Sunday, April 12, 2026
Homeಇದೀಗ ಬಂದ ಸುದ್ದಿರಾತ್ರಿ ಒಳಗೆ GBA ಆಸ್ತಿ ತೆರಿಗೆ ಪಾವತಿಸಿ, ದಂಡ, ಬಡ್ಡಿಯಿಂದ ಮುಕ್ತರಾಗಿ

ರಾತ್ರಿ ಒಳಗೆ GBA ಆಸ್ತಿ ತೆರಿಗೆ ಪಾವತಿಸಿ, ದಂಡ, ಬಡ್ಡಿಯಿಂದ ಮುಕ್ತರಾಗಿ

ಬೆಂಗಳೂರು, ಮಾ.31- ನೀವು ಇನ್ನು ನಿಮ ಆಸ್ತಿ ತೆರಿಗೆ ಪಾವತಿಸಿಲ್ಲವೇ? ಹಾಗಾದರೆ ಇಂದೇ ಹೋಗಿ ತೆರಿಗೆ ಪಾವತಿಸಿ ದಂಡ ತಪ್ಪಿಸಿಕೊಳ್ಳಿ… ಹೌದು ಇಂದು ರಾತ್ರಿಯವರೆಗೆ ಆಸ್ತಿ ತೆರಿಗೆ ಯಾವುದೇ ದಂಡವಿಲ್ಲದೆ ತೆರಿಗೆ ಪಾವತಿಸಲು ಪಂಚ ಪಾಲಿಕೆಗಳು ಅವಕಾಶ ಮಾಡಿಕೊಟ್ಟಿವೆ.

ಆಸ್ತಿ ತೆರಿಗೆ ಪಾವತಿಗೆ ಇಂದು ಕೊನೆಯ ದಿನ. ನೀವು ನಿಮ ಅಸ್ತಿ ತೆರಿಗೆ ಪಾವತಿಸಿದರೆ ಯಾವುದೇ ಬಡ್ಡಿ ಹಾಗೂ ದಂಡ ಇರುವುದಿಲ್ಲ. ಆದರೆ ಇಂದು ಪಾವತಿ ಮಾಡದಿದ್ದರೆ, ನಾಳೆಯಿಂದ ಬಡ್ಡಿ ಮತ್ತು ದಂಡ ಸಮೇತ ತೆರಿಗೆ ಕಟ್ಟಬೇಕಾಗುತ್ತದೆ ಇರಲಿ ಎಚ್ಚರಿ.
ನಗರದ ಎಲ್ಲಾ ನಗರಪಾಲಿಕೆ ಕಚೇರಿಗಳು ಇಂದು ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತವೆ. ನಾಗರಿಕರು ನೇರವಾಗಿ ತೆರಳಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಇದೇ ವೇಳೆ, ಆನ್‌ಲೈನ್‌ ಮೂಲಕವೂ ಇಂದು ರಾತ್ರಿ 11:59ರವರೆಗೆ ಆಸ್ತಿ ತೆರಿಗೆ ಪಾವತಿ ಮಾಡಬಹುದು ಎಂದು ಜಿಬಿಎ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಮಾಹಿತಿ ನೀಡಿದ್ದಾರೆ. ಕೆಲ ವಿಶೇಷ ಸಂದರ್ಭಗಳಲ್ಲಿ ಹಸ್ತಚಾಲಿತ ಡಿಮಾಂಡ್‌ ಡ್ರಾಫ್‌್ಟ ಹಾಗೂ ಭಾಗಶಃ ಪಾವತಿಗೂ ಅವಕಾಶ ನೀಡಲಾಗಿದೆ.ಹಿಂದಿನ ಪಾವತಿ ಆನ್‌ಲೈನ್‌ನಲ್ಲಿ ತೋರಿಸದಿರುವುದು, ತಾಂತ್ರಿಕ ಸಮಸ್ಯೆಗಳು ಅಥವಾ ಸರ್ಕಾರಿ ಸಂಸ್ಥೆಗಳ ಪಾವತಿಗಳಂತಹ ಸಂದರ್ಭಗಳಲ್ಲಿ ಈ ಸೌಲಭ್ಯ ಲಭ್ಯವಿದೆ.ಹೀಗಾಗಿ, ನಾಗರಿಕರು ಇಂದೆ ತಮ್ಮ ಆಸ್ತಿ ತೆರಿಗೆ ಪಾವತಿಸಿ, ಅನಗತ್ಯ ದಂಡ ಹಾಗೂ ಬಡ್ಡಿಯಿಂದ ತಪ್ಪಿಸಿಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News