Sunday, April 12, 2026
Homeರಾಜ್ಯಇಬ್ಬರು ವಿದೇಶಿಗರು ಸೇರಿದಂತೆ 11 ಡ್ರಗ್ಸ್ ಪೆಡ್ಲರ್‌ಗಳ ಬಂಧನ : 5.14 ಕೋಟಿ ರೂ.ಮೌಲ್ಯದ ಮಾದಕ...

ಇಬ್ಬರು ವಿದೇಶಿಗರು ಸೇರಿದಂತೆ 11 ಡ್ರಗ್ಸ್ ಪೆಡ್ಲರ್‌ಗಳ ಬಂಧನ : 5.14 ಕೋಟಿ ರೂ.ಮೌಲ್ಯದ ಮಾದಕ ದ್ರವ್ಯ ವಶ

ಬೆಂಗಳೂರು,ಮಾ.31- ಸಿಲಿಕಾನ್‌ ಸಿಟಿಯಲ್ಲಿ ಬೇರೂರಿರುವ ಡ್ರಗ್‌್ಸ ದಂಧೆಯನ್ನು ಬುಡಸಮೇತ ಕಿತ್ತುಹಾಕಲು ಪಣತೊಟ್ಟಿರುವ ನಗರ ಪೊಲೀಸರು ಇಬ್ಬರು ವಿದೇಶಿಗರು, ಹೊರ ರಾಜ್ಯದ ಒಬ್ಬ ಪೆಡ್ಲರ್‌ ಸೇರಿದಂತೆ 11 ಮಂದಿಯನ್ನು ಬಂಧಿಸಿ 5.14 ಕೋಟಿ ರೂ.ಮೌಲ್ಯದ ಮಾದಕ ದ್ರವ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಯಲಹಂಕ ಉಪನಗರ, ಆಡುಗೋಡಿ,ಭಾರತಿನಗರ, ಜಾಲಹಳ್ಳಿ ಹಾಗೂ ಪುಲಿಕೇಶಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಗಳಲ್ಲಿ ಮಾರಾಟ ಮಾಡುತ್ತಿದ್ದ 2.07 ಕೆ.ಜಿ. ಎಂಡಿಎಂಎ, 31.396 ಕೆ.ಜಿ. ಗಾಂಜಾ,220 ಗ್ರಾಂ ಹೈಡ್ರೋ ಗಾಂಜಾ, 162 ಗ್ರಾಂ ಹೆರಾಯಿನ್‌ ಹಾಗೂ ಕೃತ್ಯಕ್ಕೆ ಬಳಸಿದ್ದ 1 ದ್ವಿಚಕ್ರ ವಾಹನ ಸೇರಿದಂತೆ 2.57 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಮಾರುಕಟ್ಟೆ ಮೌಲ್ಯ 5.14 ಕೋಟಿ ರೂ. ಗಳೆಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾಹಿತಿ ನೀಡಿದರು.

ಯಲಹಂಕ ಉಪನಗರ, ಆಡುಗೋಡಿ, ಭಾರತಿನಗರ, ಜಾಲಹಳ್ಳಿ, ಪುಲಿಕೇಶಿನಗರ ಪೊಲೀಸ್‌‍ ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ನಮ ಪೊಲೀಸರು ಸಂಘಟಿತ ದಾಳಿ ನಡೆಸಿ ಇಬ್ಬರು ವಿದೇಶಿಗರು, ಹೊರರಾಜ್ಯದ ಒಬ್ಬ ವ್ಯಕ್ತಿ ಸೇರಿದಂತೆ 11 ಮಂದಿಯನ್ನು ಬಂಧಿಸಿ ಅವರ ವಿರುದ್ಧ ಎನ್‌ಡಿಪಿಎಸ್‌‍ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು. ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶಿ,ಹೊರರಾಜ್ಯದವರು ಹಾಗೂ ಸ್ಥಳೀಯ ಅಪರಿಚಿತ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಡ್ರಗ್‌್ಸ ತರಿಸಿಕೊಂಡು ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆಂದು ಆಯುಕ್ತರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಹಾಗೂ ಆರೋಪಿಗಳಿಗೆ ನಿಷೇಧಿತ ಡ್ರಗ್‌್ಸ ಮಾರಾಟ ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಬಂಧಿತ 11 ಮಂದಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಎಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ವಿವರಿಸಿದರು.

