Sunday, April 12, 2026
Homeಇದೀಗ ಬಂದ ಸುದ್ದಿRCB ಪಂದ್ಯಾವಳಿ ವೇಳೆ ಮೊಬೈಲ್‌ ಕದ್ದಿದ್ದ ಆರೋಪಿ, ಸಹಚರರ ಬಂಧನ

RCB ಪಂದ್ಯಾವಳಿ ವೇಳೆ ಮೊಬೈಲ್‌ ಕದ್ದಿದ್ದ ಆರೋಪಿ, ಸಹಚರರ ಬಂಧನ

ಬೆಂಗಳೂರು, ಮಾ.31- ಹೊರಗಿನಿಂದ ಬಂದು ನಗರದ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿ ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಐಪಿಎಲ್‌ ಪಂದ್ಯಾವಳಿಯ ವೇಳೆ ಹಲವಾರು ಮೊಬೈಲ್‌ಗಳನ್ನು ಕಳ್ಳತನ ಮಾಡಿದ್ದ ಆರೋಪಿ ಹಾಗೂ ಆತನ ಸಹಚರರನ್ನು ಕಬ್ಬನ್‌ಪಾರ್ಕ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 18 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 21 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾರ್ಚ್‌ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಹೈದರಾಬಾದ್‌ನ ಸನ್‌ ರೈಸರ್‌ರ‍ಸ ತಂಡಗಳ ನಡುವೆ ಐಪಿಎಲ್‌ ಉದ್ಘಾಟನಾ ಪಂದ್ಯಾವಳಿ ನಡೆದಿತ್ತು. ಅಂದು ಕ್ರೀಡಾಂಗಣ, ಮೆಟ್ರೋ ನಿಲ್ದಾಣ, ಬಸ್‌‍ನಿಲ್ದಾಣದಲ್ಲಿ ವ್ಯಾಪಕವಾದ ಜನ ದಟ್ಟಣೆ ಸೃಷ್ಟಿಯಾಗಿತ್ತು.

ಕಬ್ಬನ್‌ಪಾರ್ಕ ಪೊಲೀಸ್‌‍ ಠಾಣೆಯಲ್ಲಿ ಸುಮಾರು 21 ಪ್ರಕರಣಗಳು ದಾಖಲಾಗಿದ್ದವು. ಸಾಮಾಜಿಕ ಜಾಲತಾಣದಲ್ಲಿ ಮೊಬೈಲ್‌ ಕಳ್ಳತನದ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದ್ದು, ಅವು ವ್ಯಾಪಕ ವೈರಲ್‌ ಆಗಿದ್ದವು. ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯೊಬ್ಬನನ್ನು ಬಂಧಿಸಿದರು. ನಗರದ ಲಾಡ್‌್ಜಗಳಲ್ಲಿ ರೂಮ್‌ ಮಾಡಿ ತಾವು ತಂಗಿದ್ದು, ಮೊಬೈಲ್‌ ಕಳ್ಳತನಕ್ಕೆ ಜನದಟ್ಟಣೆಯ ಪ್ರದೇಶಗಳಲ್ಲಿ ಅಪ್ರಾಪ್ತ ಬಾಲಕರನ್ನು ಬಳಸಿಕೊಂಡಿದ್ದಾಗಿ ಆರೋಪಿ ವಿಚಾರಣಾ ಸಮಯದಲ್ಲಿ ತಿಳಿಸಿದ್ದಾನೆ.ಪೊಲೀಸರು ಕೆಲವು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ. ಪರಾರಿಯಾಗಿರುವ ಉಳಿದ ಆರೋಪಿಗಳಾಗಿ ಶೋಧ ನಡೆಸುತ್ತಿದ್ದಾರೆ.

ಜಾಗೃತರಾಗಿರಿ:
ಮೊಬೈಲ್‌ ಕಳ್ಳತನದ ಬಗ್ಗೆ ಮುಂಜಾಗ್ರತೆ ವಹಿಸುವಂತೆ ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌ಸಿಂಗ್‌ ಸಲಹೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ವಿಶೇಷವಾಗಿ ಐಪಿಎಲ್‌ ಪಂದ್ಯಾವಳಿಗಳಂತಹ ಜನ ದಟ್ಟಣೆಯ ಪ್ರೇಶಗಳಿಗೆ ಹೋಗುವಾಗ ತಮ ವೈಯಕ್ತಿಕ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೊಬೈಲ್‌, ಪರ್ಸ್‌ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

RELATED ARTICLES

Latest News