ಟೆಹ್ರಾನ್, ಮಾ.31- ಇರಾನ್‌ನ ಇಸ್ಪಹಾನ್ ನಗರದಲ್ಲಿರುವ ಮಿಲಿಟರಿ ಕೇಂದ್ರದ ಮೇಲೆ ಅಮೆರಿಕ ಸುಮಾರು 907 ಕೆಜಿ ಬಂಕರ್ ಬಸ್ಟರ್ ಬಾಂಬ್‌ಗಳಿಂದದಾಳಿ ನಡೆಸಿದೆ. ಇಂದು ಮುಂಜಾನೆ ಇಸ್ಫಹಾನ್ ನಗರದಲ್ಲಿ ಈ ಸ್ಫೋಟ ಸಂಭವಿಸಿದೆ. ಈ ದೃಶ್ಯಾವಳಿಗಳು ಸರಣಿ ಸ್ಫೋಟ ಸಂಭವಿಸುವುದನ್ನು ಟ್ರಂಪ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇರಾನ್‌ನ ಇಸ್ಫಹಾನ್ ನಗರದಲ್ಲಿರುವ ಬದ್‌್ರ ಮಿಲಿಟರಿ ವಾಯುನೆಲೆಯ ಮೇಲೆ ಅಮೆರಿಕ ಇಸ್ರೇಲ್ ನಡೆಸಿದ ಜಂಟಿ ದಾಳಿ ಎಂದು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ. ಒಂದು ದಿನದ ಹಿಂದಷ್ಟೇ ಅಧ್ಯಕ್ಷ ಟ್ರಂಪ್ ಅವರು ಇರಾನ್‌ಗೆ ಎಚ್ಚರಿಕೆ ನೀಡಿದ್ದರು.
ಇರಾನ್ ಒಂದು ವೇಳೆ ಯುದ್ಧ ಕೊನೆಗೊಳಿಸುವ ಒಪ್ಪಂದಕ್ಕೆ ಶೀಘ್ರವೇ ಬರದಿದ್ದರೆ, ಆ ದೇಶದ ಇಂಧನ ಮೂಲಗಳು, ಪರಮಾಣು ಕೇಂದ್ರಗಳು ಮತ್ತು ನೀರು ಸರಬರಾಜು ಘಟಕಗಳೂ ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನೂ ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಕೆಗೆ ಅತ್ಯಂತ ಹತ್ತಿರದಲ್ಲಿದೆ ಎಂದು ಅಮೆರಿಕ ಮತ್ತು ಇಸ್ರೇಲ್ ಪದೇ ಪದೇ ಆರೋಪಿಸುತ್ತಿವೆ.
ಆದರೆ ವಿಶ್ವಸಂಸ್ಥೆಯ ಪರಮಾಣು ಕಣ್ಣಾವಲು ಸಂಸ್ಥೆಯು ಈ ಆರೋಪವನ್ನು ಇನ್ನು ಪುಷ್ಟಿಕರಿಸಿಲ್ಲ. ಕಳೆದ ವರ್ಷವೂ ಇರಾನ್‌ನ ಕೆಲವು ಪ್ರಮುಖ ಕೇಂದ್ರಗಳ ಮೇಲೆ ಟ್ರಂಪ್ ದಾಳಿ ನಡೆಸಿದ್ದರು. ಈಗಿನ ಈ ದಾಳಿಯು ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.
