Tuesday, April 14, 2026
Homeರಾಷ್ಟ್ರೀಯವಾಣಿಜ್ಯ ಸಿಲೆಂಡರ್‌ ದರ ಏರಿಕೆ

ವಾಣಿಜ್ಯ ಸಿಲೆಂಡರ್‌ ದರ ಏರಿಕೆ

ನವದೆಹಲಿ,ಏ.1-ಹೋಟೆಲ್‌ ಹಾಗೂ ಉಪಹಾರ ಗೃಹಗಳಲ್ಲಿ ಬಳಸುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ರೂ. 195.50 ಏರಿಕೆಯಾಗಿದೆ. ಈಗ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ದೆಹಲಿನಲ್ಲಿ ರೂ. 2,078.50 ಆಗಿದೆ.ಆದರೆ ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌‍, ಭಾರತ್‌ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಅಂತಾರಾಷ್ಟ್ರೀಯ ಮೌಲ್ಯ ಹಾಗೂ ವಿನಿಮಯ ದರ ಆಧಾರದಲ್ಲಿ ಬೆಲೆ ಪರಿಷ್ಕರಿಸುತ್ತವೆ. ಈಗಾಗಲೆ ಎಲ್‌ಪಿಜಿ ಸಮಸ್ಯ ತಲೆದೋರಿದ್ದು,ಈ ನಡುವೆ ವಾಣಿಜ್ಯ ಸಿಲೆಂಡರ್‌ ಬೆಲೆ ಏರಿಕೆಯು ಸೇವಾ ವಲಯಕ್ಕೆ ಭಾರಿ ಹೊಡೆತ ನೀಡಿದೆ.

ಪಶ್ಚಿಮ ಏಷ್ಯಾದ ಯುದ್ಧದ ಪರಿಣಾಮ ಜಾಗತಿಕ ತೈಲ ಬೆಲೆಗಳು ಸುಮಾರು 50% ಏರಿಕೆಯಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಕಳೆದ ವರ್ಷ ಮಾರ್ಚ್‌ನಲ್ಲಿ ರೂ. 2 ಇಳಿಕೆಯಾಗಿದ ಬಳಿಕ ಸ್ಥಿರವಾಗಿವೆ. ದೆಹಲಿನಲ್ಲಿ ಪೆಟ್ರೋಲ್‌ ರೂ. 94.72 ಮತ್ತು ಡೀಸೆಲ್‌ ರೂ. 87.62 ಪ್ರತಿ ಲೀಟರ್‌ಗೆ ಲಭ್ಯವಿದೆ.

RELATED ARTICLES

Latest News