ಬೆಂಗಳೂರು, ಮಾ.10- ಫ್ರೀಡಂ ಪಾರ್ಕ್‍ನಲ್ಲಿ ಬಂದೋಬಸ್ತ್‍ನ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಏಕಾಏಕಿ ಜೇನು ನೊಣಗಳು ದಾಳಿ ಮಾಡಿ ಕಚ್ಚಿದ್ದರಿಂದ ಗಾಯಗೊಂಡ ಹತ್ತು ಮಂದಿ ಸಿಬ್ಬಂದಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫ್ರೀಡಂ ಪಾರ್ಕ್ ಬಳಿ ಪೊಲೀಸರು ಬಂದೋಬಸ್ತ್ ಕರ್ತವ್ಯದಲ್ಲಿದ್ದರು. ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಇಲ್ಲಿನ ಮರದಲ್ಲಿದ್ದ ಜೇನು ನೊಣಗಳು ಏಕಾಏಕಿ ಹಾರಾಡುತ್ತಾ ಪೊಲೀಸರಿಗೆ ಕಚ್ಚಿದ ಪರಿಣಾಮ ಒಬ್ಬರು ಇನ್ಸ್‍ಪೆಕ್ಟರ್, ಹತ್ತರಿಂದ ಹದಿನೈದು ಮಂದಿ ಹೆಡ್ ಕಾನ್‍ಸ್ಟೇಬಲ್ ಮತ್ತು ಕಾನ್‍ಸ್ಟೇಬಲ್‍ಗಳು ಗಾಯಗೊಂಡರು.
ಕೆಲ ಸಿಬ್ಬಂದಿಗೆ 15 ರಿಂದ 20 ಜೇನು ನೊಣಗಳು ಕಚ್ಚಿದ್ದರಿಂದ ತೀವ್ರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು , ಚಿಕಿತ್ಸೆ ಪಡೆಯುತ್ತಿದ್ದಾರೆ.
