ದೇವಾಲಯಗಳ ಧಾರ್ಮಿಕ ಸ್ವಾಯತ್ತ ಕಾಯ್ದೆಗೆ ಅರ್ಚಕರ ಒಕ್ಕೂಟ ವಿರೋಧ

Social Share

ಬೆಂಗಳೂರು, ಜ.4- ದೇವಸ್ಥಾನಗಳ ಸ್ವಾಯತ್ತತೆ ಕುರಿತು ಕಾಯ್ದೆ ತರಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಅರ್ಚಕರು-ಆಗಮಿಕ-ಉಪಾವಂತರ ಒಕ್ಕೂಟ ವಿರೋಧಿಸಿದೆ. ಯಾವುದೇ ಕಾರಣಕ್ಕೂ ಈ ಕಾಯ್ದೆ ತರಲು ಅವಕಾಶ ಕೊಡಬಾರದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಈ ಕಾಯ್ದೆಯಿಂದ ಸಣ್ಣ ದೇಗುಲಗಳಿಗೆ ಅನ್ಯಾಯವಾಗಲಿದೆ. ಪಕ್ಷದ ಕಾರ್ಯಕರ್ತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದ ಸಣ್ಣ ದೇಗುಲಗಳ ಅರ್ಚಕರಿಗೆ ಸಮಸ್ಯೆಯಾಗುತ್ತದೆ. ರಾಜ್ಯದಲ್ಲಿ ಸಿ ಗ್ರೇಡ್ ದೇಗುಲಗಳ ಅರ್ಚಕರು ಹೇಗೋ ಜೀವನ ನಡೆಸುತ್ತಿದ್ದಾರೆ. ವಾರ್ಷಿಕ 36 ಸಾವಿರ ಗೌರವ ಧನ ಸಿಗುತ್ತಿದೆ. ಮುಜರಾಯಿ ಇಲಾಖೆ ಈ ಹಣವನ್ನು ನೀಡುತ್ತಿದೆ. ಸರ್ಕಾರ ಈ ಕಾಯ್ದೆ ತಂದರೆ ಎಲ್ಲವೂ ಸ್ತಬ್ಧವಾಗುತ್ತದೆ.
ದೇಗುಲಗಳಿಗೆ ಟ್ರಸ್ಟ್ ರಚಿಸುತ್ತಾರೆ. ಟ್ರಸ್ಟ್‍ಗಳಲ್ಲಿ ರಾಜಕಾರಣಿಗಳೇ ಇರುತ್ತಾರೆ. ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಕಾಯ್ದೆಗೆ ನಾವು ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಅರ್ಚಕರ ಒಕ್ಕೂಟದ ಅಧ್ಯಕ್ಷ ದೀಕ್ಷಿತ್ ಹೇಳಿದ್ದಾರೆ.

Articles You Might Like

Share This Article