Tuesday, April 14, 2026
Homeರಾಜ್ಯಮನೆ ಗೋಡೆ ಹಾರಿ ಮಹಿಳೆಯರ ಒಳ ಉಡುಪು ಕದ್ದ ವಿಕೃತ ಕಾಮಿಗಾಗಿ ಶೋಧ

ಮನೆ ಗೋಡೆ ಹಾರಿ ಮಹಿಳೆಯರ ಒಳ ಉಡುಪು ಕದ್ದ ವಿಕೃತ ಕಾಮಿಗಾಗಿ ಶೋಧ

ಬೆಂಗಳೂರು,ಮಾ.30- ವಿಕೃತ ಕಾಮಿಯೊಬ್ಬ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿದ್ದಾನೆ ಎಚ್ಚರ…! ಈ ವಿಕೃತ ಕಾಮಿ ಮನೆಯ ಗೋಡೆ ಹಾರಿ ಕಾಂಪೌಂಡ್‌ಒಳಗೆ ಒಣಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ.
ಈ ಬಡಾವಣೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮನೆಯ ಗೋಡೆ ಹಾರಿ ಮಹಿಳೆಯರ ಒಳ ಉಡುಪು ಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ.

ಇದರಿಂದ ಗಂಗಾವತಿಯ ಈ ಪ್ರತಿಷ್ಠಿತ ಬಡಾವಣೆಯ ಸುತ್ತಮುತ್ತ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಗಂಗಾವತಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ವಿಕೃತ ಕಾಮಿಯ ಕೃತ್ಯ ಬಯಲಾಗಿದೆ.
ಈ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು ವಿಕೃತ ಕಾಮಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಡ್ರಂಕ್‌ ಅಂಡ್‌ ಡ್ರೈವ್‌616 ಪ್ರಕರಣ ದಾಖಲು
ಬೆಂಗಳೂರು,ಮಾ.30- ವುದ್ಯಸೇವಿಸಿ ವಾಹನ ಚಾಲನೆ ಹಾಗೂ ಅತಿ ವೇಗ ವಾಹನ ಚಲಾಯಿಸುತ್ತಿದ್ದ ವಾಹನ ಚಾಲಕರು ಮತ್ತು ಸವಾರರುಗಳ ವಿರುದ್ಧ ನಗರದ 53 ಸಂಚಾರಿ ಪೊಲೀಸ್‌‍ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸ ಲಾಯಿತು.
ಮಾ.23 ರಿಂದ ನಿನ್ನೆಯವರೆಗೆ ನಗರ ಸಂಚಾರ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ವಿವಿಧ ಮಾದರಿಯ ಒಟ್ಟು 42642 ವಾಹನಗಳನ್ನು ಪರಿಶೀಲಿಸ ಲಾಯಿತು.

ಆ ಸಂದರ್ಭದಲ್ಲಿ 616 ಮಂದಿ ಮದ್ಯಸೇವಿಸಿ ವಾಹನ ಚಾಲನೆ ಮಾಡಿರುವುದು ಕಂಡು ಬಂದಿದ್ದು, ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಅದೇ ರೀತಿ ಅತಿ ವೇಗವಾಗಿ ವಾಹನ ಚಲಾಯಿಸುವವರ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 279 ಪ್ರಕರಣಗಳನ್ನು ದಾಖಲಿಸಿ ಕೊಂಡು 2.80 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.

ನಗರದಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುವ ಹಾಗೂ ಅತೀ ವೇಗ ವಾಹನ ಚಲಾಯಿಸುವವರ ಹಾವಳಿಯನ್ನು ತಡೆಗಟ್ಟಲು ಮತ್ತು ರಸ್ತೆ ಸುರಕ್ಷತೆಗಾಗಿ ಇಂತಹ ಕಾರ್ಯಾಚರಣೆಗಳನ್ನು ಮುಂದಿನ ದಿನಗಳಲ್ಲಿಯೂ ಸಹ ಹಮಿಕೊಳ್ಳ ಲಾಗುವುದೆಂದು ನಗರ ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News