Sunday, April 12, 2026
Homeರಾಜ್ಯದಾವಣಗೆರೆ ದಕ್ಷಿಣ : ಕಾಂಗ್ರೆಸ್‌‍ ವಿರುದ್ಧ ಅಲ್ಪಸಂಖ್ಯಾತರ ಪ್ರಚಾರ

ದಾವಣಗೆರೆ ದಕ್ಷಿಣ : ಕಾಂಗ್ರೆಸ್‌‍ ವಿರುದ್ಧ ಅಲ್ಪಸಂಖ್ಯಾತರ ಪ್ರಚಾರ

ಬೆಂಗಳೂರು,ಮಾ.30- ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌‍ಗೆ ಸವಾಲಿನ ಪರಿಸ್ಥಿತಿಗಳು ಎದುರಾಗಲಾರಂಭಿಸಿವೆ. ದಾವಣಗೆರೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಕಾಂಗ್ರೆಸ್‌‍ ಪಕ್ಷದಿಂದ ಮುಸಲ್ಮಾನರಿಗೆ ಅಪಮಾನವಾಗಿದೆ. ಹೀಗಾಗಿ ಕಾಂಗ್ರೆಸ್‌‍ ಪಕ್ಷವನ್ನು ತಿರಸ್ಕಾರ ಮಾಡಿ ಎಂದು ಪ್ರಚಾರ ಮಾಡಲಾರಂಭಿಸಿದ್ದಾರೆ.

ಕಾಂಗ್ರೆಸ್‌‍ನ ಪಾಲಿಕೆ ಸದಸ್ಯರಾಗಿದ್ದ ಅಸ್ಘರ್‌ ಅವರು ತಮ್ಮ ಸಹೋದರಿ ಟಿ.ಜಾದೀನಾ ಆಪಾ ಅವರನ್ನು ಕಣಕ್ಕಿಳಿಸಿದ್ದು, 25 ಮಂದಿ ಅಭ್ಯರ್ಥಿಗಳ ಪೈಕಿ ತಮ್ಮ ಸಹೋದರಿ ಏಕೈಕ ಮಹಿಳೆಯಾಗಿದ್ದಾರೆ. ಆಕೆಯನ್ನು ಗೆಲ್ಲಿಸಿ ಈ ಹಿಂದೆ ನಾನು ದಾವಣಗೆರೆ ನಗರಸಭೆ ಸದಸ್ಯನಾಗಿ ಸಾಕಷ್ಟು ಉತ್ತಮ ಸೇವೆ ಮಾಡಿದ್ದೇನೆ. ಅದಕ್ಕೆ ಮನ್ನಣೆ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೇ ನಿಲ್ಲದ ಅಸ್ಘರ್‌ ಒಂದು ವೇಳೆ ನಮಗೆ ಮತ ಹಾಕದಿದ್ದರೂ ಪರವಾಗಿಲ್ಲ. ಕಾಂಗ್ರೆಸ್‌‍ ಪಕ್ಷಕ್ಕೆ ಮಾತ್ರ ಬೆಂಬಲ ನೀಡಬೇಡಿ. 40 ವರ್ಷಗಳಿಂದಲೂ ದಾವಣಗೆರೆ ಅಭಿವೃದ್ಧಿ ಕುಂಠಿತವಾಗಲು ಸ್ವಂತ ಪಾರಂಪರ್ಯ ರಾಜಕಾರಣವೇ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ.

ಮುಸಲಾನರಿಗೆ ಟಿಕೆಟ್‌ ನೀಡುವಂತೆ ಕಾಂಗ್ರೆಸ್‌‍ ಪಕ್ಷಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್‌ ಅನ್ನಾಗಿ ಮಾತ್ರ ಬಳಸಿಕೊಳ್ಳುವ ಕಾಂಗ್ರೆಸ್‌‍ ಟಿಕೆಟ್‌ನೀಡುವಾಗ ಅಪಮಾನ ಮಾಡಿದ. ಇದಕ್ಕೆ ತಕ್ಕ ಪಾಠ ಕಲಿಸಲೇಬೇಕು. ಯಾವ ಪಕ್ಷಕ್ಕಾದರೂ ಬೆಂಬಲ ನೀಡಿ. ಆದರೆ ಕಾಂಗ್ರೆಸ್‌‍ಗೆ ಮತ ಹಾಕಬೇಡಿ ಎಂದು ಹೇಳಿಕೊಂಡು ಬರುತ್ತಿದ್ದಾರೆ.

ದಾವಣಗೆರೆಯಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಮುಸಲಾನರು ಚದುರಿದರೆ ಕಾಂಗ್ರೆಸ್‌‍ ಪಕ್ಷಕ್ಕೆ ಹಾನಿಯಾಗುವುದು ಖಚಿತ ಎನ್ನಲಾಗುತ್ತಿದೆ. ಚುನಾವಣಾ ಕಣದಲ್ಲಿರುವ ಬಹುತೇಕ ಪಕ್ಷೇತರಾಗಿರುವ ಅಲ್ಪಸಂಖ್ಯಾತ ಅಭ್ಯರ್ಥಿಗಳೇ ಕಾಂಗ್ರೆಸ್‌‍ ವಿರುದ್ದ ಪ್ರಚಾರ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಬಾಗಲಕೋಟೆಯಲ್ಲಿ ಮೂಲಸೌಲಭ್ಯಗಳ ಕೊರತೆಯ ಕಾರಣಕ್ಕಾಗಿ ಕೆಲವು ಪ್ರದೇಶಗಳು ಚುನಾವಣೆಯನ್ನೇ ಬಹಿಷ್ಕರಿಸಲು ಮುಂದಾಗಿವೆ. ಬಾಗಲಕೋಟೆ ನಗರದ ಟೀಚರ್‌ರ‍ಸ ಕಾಲೋನಿಯಲ್ಲಿ 500ಕ್ಕೂ ಹೆಚ್ಚು ಮತದಾರರಿದ್ದಾರೆ. ಆದರೆ ತಮ್ಮ ಪ್ರದೇಶಕ್ಕೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬಡಾವಣೆಯ ಎಲ್ಲಾ ನಿವಾಸಿಗಳು ಒಟ್ಟಾಗಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳುತ್ತಿದ್ದಾರೆ.

ಟೀಚರ್‌ರ‍ಸ ಕಾಲೋನಿ ನಿವಾಸಿಗಳ ಸಂಘದ ಎಸ್‌‍.ಎ.ಹೊಸಮನಿ, ತಮ್ಮ ಕಾಲೋನಿಗೆ ಕುಡಿಯುವ ನೀರಿನ ಸಮಸ್ಯೆ ಬಹಳ ವರ್ಷಗಳಿಂದಲೂ ಇದೆ. ಒಂದೇ ಒಂದು ಬೋರ್‌ವೆಲ್‌ ಇದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೆ ಅದಕ್ಕೆ ಯಾರೂ ಗಮನ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು.

ಒಳಚರಂಡಿ, ಚರಂಡಿ, ಸಿಮೆಂಟ್‌ ರಸ್ತೆಗಳು ಸೇರಿದಂತೆ ಹಲವಾರು ಬೇಡಿಕೆಗಳು ಬಹಳ ದಿನಗಳಿಂದಲೂ ನೆನೆಗುದಿಗೆ ಬಿದ್ದಿವೆ. ಇದಕ್ಕಾಗಿ ನಾವು ಮತದಾನವನ್ನೇ ಬಹಿಷ್ಕಾರ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಬಾಗಲಕೋಟೆಯ ಇತರ ಬಡಾವಣೆಗಳಲ್ಲೂ ಇದೇ ಕೂಗು ಕೇಳಿ ಬರುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್‌‍ ವಿರುದ್ಧ ಅಸಮಾಧಾನ ಹೊರಹಾಕುತ್ತಿವೆ.

ಒಂದೆಡೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿ ಸಮರ್ಥ್‌ ಅವರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ಬಾಗಲಕೋಟೆಯಲ್ಲಿ ಮೂಲಸೌಕರ್ಯಗಳ ಕೊರತೆ ಕಾರಣಕ್ಕೆ ಮತದಾನ ಬಹಿಷ್ಕರಿಸಲಾಗುತ್ತಿದೆ. ಒಟ್ಟಿನಲ್ಲಿ ಚುನಾವಣೆ ಆರಂಭದಲ್ಲಿ ಕಾಂಗ್ರೆಸ್‌‍ಗೆ ಮುಜುಗರದ ಸನ್ನಿವೇಶಗಳು ನಿರ್ಮಾಣವಾಗುತ್ತಿವೆ.

RELATED ARTICLES

Latest News