Sunday, April 12, 2026
Homeಇದೀಗ ಬಂದ ಸುದ್ದಿಪ್ರತಿಷ್ಠಿತ ಕಂಪೆನಿಗಳ ಬ್ರ್ಯಾಂಡ್‌ ಹೆಸರಿನಲ್ಲಿ ವಂಚನೆ, 5 ಅಂಗಡಿಗಳ ಮೇಲೆ ದಾಳಿ : 25 ಲಕ್ಷ...

ಪ್ರತಿಷ್ಠಿತ ಕಂಪೆನಿಗಳ ಬ್ರ್ಯಾಂಡ್‌ ಹೆಸರಿನಲ್ಲಿ ವಂಚನೆ, 5 ಅಂಗಡಿಗಳ ಮೇಲೆ ದಾಳಿ : 25 ಲಕ್ಷ ಮೌಲ್ಯ 670 ವಾಚ್‌ಗಳ ವಶ

ಬೆಂಗಳೂರು,ಮಾ.31- ಪ್ರತಿಷ್ಠಿತ ವಾಚ್‌ ಬ್ರ್ಯಾಂಡ್‌ಗಳಾದ ಸೋನಾಟಾ, ಟೈಟಾನ್‌, ಫಾಸ್ಟ್‌ಟ್ರ್ಯಾಕ್‌ ವಾಚ್‌ಗಳ ಬಿಡಿ ಭಾಗಗಳು ಹಾಗೂ ವಾಚ್‌ಗಳನ್ನು ನಕಲಿಯಾಗಿ ಮಾರಾಟ ಮಾಡುತ್ತಿದ್ದ 5 ಅಂಗಡಿಗಳ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ದಾಳಿ ಮಾಡಿ 5 ಮಂದಿಯನ್ನು ಬಂಧಿಸಿ 25 ಲಕ್ಷ ಮೌಲ್ಯದ 670 ವಾಚ್‌ ಹಾಗೂ 414 ಬಿಡಿ ಭಾಗಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಚಿಕ್ಕಪೇಟೆ, ಸುಲ್ತಾನ್‌ಪಾಳ್ಯ ಮುಖ್ಯರಸ್ತೆ, ಗಂಗಾನಗರ, ದಿಣ್ಣೂರು ಮುಖ್ಯರಸ್ತೆಯಲ್ಲಿರುವ ವಾಚ್‌ ಅಂಗಡಿಗಳಲ್ಲಿ ಅಸಲಿ ಬ್ರ್ಯಾಂಡ್‌ಗಳ ವಾಚ್‌ಗಳು ಹಾಗೂ ಬಿಡಿ ಭಾಗಗಳನ್ನು ನಕಲಿ ಮಾಡಿ ಅಸಲಿ ಎಂದು ನಂಬಿಸಿ ಮಾರಾಟ ಮಾಡುತ್ತಿರುವುದರ ಬಗ್ಗೆ ಟೈಟಾನ್‌ ಕಂಪನಿಯ ಅಧಿಕೃತ ಕಾನೂನು ಪ್ರತಿನಿಧಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆಸಿ ವಾಚ್‌ಗಳನ್ನು ಜಪ್ತಿ ಮಾಡಿದ್ದಾರೆ.
ಸದ್ಯಕ್ಕೆ ನಗರದ 5 ಅಂಗಡಿಗಳ ಮೇಲೆ ದಾಳಿ ಮಾಡಿ ನಕಲಿ ವಾಚ್‌ಗಳು ಹಾಗೂ ಬಿಡಿ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರ ಪೊಲೀಸ್‌‍ ಆಯುಕ್ತರಾದ ಸೀಮಂತ್‌ಕುಮಾರ್‌ ಸಿಂಗ್‌ ಅವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌‍ ಆಯುಕ್ತರಾದ ಅಜಯ್‌ ಹಿಲೋರಿ, ಶ್ರೀ ರಾಜಾ ಇಮಾಮ್‌ ಕಾಸಿಂ (ಅಪರಾಧ-2) ಅವರ ನೇತೃತ್ವದಲ್ಲಿ ಸಿಸಿಬಿಯ ಆರ್ಥಿಕ ಅಪರಾಧ ದಳದ ಸಹಾಯಕ ಪೊಲೀಸ್‌‍ ಆಯುಕ್ತರಾದ ಕೆ.ಮಹಾನಂದ್‌ ಮತ್ತು ಪೊಲೀಸ್‌‍ ಇನ್‌್ಸಪೆಕ್ಟರ್‌ ಸಂತೋಷ್‌ರಾಮ್‌ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಾಚ್‌ಗಳನ್ನು ಎಲ್ಲಿ ತಯಾರು ಮಾಡಲಾಗುತ್ತಿತ್ತು, ಹೇಗೆ ಸರಬರಾಜು ಮಾಡಿ ಅಂಗಡಿಗಳಲ್ಲಿಟ್ಟು ಜನರಿಗೆ ಅಸಲಿ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದ ಜಾಲದ ಹಿಂದೆ ಯಾರಿದ್ದಾರೆ ಎಂಬುವುದನ್ನು ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಲಾಗುವುದೆಂದು ನಗರ ಪೊಲೀಸ್‌‍ ಆಯುಕ್ತರಾದ ಸೀಮಂತ್‌ಕುಮಾರ್‌ ಸಿಂಗ್‌ ಅವರು ತಿಳಿಸಿದ್ದಾರೆ.

RELATED ARTICLES

Latest News