Tuesday, April 14, 2026
Homeರಾಷ್ಟ್ರೀಯವಿದೇಶಿ ದೇಣಿಗೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಪಕ್ಷಗಳ ಪ್ರತಿಭಟನೆ

ವಿದೇಶಿ ದೇಣಿಗೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಪಕ್ಷಗಳ ಪ್ರತಿಭಟನೆ

ನವದೆಹಲಿ, ಏ. 1 (ಪಿಟಿಐ) ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ ವಿರುದ್ಧ ಕಾಂಗ್ರೆಸ್‌‍ ನೇತೃತ್ವದಲ್ಲಿ ಹಲವಾರು ವಿರೋಧ ಪಕ್ಷದ ಸಂಸದರು ಇಂದು ಸಂಸತ್‌ ಭವನದ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿದರು ಮತ್ತು ಪ್ರಸ್ತಾವಿತ ಶಾಸನವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಎನ್‌ಜಿಒಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸುವುದನ್ನು ನಿಲ್ಲಿಸಿ ಎಂದು ಬರೆದ ಬೃಹತ್‌ ಬ್ಯಾನರ್‌ ಅನ್ನು ಪ್ರದರ್ಶಿಸಿದ ಸಂಸದರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಮಸೂದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಹಲವಾರು ಕಾಂಗ್ರೆಸ್‌‍ ಸಂಸದರು, ಎಸ್‌‍ಪಿಯ ಡಿಂಪಲ್‌ ಯಾದವ್‌ ಮತ್ತು ರಾಮ್‌ ಗೋಪಾಲ್‌ ಯಾದವ್‌‍, ಐಯುಎಂಎಲ್‌ನ ಇಟಿ ಮೊಹಮ್ಮದ್‌ ಬಶೀರ್, ಎನ್‌ಸಿಪಿ (ಎಸ್‌‍ಪಿ) ಯ ಸುಪ್ರಿಯಾ ಸುಳೆ ಮತ್ತು ಆರ್‌ಎಸ್‌‍ಪಿಯ ಎನ್‌ಕೆ ಪ್ರೇಮಚಂದ್ರನ್‌ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬಿಜೆಪಿ ಸಂಸತ್ತಿನಲ್ಲಿ ಎಫ್‌ಸಿಆರ್‌ಎ ತಿದ್ದುಪಡಿಗಳನ್ನು ಬುಲ್‌ಡೋಜ್‌‍ ಮಾಡಲು ಯೋಜಿಸುತ್ತಿದೆ ಎಂದು ಕಾಂಗ್ರೆಸ್‌‍ ಮಂಗಳವಾರ ಹೇಳಿತ್ತು ಮತ್ತು ಖಂಡಿತವಾಗಿಯೂ ಅಸಂವಿಧಾನಿಕ ಮತ್ತು ಕಠಿಣ ಮಸೂದೆಯನ್ನು ಅಂಗೀಕರಿಸಲು ಬಿಡುವುದಿಲ್ಲ ಎಂದು ಹೇಳಿತ್ತು.ಕಾಂಗ್ರೆಸ್‌‍ ಪ್ರಧಾನ ಕಾರ್ಯದರ್ಶಿ, ಸಂಘಟನಾ ಉಸ್ತುವಾರಿ ಕೆ ಸಿ ವೇಣುಗೋಪಾಲ್‌ ಅವರು ಪಕ್ಷದ ಸಂಸದರನ್ನು ದೆಹಲಿಗೆ ತಲುಪಿ ಬುಧವಾರ ಸಂಸತ್ತಿಗೆ ಹಾಜರಾಗಲು ತುರ್ತಾಗಿ ಕೇಳಲಾಗಿದೆ ಎಂದು ಹೇಳಿದ್ದರು.

ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ ತಿದ್ದುಪಡಿ ಮಸೂದೆಯನ್ನು ಮಾರ್ಚ್‌ 25 ರಂದು ಲೋಕಸಭೆಯಲ್ಲಿ ಮಂಡಿಸಲಾಯಿತು, ವಿದೇಶಿ ನಿಧಿಯ ಮೂಲಕ ಬಲವಂತದ ಧಾರ್ಮಿಕ ಮತಾಂತರದಲ್ಲಿ ತೊಡಗಿರುವ ವ್ಯಕ್ತಿಗಳನ್ನು ಬಿಡಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, 2026 ಅನ್ನು ಪರಿಚಯಿಸುತ್ತಾ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಶಾಸನವು ಪಾರದರ್ಶಕತೆಯನ್ನು ಹೆಚ್ಚಿಸುವ ಮತ್ತು ವಿದೇಶದಿಂದ ಪಡೆದ ನಿಧಿಯ ಸರಿಯಾದ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ನಿನ್ನೆ ಕೇಂದ್ರ ಸಚಿವ ಕಿರಣ್‌ ರಿಜಿಜು ಅವರು ತಿದ್ದುಪಡಿ ಮಸೂದೆಯು ರಾಷ್ಟ್ರೀಯ ಭದ್ರತೆ ಮತ್ತು ಹಿತಾಸಕ್ತಿಗಳ ವಿರುದ್ಧ ವಿದೇಶಿ ನಿಧಿಯ ಬಳಕೆಯನ್ನು ನಿಲ್ಲಿಸಲು ಮಾತ್ರ ಪ್ರಯತ್ನಿಸುತ್ತದೆ ಮತ್ತು ಯಾವುದೇ ಧಾರ್ಮಿಕ ಸಂಘಟನೆಯನ್ನು ಗುರಿಯಾಗಿಸಲು ಅಲ್ಲ ಎಂದು ಪ್ರತಿಪಾದಿಸಿದರು.ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಜಿಜು, ಕಾಂಗ್ರೆಸ್‌‍ ಮತ್ತು ಎಡ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

RELATED ARTICLES

Latest News