, ನಂದನವನ, ನಿರ್ಮಲ ನಗರ ಸೇರಿದಂತೆ ಐದು ಬಡಾವಣೆಗಳಲ್ಲಿ ಇಂತಹ ಭಾರೀ ವಂಚನೆ ನಡೆದಿದ್ದು, ಪ್ರತಿಯೊಂದು ಬಡಾವಣೆಗಳಲ್ಲಿ ಕನಿಷ್ಠ 25 ರಿಂದ 50 ಕೋಟಿ ರೂಪಾಯಿಯಷ್ಟು ವಂಚನೆಯಾಗಿದೆ. ಸರ್ವೇ ಮಾಡಿದ್ದು, ಒತ್ತುವರಿಯಾಗಿ. ಬಿಎಂಆರ್ಡಿಎ ಮತ್ತು ಪಂಚಾಯತಿ ಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಖಾತೆಗಳನ್ನು ಮಾಡಲಾಗಿದೆ.

ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಉಮಾ ಮಹದೇವ್ ಮತ್ತು ಅತೀಕ್ ಅವರು ತನಿಖೆಗೆ ಆದೇಶ ನೀಡಿದ್ದು, ಇದರಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.

ಹನಿಟ್ರ್ಯಾಪ್ ಗ್ಯಾಂಗ್ ಅಂದರ್ : ಇಬ್ಬರು ಮಹಿಳೆಯರು ಸೇರಿ, 10 ಮಂದಿ ಅರೆಸ್ಟ್

ಬಡಾವಣೆಗಳ ಉದ್ಯಾನವನ ಮತ್ತು ಸಾರ್ವಜನಿಕ ಉದ್ದೇಶದ ಸ್ಥಳಗಳನ್ನು ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡಲಾಗಿದೆ. ಇಂತಹ ಸುಮಾರು 10.5 ಎಕರೆ ಪ್ರದೇಶವನ್ನು ದುರ್ಬಳಕೆ ಮಾಡಿ ಕೊಳ್ಳಲಾಗಿದೆ. ಆನೇಕಲ್ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಇಂತಹ ನಿವೇಶನಗಳ ಖಾತೆ ವಜಾಗೊಳಿಸುವಂತೆ ಮನವಿ, ಇಂತಹ ನಿವೇಶನಗಳನ್ನು ಖರೀದಿಸಿ ರುವವರು ಬಹುತೇಕ ಮಂದಿ ಅಮಾಯಕರಾಗಿದ್ದು, ಇನ್ನೂ ಕೆಲವರು ವಿದೇಶದಲ್ಲಿದ್ದಾರೆ. ಸಿಎ ನಿವೇಶನ ಮಾರಾಟ ಮಾಡಿದ್ದಾರೆ.

ಆದರೆ ಈ ಅಕ್ರಮದ ಬಗ್ಗೆ ತಾಲ್ಲೂಕು ಪಂಚಾಯತ್ ಇಒ ಅವರು ತಡೆಯಾಜ್ಞೆ ನೀಡಿ ಪ್ರಕರಣವನ್ನು ಪದೇ ಪದೇ ಮುಂದೂಡುತ್ತಿದ್ದರು. ಆದರೆ ಇದೀಗ ತಡೆಯಾಜ್ಞೆ ತೆರವು ಗೊಂಡಿದೆ. ಇಂತಹ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೂ ಸಹ ಭಾರೀ ನಷ್ಟವಾಗಿದೆ. ನಿಜವಾಗಿ ಶೋಷಣೆಗೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿದರು.

Articles You Might Like

Share This Article