ಮೋಜಿನ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದವನ ಬಂಧನ

Social Share

ಬೆಂಗಳೂರು, ನ.22- ಶೋಕಿ, ಮೋಜು- ಮಸ್ತಿ ಜೀವನಕ್ಕಾಗಿ ಕಳ್ಳತನದ ಹಾದಿ ಹಿಡಿದಿದ್ದ ನಟೋರಿಯಸ್ ವಾಹನ ಕಳ್ಳನೊಬ್ಬನನ್ನು ಕೆಆರ್ ಪುರ ಠಾಣೆ ಪೊಲೀಸರು ಬಂಧಿಸಿ 12 ಲಕ್ಷ ರೂ. ಬೆಲೆಬಾಳುವ 8 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಲತಃ ಕೋಲಾರದ ಕೆಜಿಎಫ್‍ನ ಭಾರತಿಪುರಂ ನಿವಾಸಿ ಸೈಯ್ಯದ್ ಸಲ್ಮಾನ್(25) ಬಂಧಿತ ಆರೋಪಿ. ಈತನಿಂದ 7 ಬೈಕ್‍ಗಳು ಮತ್ತು ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ವಾಹನಗಳ ಹ್ಯಾಂಡ್ ಲಾಕ್‍ಗಳನ್ನು ಮುರಿದು, ಇಗ್ನೀಷಿಯನ್ ವೈರನ್ನು ಕತ್ತರಿಸಿ ವಾಹನಗಳನ್ನು ಡೈರೆಕ್ಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದನು.

ಆರೋಪಿಯು ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಬೆಂಗಳೂರು ನಗರದ ಕೆಆರ್‍ಪುರ, ಹೆಣ್ಣೂರು, ಬಾಣಸವಾಡಿ, ಯಲಹಂಕ ನ್ಯೂ ಟೌನ್ ಪೊಲೀಸ ಠಾಣಾ ವ್ಯಾಪ್ತಿಗಳಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತು ಕೋಲಾರ ಜಿಲ್ಲೆಯ ಗಲ್‍ಪೇಟೆ ಪೊಲೀಸ್ ಠಾಣೆ, ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ರಸ್ತೆಗಳ ಪಕ್ಕದಲ್ಲಿ, ಮನೆ, ಅಂಗಡಿಗಳ ಮುಂಭಾಗ ರಸ್ತೆ ಬದಿಗಳಲ್ಲಿ ನಿಲ್ಲಿಸಿದ ಬೈಕ್‍ಗಳನ್ನು ಮತ್ತು ಆಟೋವನ್ನು ರಾತ್ರಿ ವೇಳೆ ಹೋಗಿ ಕಳ್ಳತನ ಮಾಡಿದ್ದನು.

ವಂಚನೆ ಮಾಡಿದವನನ್ನು ಕೊಂದು ಶವದ ಜೊತೆ ಪೊಲೀಸರಿಗೆ ಶರಣಾದ

ಕದ್ದ ವಾಹನಗಳನ್ನು ಮಾರಾಟ ಮಾಡುವ ಸಲುವಾಗಿ ತನ್ನ ಊರಿನಲ್ಲಿ ತೋಟದ ಮಿಷಿನ್ ಮನೆ ಮತ್ತು ನಿರ್ಜನ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳು ಮತ್ತು ಆಟೋ ನಿಲ್ಲಿಸಿದ್ದನು. ಕೆಆರ್ ಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಟೆಂಟ್ ರಸ್ತೆಯಲ್ಲಿರುವ ಅಶೋಕ ಬೇಕರಿ ಬಳಿ ಆರೋಪಿಯನ್ನು ಬಂಸಿ ಏಳು ದ್ವಿಚಕ್ರ ವಾಹನ
ಒಂದು ಆಟೋ ವಶಪಡಿಸಿಕೊಂಡಿದ್ದಾರೆ.

ಮಂಗಳೂರಲ್ಲಿ ಸ್ಪೋಟ ಸಂಭವಿಸಿದ ಸ್ಥಳಕ್ಕೆ ಗೃಹ ಸಚಿವರ ಭೇಟಿ

ಡಿಸಿಪಿ ಗಿರೀಶ್ ಅವರ ನಿರ್ದೇಶನ ದಲ್ಲಿ ಎಸಿಪಿ ಶಾಂತಮಲ್ಲಪ್ಪ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಘೋರ್ಪಡೆ ಎಲ್ಲಪ್ಪ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿದ್ದು, ಹಿರಿಯ ಅಧಿಕಾರಿಗಳು ಅವರ ಕಾರ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆ.

fun, life, thief, Arrest, 8 vehicles, seized,

Articles You Might Like

Share This Article