Saturday, April 11, 2026
Homeರಾಷ್ಟ್ರೀಯಷೇರು ಮಾರುಕಟ್ಟೆಯಲ್ಲಿ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರ 10 ಲಕ್ಷ ಕೋಟಿ ರೂ. ಢಮಾರ್..!

ಷೇರು ಮಾರುಕಟ್ಟೆಯಲ್ಲಿ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರ 10 ಲಕ್ಷ ಕೋಟಿ ರೂ. ಢಮಾರ್..!

Sensex crashes 1500 points, investors lose ₹10 lakh crore after Trump's speech

ನವದೆಹಲಿ, ಏ.2- ಉಸಿರು ತೆಗೆದುಕೊಂಡು ಬಿಡುವಷ್ಟರಲ್ಲಿ ಹೂಡಿಕೆದಾರರ 10 ಲಕ್ಷ ಕೋಟಿ ರೂ. ಬರ್ಬಾದ್‌ ಆಗಿ ಹೋಗಿದೆ. ಇಂದಿನ ಆರಂಭಿಕ ಗಂಟೆಯ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ ಭಾರಿ ಕುಸಿತ ಕಂಡುಬಂದಿದೆ.

ಬುಧವಾರದ ಮುಕ್ತಾಯದ ವೇಳೆಗೆ, ಬಿಎಸ್‌‍ಇ ಸೆನ್ಸೆಕ್ಸ್ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು 4,22,01,433.48 ಕೋಟಿ ರೂ.ಗಳಷ್ಟಿತ್ತು. ಆದರೆ, ಇಂದು ಬೆಳಿಗ್ಗೆ 10:03 ರ ಹೊತ್ತಿಗೆ, ಇದು 4,11,94,176 ಕೋಟಿ ರೂ.ಗಳಿಗೆ ಇಳಿದಿದೆ. ಅಂದರೆ ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ ಬರೊಬ್ಬರಿ 10 ಲಕ್ಷ ಕೋಟಿ ರೂ.ಗಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಇತ್ತೀಚಿನ ಇರಾನ್‌ ಬೆದರಿಕೆ ತೈಲ ಬೆಲೆಗಳ ಏರಿಕೆಗೆ ಕಾರಣವಾದ ನಂತರ ಬಿಎಸ್‌‍ಇ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಎರಡೂ ತೀವ್ರವಾಗಿ ಕುಸಿತದೊಂದಿಗೆ ಪ್ರಾರಂಭವಾಗಿದವು. ಲೈವ್‌ ಅಪ್‌ಡೇಟ್‌ಗಳನ್ನು ಅನುಸರಿಸಿ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್‌್ಸ 1,400 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದಿದೆ. ನಿಫ್ಟಿ ಶೇ.2ಕ್ಕಿಂತ ಕಡಿಮೆಯಾಗಿದೆ ಮತ್ತು 22,300 ಕ್ಕಿಂತ ಕಡಿಮೆಯಾಗಿದೆ. ಎಲ್ಲಾ 16 ಪ್ರಮುಖ ವಲಯ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿವೆ.

ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ಶೇ. 1.6% ರಷ್ಟು ಕುಸಿತಗೊಂಡಿದೆ.
ಮಿಡ್‌‍-ಕ್ಯಾಪ್‌ಗಳು ಶೇ. 1.2, ಸ್ಮಾಲ್‌‍-ಕ್ಯಾಪ್‌ಗಳು ಶೇ.1.5 ರಷ್ಟು ಕುಸಿದಿವೆ. ಕೈಗಾರಿಕಾ ಮತ್ತು ಇನ್ಫ್ರಾ ಷೇರುಗಳು ತೀವ್ರ ಕಡಿತವನ್ನು ಕಂಡಿವೆ. ಫಾರ್ಮಾ ಮತ್ತು ವಾಯುಯಾನ ಷೇರುಗಳು ಭಾರೀ ಒತ್ತಡವನ್ನು ಎದುರಿಸುತ್ತಿವೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶೇ, 3 ಕ್ಕಿಂತ ಹೆಚ್ಚು ಕುಸಿದಿದೆ. ಖಾಸಗಿ ಬ್ಯಾಂಕ್‌ಗಳು ಶೇ.1.5-2.5 ರಷ್ಟು ಕುಸಿದಿರಬಹುದು ಎಂದು ಅಂದಾಜಿಸಲಾಗಿದೆ.ಅದಾನಿ ಬಂದರುಗಳು, ಎಲ್‌ ಅಂಡ್‌ ಟೀ ಮತ್ತಿತರ ಪ್ರಮುಖ ಸಂಸ್ಥೆಗಳ ಷೇರುಗಳು ಶೇ. 3 ಕ್ಕಿಂತ ಹೆಚ್ಚು ಕುಸಿದಿರುವುದರಿಂದ ಹೂಡಿಕೆದಾರರ 10 ಲಕ್ಷ ಕೋಟಿ ರೂ. ಬಂಡವಾಳ ನೀರಿನಲ್ಲಿ ಕೊಚ್ಚಿಕೊಂಡು ಹೊದಂತಾಗಿದೆ.

RELATED ARTICLES

Latest News