Saturday, April 11, 2026
Homeಬೆಂಗಳೂರುಇಂದು ಐತಿಹಾಸಿಕ ಬೆಂಗಳೂರು ಹಸಿ ಕರಗ

ಇಂದು ಐತಿಹಾಸಿಕ ಬೆಂಗಳೂರು ಹಸಿ ಕರಗ

ಬೆಂಗಳೂರು, ಮಾ.30-ಐತಿಹಾಸಿಕ ಬೆಂಗಳೂರು ಹಸಿ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಧರ್ಮರಾಯ ಸ್ವಾಮಿ ದೇವಾಸ್ಥಾನದಲ್ಲಿ ಹಸಿಕರಗ ಆಚರಣೆ ನೆರವೇರಲಿದೆ. ಹೂವಿನ ಕರಗಕ್ಕೂ ಮುನ್ನ ನಡೆಯುವ ಪ್ರಮುಖ ಆಚರಣೆಯಾದ ಹಸಿಕರಗ, ಮಧ್ಯರಾತ್ರಿ 3 ಗಂಟೆಗೆ ಸಂಪಂಗಿ ಕೆರೆಯ ಶಕ್ತಿಪೀಠದಲ್ಲಿ ವಿಶೇಷ ಪೂಜೆಯೊಂದಿಗೆ ಆರಂಭವಾಗಿ. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಸಿಕರಗವನ್ನು ದೇವಾಲಯಕ್ಕೆ ತರಲಾಗುತ್ತದೆ.

ಚಿತ್ರಹುಣ್ಣಿಮೆಗೆ ಮೂರು ದಿನ ಮೊದಲು ದ್ರೌಪದಿ ದೇವಿ ಭೂಮಿಗೆ ಆಗಮಿಸುತ್ತಾಳೆ ಎಂಬ ನಂಬಿಕೆ ಇದ್ದು, ಹಸಿಕರಗದಲ್ಲಿ ದೇವಿ ಮಗುವಿನ ರೂಪದಲ್ಲಿ ನೆಲೆಸುತ್ತಾಳೆ ಎಂಬ ಭಕ್ತರ ಭಾವನೆ ವಿಶೇಷವಾಗಿದೆ. ಇನ್ನೂ ಎರಡು ದಿನಗಳಲ್ಲಿ ನಡೆಯಲಿರುವ ಐತಿಹಾಸಿಕ ಹೂವಿನ ಕರಗ ಶಕ್ತ್ಯೋತ್ಸವಕ್ಕೆ ಸಕಲ ಸಿದ್ಧತೆಗಳು ಜೋರಾಗಿದೆ. ಏಪ್ರಿಲ್‌ 1ರಂದು ನಡೆಯುವ ಕರಗ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

RELATED ARTICLES

Latest News