ನವದೆಹಲಿ,ಫೆ.4-ತಾನೊಂದು ಬಗೆದರೆ ದೈವವೊಂದು ಬಗೆಯಿತು ಅನ್ನೊ ಗಾದೆ ಮಾತಿನ ಹಾಗೇ ರೇಪ್ ಅಂಡ್ ಮರ್ಡರ್ ಆರೋಪದ ಮೇಲೆ ಮರಣದಂಡನೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬ ಸುಪ್ರೀಂಕೋರ್ಟ್‍ನಿಂದ ಆರೋಪ ಮುಕ್ತನಾಗಿ ಬಿಡುಗಡೆಗೊಂಡು ಮತ್ತೆ ಕೊಲೆ ಆರೋಪದ ಮೇಲೆ ಸಿಕ್ಕಿಬಿದ್ದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಮರಣದಂಡನೆಯಿಂದ ಬಚಾವಾಗಿ ಕೊಲೆ ಆರೋಪದಲ್ಲಿ ಸಿಕ್ಕಿಬಿದ್ದಿರುವ ವ್ಯಕ್ತಿಯನ್ನು ವಿನೋದ್ ಎಂದು ಗುರುತಿಸಲಾಗಿದೆ. 2012 ರಲ್ಲಿ 19 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ ಮೂವರು ಆರೋಪಿಗಳಲ್ಲಿ ವಿನೋದ್ ಕೂಡ ಒಬ್ಬನಾಗಿದ್ದ. ಆರೋಪಿಗಳಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಮರಣದಂಡನೆ ವಿರುದ್ಧ ವಿನೋದ್ ಹಾಗೂ ಮತ್ತಿಬ್ಬರು ಆರೋಪಿಗಳು ಸುಪ್ರೀಂಕೋರ್ಟ್ ಮೆಟ್ಟೀಲೆರಿದ್ದರು. ವಾದ-ವಿವಾದ ಆಲಿಸಿದ ನ್ಯಾಯಲಯ ಆರೋಪಿಗಳನ್ನು ಕಳೆದ ನವಂಬರ್‍ನಲ್ಲಿ ದೋಷಮುಕ್ತಗೊಳಿಸಿ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.
‘ರಾಜಕೀಯ’ ಮಾಡ್ತಾರಾ ನಂತ ಕಿಚ್ಚ ಸುದೀಪ್..?
ಬಿಡುಗಡೆಗೊಂಡ ನಂತರ ವಿನೋದ್ ಕೆಲ ದಿನಗಳ ಹಿಂದೆ ತನ್ನ ಸಹಚರರೊಂದಿಗೆ ದರೋಡೆ ಮಾಡುವ ಉದ್ದೇಶದಿಂದ ಆಟೋ ಚಾಲಕರೊಬ್ಬರ ಕತ್ತು ಸೀಳಿ ಕೊಲೆ ಮಾಡಿದ ಆರೋಪಕ್ಕೆ ಗುರಿಯಾಗಿ ಪೊಲೀಸರಿಗೆ ಸಿಕ್ಕಿಬಿದ್ದು ಮತ್ತೆ ಕಂಬಿ ಎಣಿಸುತ್ತಿದ್ದಾನೆ.
ಮೋದಿ ಕರ್ನಾಟಕದಲ್ಲೇ ಬೀಡುಬಿಟ್ಟರೂ ಬಿಜೆಪಿ ಗೆಲ್ಲಿಸಲ್ಲಾಗಲ್ಲ : ಸಿದ್ದರಾಮಯ್ಯ
2014ರಲ್ಲಿ ರೇಪ್ ಅಂಡ್ ಮರ್ಡರ್ ಕೇಸ್‍ನಲ್ಲಿ ವಿನೋದ್ ಹಾಗೂ ಆತನ ಇಬ್ಬರು ಸ್ನೇಹಿತರಿಗೆ ವಿಚಾರಣಾ ನ್ಯಾಯಲಯ ಮರಣದಂಡನೆ ವಿಧಿಸಿತ್ತು. ಈ ಆದೇಶವನ್ನು ದೆಹಲಿ ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು.
ಆದರೆ, ಸುಪ್ರೀಂಕೋರ್ಟ್ ವಿಚಾರಣಾ ನ್ಯಾಯಲಯ ಹಾಗೂ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ವಿನೋದ್ ಹಾಗೂ ಆತನ ಸ್ನೇಹಿತರನ್ನು ಆರೋಪಮುಕ್ತಗೊಳಿಸಿತ್ತು.