ಬೆಂಗಳೂರಿನಲ್ಲಿ ಡಿ.8ರಿಂದ 10ರವರೆಗೆ ಫ್ಯೂಚರ್ ಡಿಸೈನ್ ಸಮಾವೇಶ

Social Share

ಬೆಂಗಳೂರು, ಡಿ.3- ಫ್ಯೂಚರ್ ಡಿಸೈನ್ ಸಮಾವೇಶವು ಡಿ.8ರಿಂದ 10ರ ವರೆಗೆ ನಗರದ ಅಶೋಕ ಹೋಟೆಲ್‍ನಲ್ಲಿ ನಡೆಯಲಿದೆ ಎಂದು ಐಟಿ-ಬಿಟಿ ಸಚಿವ ಡಾ.ಸಿ. ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾವೇಶ ಉದ್ಘಾಟಿಸಲಿದ್ದಾರೆ. ಈಗಾಗಲೇ ನ.11ರಿಂದ ನಡೆಯುತ್ತಿರುವ ಬೆಂಗಳೂರು ಡಿಸೈನ್ ಫೆಸ್ಟಿವಲ್ ಹಿನ್ನೆಲೆಯಲ್ಲಿ ಈ ಮಹತ್ವದ ಸಮಾವೇಶ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಏರ್ಪಡಿಸಿರುವ ಸಮಾವೇಶಕ್ಕೆ ಅಂತಾರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಮಿತಿ, ಭಾರತೀಯ ವಿನ್ಯಾಸಗಾರರ ಒಕ್ಕೂಟ, ಸಿಐಐ ಮತ್ತು ಜೈನ್ ಸ್ಕೂಲ್ ಆಫ್ ಆರ್ಕಿಟೆ ಸಹಯೋಗ ನೀಡುತ್ತಿವೆ ಎಂದು ಹೇಳಿದರು.

ದತ್ತ ಜಯಂತಿಗೆ ಬಿಗಿ ಪೊಲೀಸ್ ಬಂದೋಬಸ್ತ್

ಇದರಲ್ಲಿ ಜಗತ್ತಿನಾದ್ಯಂತದ 300ಕ್ಕೂ ಹೆಚ್ಚು ಡಿಸೈನ್ ಪರಿಣಿತರು ಮಾತನಾಡಲಿದ್ದು, 3000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಇದರಲ್ಲಿ ವಲ್ಡರ್ ಡಿಸೈನ್ ಆರ್ಗನೈಸೇಷನ್, ವಲ್ಡರ್ ಡಿಸೈನ್ ಕೌನ್ಸಿಲ, ಬೆಂಗಳೂರು ಡಿಸೈನ್ ಫೆಸ್ಟಿವಲ್ ಮತ್ತು ಬೆಂಗಳೂರು ಡಿಸೈನ್ ಸಪ್ತಾಹದ ಪ್ರತಿನಿಧಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ತಂತ್ರಜ್ಞಾನ ಮತ್ತು ವಿನ್ಯಾಸ ಎರಡೂ ಒಂದಕ್ಕೊಂದು ಅವಿಭಾಜ್ಯ ಅಂಗವಾಗಿವೆ. ಇದರ ಮೂಲಕ ಬಿಗ್ ಡೇಟಾ ಮತ್ತಿತರ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸುಸ್ಥಿರ ಅಭಿವೃದ್ಧಿ ಸಾಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಪಿಎಸ್‍ಐ ನೇಮಕಾತಿ ಅಕ್ರಮ : ಅಮೃತ್‍ಪೌಲ್ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ

ಒಟ್ಟು ಮೂರು ಟ್ರ್ಯಾಕ್‍ಗಳಲ್ಲಿ ಸಮಾವೇಶದ ಗೋಷ್ಠಿಗಳು ನಡೆಯಲಿವೆ. ಇದರಲ್ಲಿ ವಿನ್ಯಾಸದ ಆಯಾಮಗಳು, ಒಳಾಂಗಣ ವಿನ್ಯಾಸ, ವಾಸ್ತುಶಿಲ್ಪ, ಮೆಟಾವರ್ಸ್ ಮತ್ತು ಎವಿಜಿಸಿ ಮುಂತಾದವನ್ನು ಕುರಿತು ವಿಚಾರ ವಿನಿಮಯ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಚಿರತೆ ಸೆರೆಗೆ ವಿಶೇಷ ತಂಡ ರಚನೆ : ಮೃತರ ಕುಟುಂಬಕ್ಕೆ 15 ಲಕ್ಷ ಪರಿಹಾರ ಘೋಷಣೆ

ಸಮಾವೇಶಕ್ಕೆ ವಿದ್ಯಾರ್ಥಿಗಳು ಮತ್ತು ಸಾಮಾನ್ಯರ ವಿಭಾಗಗಳಲ್ಲಿ ಟಿಕೆಟ್ ಆಧಾರಿತ ಪ್ರವೇಶಾವಕಾಶ ಇದೆ. ಇದರಲ್ಲಿ ಡಿಸೈನ್ ಪ್ರದರ್ಶನ ಮೇಳ ಕೂಡ ಇರಲಿದೆ. ಹೆಚ್ಚಿನ ಮಾಹಿತಿಗೆ https://bengalurudesign festival.org/ ಜಾಲತಾಣವನ್ನು ನೋಡಬಹುದು ಎಂದು ಸಚಿವರು ತಿಳಿಸಿದ್ದಾರೆ.

Future, #Design, #Conference, #Bangalore,

Articles You Might Like

Share This Article