ಗದಗ,ಜ.14- ಎದುರಿಗೆ ಬರುತಿದ್ದ ಲಾರಿಗೆ ಜಾಗ ಕೊಡಲು ಹೋಗಿ ಡಿಸೆಲ್ ಟ್ಯಾಂಕರ್ ಕಂದಕಕ್ಕೆ ಉರುಳಿದ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿ ನಡೆದಿದೆ.
ಬೆಳಗಾವಿಯಿಂದ ಗಜೇಂದ್ರಗಡಕ್ಕೆ ಹೋಗುತ್ತಿದ್ದ ಡಿಸೆಲ್ ಟ್ಯಾಂಕರ್ ಎದುರುಗಡೆ ಬರುತ್ತಿದ್ದ ಲಾರಿಗೆ ಜಾಗ ಬಿಡಲು ಹೋಗೆ ಹಿಂಬದಿ ಚಕ್ರ ಜಾರಿ ಕಂದಕ್ಕೆ ಉರುಳಿದೆ.
ಅದೃಷ್ಟವಶಾತ್ ಚಾಲಕ ಬಚಾವ್ ಆಗಿದ್ದಾನೆ. ಟ್ಯಾಂರ್ನಿಂದ ಡೀಸೆಲ್ ಸೋರಿಕೆಯಾಗುತ್ತಿದ್ದು, ರೋಣ ಪೊಲೀಸರು ಹಾಗು ಆಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಅಪಾರ ಪ್ರಮಾಣದ ತೈಲ ಸೋರಿಹೋಗಿದೆ,ಹೆಚ್ಚಿನ ಅನಾಹುತ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.