Sunday, April 12, 2026
Homeಅಂತಾರಾಷ್ಟ್ರೀಯಭಾರತದ ಬಗ್ಗೆ ಟ್ರಂಪ್‌ಗೆ ಕಾಳಜಿಯಿದೆ; ಗೋರ್‌

ಭಾರತದ ಬಗ್ಗೆ ಟ್ರಂಪ್‌ಗೆ ಕಾಳಜಿಯಿದೆ; ಗೋರ್‌

ವಾಷಿಂಗ್ಟನ್‌, ಏ.1- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ-ಭಾರತ ಸಂಬಂಧದ ಬಗ್ಗೆ ತೀವ್ರ ಕಾಳಜಿ ವಹಿಸುತ್ತಾರೆ ಎಂದು ಭಾರತಕ್ಕೆ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್‌ ತಿಳಿಸಿದ್ದಾರೆ. ನಿನ್ನೆ ಶ್ವೇತಭವನದಲ್ಲಿ ಟ್ರಂಪ್‌ ಅವರನ್ನು ಭೇಟಿಯಾದ ನಂತರ ಗೋರ್‌ ಅವರಿಂದ ಈ ಹೇಳಿಕೆ ಬಂದಿರುವುದು ವಿಶೇಷವಾಗಿದೆ.

ಕೆಲವು ದಿನಗಳ ಕಾಲ ಅಮೆರಿಕಕ್ಕೆ ಹಿಂತಿರುಗಿದ್ದೇನೆ. ಶ್ವೇತಭವನದಲ್ಲಿ ನಮ್ಮ ಮಹಾನ್‌ ಅಧ್ಯಕ್ಷರನ್ನು ಭೇಟಿಯಾಗಿದ್ದೇ ಅವರು ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧದ ಬಗ್ಗೆ ತೀವ್ರ ಕಾಳಜಿ ವಹಿಸುತ್ತಾರೆ ಎಂದು ಗೋರ್‌ ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.
ಗೋರ್‌ ಅವರು ಓವಲ್‌ ಕಚೇರಿಯಲ್ಲಿ ಟ್ರಂಪ್‌ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ತಮ್ಮ ಛಾಯಾಚಿತ್ರವನ್ನು ಸಹ ಪೋಸ್ಟ್‌ ಮಾಡಿದ್ದಾರೆ.

ಈ ವರ್ಷದ ಜನವರಿಯಲ್ಲಿ ಗೋರ್‌ ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು, ಅವರು ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಗೋರ್‌ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳಿಗೆ ಅಮೆರಿಕದ ವಿಶೇಷ ರಾಯಭಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

RELATED ARTICLES

Latest News