ಶ್ರೀನಗರ, ಏ.1: ಜಮ್ಮು-ಕಾಶ್ಮೀರದ ಗಾಂದರ್ಬಲ್ ಜಿಲ್ಲೆಯಲ್ಲಿ ರಾತ್ರಿ ಪೂರ್ತಿ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ. ಪ್ರದೇಶದಲ್ಲಿ ಸಂಶಯಾಸ್ಪದ ಚಲನವಲನ ಕಂಡುಬಂದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಭದ್ರತಾ ಪಡೆಗಳು ಗಾಂದರ್ಬಲ್ ಜಿಲ್ಲೆಯ ಅರಹಾಮಾ ಪ್ರದೇಶದಲ್ಲಿ ಕಂಬಿಂಗ್ ಮತ್ತು ಶೋಧ ಕಾರ್ಯಾಚರಣೆ ಆರಂಭಿಸಿತು.
ನಿಖರ ಗುಪ್ತಚರ ಮಾಹಿತಿಯ ಆಧಾರದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಸಂಯುಕ್ತವಾಗಿ ಈ ಶೋಧ ಕಾರ್ಯಾಚರಣೆ ನಡೆಸಿದವು ಎಂದು ಶ್ರೀನಗರದ ಚಿನಾರ್ ಕಾರ್ಪ್‌್ಸ ಸಾಮಾಜಿಕ ಜಾಲತಾಣ ಎಕ್‌ನಲ್ಲಿ ತಿಳಿಸಿದೆ. ಶೋಧ ಕಾರ್ಯಾಚರಣೆಯ ವೇಳೆ ಎಚ್ಚರಿಕೆಯಿಂದಿದ್ದ ಪಡೆಗಳು ಸಂಶಯಾಸ್ಪದ ಚಟುವಟಿಕೆ ಗಮನಿಸಿದವು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದರು. ಇದಕ್ಕೆ ನಮ ಪಡೆಗಳು ತಕ್ಷಣ ಪ್ರತಿದಾಳಿ ನಡೆಸಿದವು ಎಂದು ಸೇನೆ ತಿಳಿಸಿದೆ.
ಮಧ್ಯೆ ಮಧ್ಯೆ ಗುಂಡಿನ ಚಕಮಕಿಗಳು ನಡೆಯುತ್ತಿದ್ದರೂ, ಪಡೆಗಳು ತಂತ್ರಜ್ಞಾನದೊಂದಿಗೆ ಪ್ರತಿಕ್ರಿಯಿಸಿ ಒಬ್ಬ ಉಗ್ರನನ್ನು ಹೊಡೆದುರುಳಿಸಿವೆ ಎಂದು ಹೇಳಿದೆ. ಈ ಉಗ್ರವಿರೋಧಿ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
