ಹಳೆ ಪಿಂಚಣಿ ವ್ಯವಸ್ಥೆಯಿಂದ ಮುಂದಿನ ಪೀಳಿಗೆಯ ಭವಿಷ್ಯ ನಾಶ : ಮೋದಿ

Social Share

ನವದೆಹಲಿ,ಫೆ.10- ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಿದರೆ ಮುಂದಿನ ಪೀಳಿಗೆ ನಮ್ಮ ಮಕ್ಕಳ ಭವಿಷ್ಯ ಹಾಳಾಗಿ ಹೋಗಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಲವು ರಾಜ್ಯಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿವಿಧ ರಾಜ್ಯಗಳ ಸರ್ಕಾರಿ ನೌಕರರು ಹೊಸ ಪಿಂಚಣಿ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದು, ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರಿ ನೌಕರರ ಬೇಡಿಕೆ ಸ್ಪಂದಿಸಿರುವ ಕಾಂಗ್ರೆಸ್ ನಮಗೆ ಅಧಿಕಾರ ಸಿಕ್ಕರೆ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಭರವಸೆ ನೀಡುತ್ತಿದೆ.

ಬಹುತೇಕ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಇದನ್ನು ಆದ್ಯ ಭರವಸೆಯನ್ನಾಗಿ ನೀಡಿದೆ. ಅಧಿಕಾರ ಸಿಗುತ್ತಿದ್ದಂತೆ ಭರವಸೆಯನ್ನು ಈಡೇರಿಸಲು ಕ್ರಮ ಕೈಗೊಂಡಿದೆ. ಈಗಾಗಲೇ ಆಡಳಿತದಲ್ಲಿರುವ ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರೆಸಲು ಕ್ರಮ ಕೈಗೊಂಡಿದೆ.
ಆದರೆ ಬಿಜೆಪಿ ಹಳೆ ಪಿಂಚಣಿ ಜಾರಿ ವಿಷಯದಲ್ಲಿ ಮೀನಾ ಮೇಷ ಎಣಿಸುತ್ತಿದೆ.

ವಿಮಾನದಲ್ಲಿ ದೋಷ, 13 ಗಂಟೆ ನಿಲ್ದಾಣದಲ್ಲೇ ಕಾಲ ಕಳೆದ 170 ಪ್ರಯಾಣಿಕರು

ಕರ್ನಾಟಕದಲ್ಲಿ ಸರ್ಕಾರಿ ನೌಕರರು ಈ ಕುರಿತು ಭಾರೀ ಪ್ರತಿಭಟನೆ ನಡೆಸಿದರು, ವಿಧಾನಮಂಡಲದಲ್ಲಿ ಚರ್ಚೆಯಾದಾಗ ಹಣಕಾಸು ಪರಿಸ್ಥಿತಿ ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಹಳೆ ಪಿಂಚಣಿ ಜಾರಿಯಿಂದಾಗುವ ಆರ್ಥಿಕ ಹೊರೆ ಕುರಿತು ವರದಿ ನೀಡಲು ಸಮಿತಿ ರಚಿಸುವುದಾಗಿ ಭರವಸೆ ನೀಡಿತ್ತು.

ಬಿಜೆಪಿ ಹಲವು ರಾಜ್ಯಗಳಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಮೀನಾಮೇಶ ಎಣಿಸುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಹಳೆಯ ಪದ್ಧತಿಯನ್ನು ಜಾರಿಗೊಳಿಸುವ ಮೂಲಕ ಸರ್ಕಾರಿ ನೌಕರರ ಮನವೋಲಿಸಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ನಿನ್ನೆ ರಾಜ್ಯಸಭೆಯಲ್ಲಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಆರ್ಥಿಕ ಅವ್ಯವಸ್ಥೆ ಅನುಭವಿಸುತ್ತಿರುವ ನಮ್ಮ ನೆರೆ ಹೊರೆ ದೇಶಗಳನ್ನು ನೋಡಿ. ಅಜಾಗರೂಕತೆಯಿಂದ ಸಾಲ ಪಡೆದು ಅದರ ಹೊರೆ ನಿಭಾಯಿಸಲಾಗದೆ ಪರದಾಡುತ್ತಿವೆ. ನಾವು ಅದೇ ಉದಾಹರಣೆಯನ್ನು ಪಾಲನೆ ಮಾಡಿದರೆ, ನಮ್ಮ ದೇಶವೂ ಹಾಳಾಗಲಿದೆ ಎಂದು ಎಚ್ಚರಿಸಿದ್ದಾರೆ.

ಸುಪ್ರೀಂಕೋರ್ಟ್‍ಗೆ ಮತ್ತಿಬ್ಬರು ನ್ಯಾಯಮೂರ್ತಿಗಳ ನೇಮಕ

ಕೇಂದ್ರ ಹಣಕಾಸು ಇಲಾಖೆ ಇತ್ತೀಚೆಗೆ ಸಂಸತ್‍ನಲ್ಲಿ ಹೇಳಿಕೆ ನೀಡಿ, ರಾಜಸ್ಥಾನ, ಚತ್ತೀಸ್‍ಗಡ, ಜಾರ್ಖಾಂಡ್, ಪಂಜಾಬ್, ಹಿಮಾಚಲಪ್ರದೇಶ ರಾಜ್ಯಗಳು ಮಾತ್ರ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಮುಂದಾಗಿವೆ ಎಂದು ತಿಳಿಸಿತ್ತು.

ಈ ಐದು ರಾಜ್ಯಗಳಲ್ಲಿ ಪಂಜಾಬ್‍ನಲ್ಲಿ ಅಮ್‍ಆದ್ಮಿ ಸರ್ಕಾರವಿದ್ದರೆ, ಜಾರ್ಖಾಂಡ್‍ನಲ್ಲಿ ಕಾಂಗ್ರೆಸ್ ಮೈತ್ರಿಯ ಸರ್ಕಾರ ಅಸ್ತಿತ್ವದಲ್ಲಿದೆ. ಇನ್ನೂ ರಾಜಸ್ಥಾನ, ಚತ್ತೀಸ್‍ಗಡ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ಚುನಾವಣೆ ನಡೆದು ಕಾಂಗ್ರೆಸ್ ಅಕಾರದಲ್ಲಿದೆ, ರಾಜಸ್ಥಾನ ಈ ವರ್ಷ ಅಲ್ಲಿ ಚುನಾವಣೆ ನಡೆಯಲಿದೆ.

ಈ ಉದಾಹರಣೆಗಳನ್ನು ನೇರವಾಗಿ ಉಲ್ಲೇಖಿಸದ ಪ್ರಧಾನಿ, ರಾಜಕೀಯ ಪಕ್ಷಗಳು ಹಳೆ ಪಿಂಚಣಿ ಜಾರಿಗೊಳಿಸುವ ಬದ್ಧತೆ ನೀಡುವ ಪಾಪ ಮಾಡಿ, ನಮ್ಮ ಮಕ್ಕಳ ಭವಿಷ್ಯದ ಜೊತೆ ಆಟವಾಡಬಾರದು. ರಾಜ್ಯಗಳು ಕಡ್ಡಾಯವಾಗಿ ಆರ್ಥಿಕ ಶಿಸ್ತನ್ನು ಪಾಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Future, our, kids, ruined, PM Modi, warns, states, clamouring, Old Pension Scheme,

Articles You Might Like

Share This Article