ಒಬ್ಬನ ಕೊಲೆಯಲ್ಲಿ ಅಂತ್ಯವಾಯ್ತು ಸ್ನೇಹಿತರ ಹೆಡ್‍ಫೋನ್ ಜಗಳ

Social Share

ಬೆಂಗಳೂರು,ಜ.2- ಸ್ನೇಹಿತರ ನಡುವೆ ಹೆಡ್‍ಫೋನ್ ವಿಚಾರದಲ್ಲಿ ಉಂಟಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ತಮಿಳುನಾಡಿನ ಕೃಷ್ಣಗಿರಿ ನಿವಾಸಿ ಕಾರ್ತಿಕ್(27) ಕೊಲೆಯಾಗಿರುವ ಪೇಂಟರ್.

ದೊಡ್ಡ ನಾಗಮಂಗಲದ ಬಾಲಾಜಿ ಲೇಔಟ್‍ನಲ್ಲಿ ನಿರ್ಮಾಣ ಹಂತದ ಮನೆಯ ಪೇಂಟಿಂಗ್ ಕೆಲಸಕ್ಕೆಂದು ಕೃಷ್ಣಗಿರಿಯಿಂದ ಕಾರ್ತಿಕ್ ಸೇರಿದಂತೆ ನಾಲ್ವರು ಬಂದಿದ್ದು, ಕೆಲಸ ಮುಗಿಸಿ ಅಲ್ಲಿಯೇ ಮಲಗುತ್ತಿದ್ದರು.
ಡಿ.31ರಂದು ರಾತ್ರಿ ಹೊಸ ವರ್ಷದ ಪಾರ್ಟಿ ಅಲ್ಲೇ ಮಾಡಿದ್ದು, ಆ ವೇಳೆ ಜೊತೆಯಲ್ಲಿದ್ದ ಕೆಲಸಗಾರ ರಜನೀಶ್ ಎಂಬಾತನ ಹೆಡ್‍ಫೋನ್‍ನನ್ನು ಕಾರ್ತಿಕ್ ತೆಗೆದುಕೊಂಡಿದ್ದಾನೆ.

ತುನೀಶಾ ಶರ್ಮಾ ಆತ್ಮಹತ್ಯೆ ಹಿಂದೆ ಲವ್ ಜಿಹಾದ್ಇಲ್ಲ : ಶೇಜಾನ್ ಖಾನ್ ಕುಟುಂಬ

ಇದಕ್ಕೆ ಕೋಪಗೊಂಡ ರಜನೀಶ್ ಆತನೊಂದಿಗೆ ಜಗಳವಾಡಿದ್ದು, ಇಬ್ಬರು ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ. ಕಾರ್ತಿಕ್ ಮಲಗಲು ಹೋಗಿದ್ದು, ಬೆಳಗಾಗುವಷ್ಟರಲ್ಲಿ ಆತ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪರಿಶೀಲಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

friends, headphone, fight, murder, Bengaluru,

Articles You Might Like

Share This Article