ಯಲಹಂಕ ಉಪನಗರದಲ್ಲಿ 2 ಕೋಟಿ ಮೌಲ್ಯದ 2ಕೆಜಿ ಎಂಡಿಎಂಎ, ಆಡುಗೋಡಿಯಲ್ಲಿ 54.40 ಲಕ್ಷ ಮೌಲ್ಯದ 28 ಕೆಜಿ ಗಾಂಜಾ, 220 ಗ್ರಾಂ ಹೈಡ್ರೋ ಗಾಂಜಾ ಹಾಗೂ 162 ಗ್ರಾಂ ಹೆರಾಯಿನ್‌, ಭಾರತಿನಗರದಲ್ಲಿ 1 ಲಕ್ಷ ಮೌಲ್ಯದ 2ಕೆಜಿ ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನ, ಜಾಲಹಳ್ಳಿಯಲ್ಲಿ 95 ಸಾವಿರ ಮೌಲ್ಯದ 546 ಗ್ರಾಂ ಗಾಂಜಾ, 7 ಗ್ರಾಂ ಎಂಡಿಎಂಎ ಹಾಗೂ ಪುಲಿಕೇಶಿನಗರದಲ್ಲಿ 40 ಸಾವಿರ ಮೌಲ್ಯದ 850 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮಾರುಕಟ್ಟೆ ಮೌಲ್ಯ 5.14 ಕೋಟಿ ರೂ.ಗಳಾಗಿವೆ ಎಂದು ಅವರು ಹೇಳಿದರು.

ನೈಜೀರಿಯನ್‌ ಬಂಧನ:ಯಲಹಂಕದ ಹಾರೋಹಳ್ಳಿ ಸಮೀಪದ ಇಸ್ರೋಲೇಔಟ್‌ನಲ್ಲಿ ವಿದೇಶಿ ಪ್ರಜೆಗಳು ಎಂಡಿಎಂಎ ಡ್ರಗ್‌್ಸ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಯಲಹಂಕ ಉಪನಗರ ಪೊಲೀಸರು ದಾಳಿ ನಡೆಸಿ ನೈಜೀರಿಯನ್‌ ಮೂಲದ ಸ್ಯಾಮುಯಲ್‌ ಇಕೇನಾ (44) ಎಂಬಾತನನ್ನು ಬಂಧಿಸಿದ್ದಾರೆ ಎಂದು ಸೀಮಂತ್‌ಕುಮಾರ್‌ ಸಿಂಗ್‌ ಮಾಹಿತಿ ನೀಡಿದರು.
ಕಳೆದ 2012 ರಲ್ಲಿ ಬಿಜಿನೆಸ್‌‍ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ನೈಜೀರಿಯನ್‌ ಮೂಲದ ಸ್ಯಾಮುಯಲ್‌ 2025 ರಲ್ಲಿ ಅಕ್ರಮವಾಗಿ ಬೆಂಗಳೂರಿಗೆ ಬಂದು ಆನೇಕಲ್‌ ತಾಲ್ಲೂಕಿನ ಜಿಗಣಿ ಸಮೀಪದ ಶ್ರೀ ಸಾಯಿ ರೆಸಿಡೆನ್ಸಿ ಬಡಾವಣೆಯಲ್ಲಿ ನೆಲೆಸಿದ್ದ ಎಂದು ಅವರು ವಿವರಿಸಿದರು.

ಆತನ ಬಳಿ ಇದ್ದ 2 ಕೋಟಿ ಮೌಲ್ಯದ 2 ಕೆಜಿ ಎಂಡಿಎಂಎ ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಂಡು ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಶಹಬ್ಬಾಸ್‌‍ಗಿರಿ: ವಿವಿಧ ಪೊಲೀಸ್‌‍ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಡ್ರಗ್‌್ಸ ದಂಧೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರಿಗೆ ಸೀಮಂತ್‌ಕುಮಾರ್‌ ಸಿಂಗ್‌ ಶಹಬ್ಬಾಸ್‌‍ಗಿರಿ ನೀಡಿದ್ದಾರೆ.

RELATED ARTICLES

Latest News