Saturday, April 11, 2026
Homeಇದೀಗ ಬಂದ ಸುದ್ದಿಮಹಿಳೆಯನ್ನು ಕೊಂದು ಫ್ರಿಡ್ಜ್ ನಲ್ಲಿಟ್ಟಿದ್ದ ನೌಕಾಪಡೆ ಉದ್ಯೋಗಿ

ಮಹಿಳೆಯನ್ನು ಕೊಂದು ಫ್ರಿಡ್ಜ್ ನಲ್ಲಿಟ್ಟಿದ್ದ ನೌಕಾಪಡೆ ಉದ್ಯೋಗಿ

ಹೈದರಾಬಾದ್‌, ಮಾ.30- ತಾನು ಅಕ್ರಮ ಸಂಬಂಧವಿರಿಸಿಕೊಂಡಿದ್ದ ಮಹಿಳೆಯನ್ನು ಕೊಂದು ಆಕೆಯ ಶವವನ್ನು ನೌಕಾಪಡೆಯ ಉದ್ಯೋಗಿಯೊಬ್ಬ ಫ್ರಿಜರ್‌ನಲ್ಲಿಟ್ಟಿದ್ದ ಆಘಾತಕಾರಿ ಘಟನೆ ಆಂಧ್ರದಲ್ಲಿ ನಡೆದಿದೆ. ವಿಶಾಖಪಟ್ಟಣಂ ಜಿಲ್ಲೆಯ ಗಾಜುವಾಕದಲ್ಲಿ ಕೃತ್ಯ ನಡೆದಿದೆ. ಆರೋಪಿಯನ್ನು ವಿಜಯನಗರ ಜಿಲ್ಲೆಯ ಮೂಲದ ರವೀಂದ್ರ ಎಂದು ಗುರುತಿಸಲಾಗಿದೆ.

ಆರೋಪಿ ರವೀಂದ್ರ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಗೊತ್ತಾಗಿದೆ. ಇತ್ತೀಚಿಗೆ ಆರೋಪಿ ರವೀಂದ್ರ ಪತ್ನಿ ತವರು ಮನೆ ಸೇರಿದ್ದರಿಂದ ಮೌನಿಕಾ (28) ಎಂಬ ವಿವಾಹಿತ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಇತ್ತೀಚೆಗೆ, ಮೌನಿಕಾ ಹಣಕ್ಕಾಗಿ ಒತ್ತಡ ಹೇರಲು ಶುರು ಮಾಡಿದ್ದಳು ಎನ್ನಲಾಗಿದೆ ರವೀಂದ್ರನ ಪತ್ನಿ ಕೂಡ ಊರಲ್ಲಿ ಇಲ್ಲದಿದ್ದ ಕಾರಣ ಆಕೆಯನ್ನ ಮನೆಗೆ ಆಹ್ವಾನಿಸಿದ್ದಾನೆ.

ಇವರಿಬ್ಬರ ಭೇಟಿ ವೇಳೆ ವಾಗ್ವಾದ ನಡೆದು ರವೀಂದ್ರ ಮೌನಿಕಾಳನ್ನ ಚಾಕುವಿನಿಂದ ಇರಿದು ಕೊಂದಿದ್ದಾನೆ. ಬಳಿಕ ಆಕೆಯ ದೇಹವನ್ನ ಕತ್ತರಿಸಿ, ಅರ್ಧ ಭಾಗವನ್ನ ಫ್ರಿಡ್‌್ಜನಲ್ಲಿ ಇನ್ನುಳಿದ ಅರ್ಧ ಭಾಗವನ್ನು 1 ಬಂಡಲ್‌ನಲ್ಲಿ ಸುತ್ತಿ ಮನೆಯ ಒಂದು ಮೂಲೆಯಲ್ಲಿ ಬಚ್ಚಿಟ್ಟು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News