Monday, April 13, 2026
Homeಮನರಂಜನೆಸಿಂಪಲ್‌ಸ್ಟಾರ್‌ ರಕ್ಷಿತ್‌ಶೆಟ್ಟಿಗೆ 25 ಲಕ್ಷ ದಂಡ

ಸಿಂಪಲ್‌ಸ್ಟಾರ್‌ ರಕ್ಷಿತ್‌ಶೆಟ್ಟಿಗೆ 25 ಲಕ್ಷ ದಂಡ

ನವದೆಹಲಿ,ಏ.1- ಕಾಪಿರೈಟ್‌ ಹಿನ್ನೆಲೆಯಲ್ಲಿ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿಗೆ ದೆಹಲಿ ಹೈಕೋರ್ಟ್‌ 25 ಲಕ್ಷ ರೂ. ದಂಡ ವಿಧಿಸಿದೆ.
ತಮ ಒಡೆತನದ ಪರಂವಾ ಸ್ಟುಡಿಯೋಸ್‌‍ ಸಂಸ್ಥೆಯಡಿ ನಟ, ನಿರ್ಮಾಪಕ ರಕ್ಷಿತ್‌ ಶೆಟ್ಟಿ ಅವರು ದೂಡ್‌ಪೇಡಾ ದಿಗಂತ್‌ ಹಾಗೂ ಅಚ್ಯುತ್‌ಕುಮಾರ್‌ ಮುಖ್ಯ ಪಾತ್ರಗಳಲ್ಲಿದ್ದ ಬ್ಯಾಚುಲರ್‌ ಪಾರ್ಟಿ ಚಿತ್ರಕ್ಕೆ ಕಾಪಿರೈಟ್‌ ಪಡೆಯದೆ ಲಿರಿಕ್‌್ಸ ಗಳನ್ನು ಬಳಸಿಕೊಂಡಿದ್ದರಿಂದ ರಕ್ಷಿತ್‌ಶೆಟ್ಟಿಗೆ ಹೈಕೋರ್ಟ್‌ ಶಾಕ್‌ ನೀಡಿದೆ.

ಬ್ಯಾಚುಲರ್‌ ಪಾರ್ಟಿ ಚಿತ್ರಕ್ಕೆ ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆ ಬಳಿ ಇದ್ದ ಗೀತೆಗಳ ಹಕ್ಕುಗಳನ್ನು ಪಡೆಯದೆ ಶಂಕರ್‌ನಾಗ್‌ ನಟಿಸಿದ್ದ ನ್ಯಾಯ ಎಲ್ಲಿದೆ ಚಿತ್ರದ ಟೈಟಲ್‌ ಗೀತೆಯಾದ ನ್ಯಾಯ ಎಲ್ಲಿದೆ? ಹಾಗೂ ಜೈಜಗದೀಶ್‌, ಲಕ್ಷ್ಮಿ ನಟಿಸಿದ್ದ ಗಾಳಿಮಾತು ಸಿನಿಮಾದ ಒಮೆ ನಿನ್ನನ್ನು ಗೀತೆಯನ್ನು ಬಳಸಿಕೊಂಡಿತ್ತು. ನಮ ಒಪ್ಪಿಗೆ ಪಡೆಯದೆ ನಿರ್ಮಾಪಕ ರಕ್ಷಿತ್‌ ಶೆಟ್ಟಿ ಅವರು ಈ ಗೀತೆಗಳ ಸಾಲನ್ನು ಬಳಸಿಕೊಂಡಿದ್ದಾರೆ ಎಂದು ಎಂಆರ್‌ಟಿ ಸಂಸ್ಥೆಯು ದೂರು ದಾಖಲಿಸಿತ್ತು.

ನ್ಯಾಯಾಲಯದ ವಿಚಾರಣೆ ವೇಳೆ ರಕ್ಷಿತ್‌ ಶೆಟ್ಟಿ ತಂಡವು ವಾದ ಮಂಡಿಸುವಾಗ ಈ ಎರಡು ಹಾಡುಗಳು ಕೇವಲ 7 ಸೆಕೆಂಡ್‌ ಹಾಗೂ 31 ಸೆಕೆಂಡ್‌ ಮಾತ್ರ ಬಳಸಿಕೊಳ್ಳಲಾಗಿದೆ. ಇದು ಅತ್ಯಂತ ಕಡಿಮೆ ಅವಧಿ ಆಗಿರುವುದರಿಂದ ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಿಲ್ಲ ಎಂದು ವಾದಿಸಿದ್ದರು. ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಹಾಡುಗಳು ಕಾಕತಾಳೀಯವಾಗಿರದೆ, ಸಿನಿಮಾಕ್ಕೆ ಪೂರಕ ಹಾಗೂ ಹಾಗೂ ಲಾಭದ ಕಾರಣಕ್ಕಾಗಿ ಬಳಸಿಕೊಂಡಿರುವುದರಿಂದ ಇದು ಹಕ್ಕುಸ್ವಾಮ್ಯವಾಗಿದೆ ಎಂದು ದೆಹಲಿ ಹೈಕೋರ್ಟ್‌ ತೀರ್ಪು ನೀಡಿದೆ. ಚಿತ್ರದಲ್ಲಿ ನಾಯಕ ಸಂಕಷ್ಟದಲ್ಲಿದ್ದಾಗ ಈ ಗೀತೆಗಳ ತುಣುಕನ್ನು ಬಳಸಲಾಗಿದೆ.

ಹಕ್ಕುಸ್ವಾಮ್ಯದ ಉಲ್ಲಂಘನೆ ಸಲುವಾಗಿ ಈಗಾಗಲೇ ಠೇವಣಿ ಇಟ್ಟಿರುವ 20 ಲಕ್ಷ ರೂ.ಗಳನ್ನು ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆಗೆ ನೀಡಬೇಕು ಹಾಗೂ ನ್ಯಾಯಾಲಯದ ಆದೇಶ ಪಾಲಿಸಿ ಸಕಾಲಕ್ಕೆ ಹಣ ಪಾವತಿಸದ ಕಾರಣಕ್ಕೆ 5 ಲಕ್ಷ ರೂ.ಗಳನ್ನು ದಂಡದ ರೂಪದಲ್ಲಿ ಕಟ್ಟಬೇಕೆಂದು ಕೋರ್ಟ್‌ ಆದೇಶಿಸಿದೆ.

RELATED ARTICLES

Latest News