Tuesday, April 14, 2026
Homeರಾಜ್ಯರಾಜ್ಯ ಸರ್ಕಾರ ತುಘಲಕ್‌ ದರ್ಬಾರ್‌ ನಡೆಸುತ್ತಿದೆ: ಆರ್‌.ಅಶೋಕ್‌ ವಾಗ್ದಾಳಿ

ರಾಜ್ಯ ಸರ್ಕಾರ ತುಘಲಕ್‌ ದರ್ಬಾರ್‌ ನಡೆಸುತ್ತಿದೆ: ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು,ಮಾ.30-ಎಸ್ಸೆಸ್ಸೆಲ್ಸಿಯಲ್ಲಿ ಹಿಂದಿ ಭಾಷೆ ಅಂಕಗಳನ್ನು ತೆಗೆದು ಹಾಕುವ ಮೂಲಕ ರಾಜ್ಯ ಸರ್ಕಾರ ತುಘಲಕ್‌ ದರ್ಬಾರ್‌ ನಡೆಸುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅನಗತ್ಯವಾಗಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟು ಮಾಡಬೇಕೆಂಬ ಕಾರಣಕ್ಕಾಗಿಯೇ ಎಸ್ಸೆಸ್ಸೆಲ್ಸಿ ಹಿಂದಿ ಪ್ರಶ್ನೆಪತ್ರಿಕೆ ಅಂಕಗಳನ್ನು ಪರಿಗಣಿಸದಿರಲು ತೆಗೆದುಕೊಂಡಿರುವ ನಿರ್ಧಾರ ಸರಿಯಲ್ಲ ಎಂದು ಆಕ್ಷೇಪಿಸಿದರು.

ಹಿಂದಿ ಬಳಕೆ ವಿರೋಧಿಸುವ ಮೂಲಕ ರಾಜ್ಯ ಸರ್ಕಾರ ತುಘಲಕ್‌ ನೀತಿ ಅನುಸರಿಸುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಪ್ರಚಾರ ಸಮಿತಿಗಳ ಮೂಲಕ ಹಿಂದಿ ಕಲಿಕೆಗೆ ಉತ್ತೇಜನ ಕೊಡಬೇಕು ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಕರೆ ಕೊಟ್ಟಿದ್ದರು. ಏಕಾಏಕಿ ಈಗ ಈ ಹಿಂದಿ ರದ್ದು ಮಾಡಿರುವುದು ಎಷ್ಟು ಸರಿ ? ಎಂದು ಪ್ರಶ್ನೆ ಮಾಡಿದರು.

ಲಕ್ಷಾಂತರ ಮಕ್ಕಳು ಕಷ್ಟಪಟ್ಟು ಓದಿದ ಹಿಂದಿ ಭಾಷೆಯೇ ಈಗ ಬೇಡ ಅಂದರೆ ಹೇಗೆ? ಇದರ ಹಿಂದೆ ಇರುವ ಶಕ್ತಿಗಳು ಯಾವುದು? ಹೈಕಮಾಂಡ್‌ ಮೆಚ್ಚಿಸುವುದಕ್ಕಾಗಿ ಶಿಕ್ಷಣ ತಜ್ಞರು, ಪೋಷಕರು, ಮಕ್ಕಳ ಜೊತೆ ಸೌಜನ್ಯಕ್ಕಾದರೂ ಚರ್ಚೆ ನಡೆಸದೆ ಈ ತೀರ್ಮಾನ ತೆಗೆದುಕೊಂಡಿರುವುದು ಸರಿಯಲ್ಲ. ಶಿಕ್ಷಣದಲ್ಲೂ ಕಾಂಗ್ರೆಸ್‌‍ ರಾಜಕಾರಣ ಮಾಡಲು ಹೊರಟಿದೆ ಎಂದು ಆರೋಪಿದರು.

ಶೈಕ್ಷಣಿಕವಾಗಿ ಸ್ಕೋರ್‌ ಮಾಡಲು ಅವಕಾಶ ನೀಡುತ್ತಿದ್ದ ಭಾಷೆ ಇಲ್ಲವಾಗಿದೆ. ಒಂದು ವರ್ಷದ ಕಾಲ ಮಕ್ಕಳು ಓದಿದ ಭಾಷೆಗೆ ಬೆಲೆ ಇಲ್ಲವೇ? ಗಾಂಧಿ ಹೆಸರು ಹೇಳುವ ನೀವು ಈಗ ಒಇ ವಿಚಾರದ ಬಗ್ಗೆ ಯಾವ ಸ್ಪಷ್ಟೀಕರಣ ಕೊಡುತ್ತೀರಾ? ಎಂದು ಕಾಂಗ್ರೆಸ್‌‍ ನಾಯಕರನ್ನು ಅಶೋಕ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

RELATED ARTICLES

Latest News