Sunday, April 12, 2026
Homeರಾಜ್ಯಲೋಕಾಯುಕ್ತ ಬಲೆಗೆ ಬಿದ್ದ ಹುಬ್ಬಳ್ಳಿ ವಾಣಿಜ್ಯ ತೆರಿಗೆ ಡಿಸಿ

ಲೋಕಾಯುಕ್ತ ಬಲೆಗೆ ಬಿದ್ದ ಹುಬ್ಬಳ್ಳಿ ವಾಣಿಜ್ಯ ತೆರಿಗೆ ಡಿಸಿ

ಹುಬ್ಬಳ್ಳಿ,ಮಾ.30-ನಗರದಲ್ಲಿ ವಾಣಿಜ್ಯ ತೆರಿಗೆ ಉಪ ಆಯುಕ್ತ ಭರತ್‌ ಕುಮಾರ್‌ ಹೆಗ್ಗಡೆ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಭರತ್‌ಕುಮಾರ ಅವರು ದೂರುದಾರ ವಿಶ್ವಜಿತ್‌ ನಾಯಕ್‌ಎಂಬುವವರಿಂದ 6 ಲಕ್ಷ ರೂ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದಿದ್ದಾರೆ.

ಕಳೆದ 2019 ರಲ್ಲಿ 8 ಟಿಪ್ಪರ್‌ ಖರೀದಿಸಿದ್ದ ವಿಶ್ವಜೀತ್‌ ನಾಯಕ್‌ ಅವರಿಗೆ ಇನ್ಪುಟ್‌ ಟ್ಯಾಕ್‌್ಸ ಕ್ರೆಡಿಟ್‌ 60 ಲಕ್ಷ ಬಂದಿತ್ತು. ಅದರಲ್ಲಿ 34 ಲಕ್ಷ ಇನ್ಪುಟ್‌ ಟ್ಯಾಕ್‌್ಸ ಕ್ರೆಡಿಟ್‌ ಪಡೆದುಕೊಂಡಿದ್ದರು. ವಿಶ್ವಜಿತ್‌ ನಾಯಕರ ಪಡೆದುಕೊಂಡ ಇನ್ಪುಟ್‌ ಟ್ಯಾಕ್‌್ಸ ಕಾನೂನು ಬಾಹಿರ ಎಂದು ದೂರು ದಾಖಲಿಸಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು. ಅಂಕೋಲಾ ಮೂಲದ ವಿಶ್ವಜಿತ್‌ ನಾಯಕರ ವಿರುದ್ಧ ದೂರು ದಾಖಲಿಸಿ ವಿಚಾರಣೆ ನಡೆಸುತ್ತಿದ್ದರು.

ಇನ್ಪುಟ್‌ ಟ್ಯಾಕ್‌್ಸ ಕ್ರೆಡಿಟ್‌ ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದಾಗಿ ಕೇಸ್‌‍ ದಾಖಲಾಗಿತ್ತು. ನಾಲ್ಕು ಬಾರಿ ವಿಚಾರಣೆ ಕರೆದಿದ್ದರು, ಇಂದು ಐದನೇ ಬಾರಿಗೆ ವಿಚಾರಣೆ ಇತ್ತು, ವಿಚಾರಣೆಗೆ ಬರುವಾಗ ಹಣ ತೆಗೆದುಕೊಂಡ ಬನ್ನಿ, ಕೇಸ್‌‍ ಕ್ಲೋಸ್‌‍ ಮಾಡುವುದಾಗಿ ಹೇಳಿದ್ದರು.ಇದರ ಬಗ್ಗೆ ಲೋಕಾಗೆ ದೂರು ನೀಡಲಾಗಿತ್ತು.

ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್‌ ದೇವರಾಜ್‌. ಲೋಕಾ ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ, ಪ್ರದೀಪ್‌ ಕುಮಾರ್‌, ಇನ್ಸ್ಪೆಕ್ಟರ್‌ ರಾಜು ನೇತೃತ್ವದ ತಂಡದಿಂದ ನಡೆದ ಕಾರ್ಯಾಚರಣೆ ವೇಳೆ 6 ಲಕ್ಷ ರೂ ಲಂಚ ಪಡೆಯುವಾಗ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

RELATED ARTICLES

Latest News