ಜಿ-20 ರಾಷ್ಟ್ರಗಳ ಶೃಂಗಕ್ಕೆ ಪೂರ್ವಭಾವಿ ಸರ್ವ ಪಕ್ಷ ಸಭೆ

Social Share

ನವದೆಹಲಿ, ಡಿ.5- ಜಿ-20 ರಾಷ್ಟ್ರಗಳ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಭಾರತ ವಿವಿಧ ಪಕ್ಷಗಳ ಸಲಹೆ ಕೇಳಲು ಕರೆದಿರುವ ವಿಶೇಷ ಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಭಾಗವಹಿಸುವ ನಿರೀಕ್ಷೆಗಳಿವೆ.

ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ. ವಿದೇಶಾಂಗ ಸಚಿವಾಲಯ ಮುಂದಿನ ದಿನಗಳಲ್ಲಿ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶನ ಮಾಡಲಿದೆ. ಮುಂದಿನ ವರ್ಷ ಸೆಪ್ಟಂಬರ್ 9 ಮತ್ತು 10ರಂದು ನವದೆಹಲಿಯಲ್ಲಿ ಜಿ-20 ರಾಷ್ಟ್ರಗಳ ಶೃಂಗಸಭೆ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ದೇಶಾದ್ಯಂತ 200 ಸಭೆಗಳನ್ನು ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ವಿಶ್ವಕಪ್ ಪುಟ್ಬಾಲ್ ಕ್ವಾರ್ಟರ್ ಫೈನಲ್ ತಲುಪಿದ ಇಂಗ್ಲೆಂಡ್

ಇದಕ್ಕೆ ಆರಂಭಿಕವಾಗಿ ನಡೆಯುವ ಸರ್ವ ಪಕ್ಷ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿದೇಶಾಂಗ ಸಚಿವ ಎಸ್.ಜೈಶಂಕರ್, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‍ಮೋಹನ್‍ರೆಡ್ಡಿ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲೀನ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸುವುದಾಗಿ ಖಚಿತ ಪಡಿಸಿದ್ದಾರೆ. ಉಳಿದಂತೆ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಮಹಿಳೆ ಗ್ಯಾಂಗ್ ರೇಪ್ ಮಾಡಿ, ಗುಪ್ತಾಂಗಕ್ಕೆ ಸಿಗರೇಟ್‌ನಿಂದ ಸುಟ್ಟ ಕಾಮುಕರು..!

ಜಿ-20 ಶೃಂಗ ಆಂತರಿಕ ಸರ್ಕಾರದ ವೇದಿಕೆಯಾಗಿದ್ದು, ಮುಂದುವರೆದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳು ಸಭೆಯಲ್ಲಿ ಭಾಗವಹಿಸಲಿವೆ.

ಡಿಸೆಂಬರ್ 1ರಿಂದ ತನ್ನ ಅಧ್ಯಕ್ಷೀಯ ವ್ಯವಸ್ಥೆಯನ್ನು ಆರಂಭಿಸಿರುವ ಭಾರತ ಮುಂದಿನ ವರ್ಷ ನವೆಂಬರ್ 30ರವರೆಗೂ ಜವಾಬ್ದಾರಿ ನಿಭಾಯಿಸಲಿದೆ. ಜಾಗತಿಕವಾಗಿ ಕಾಡುತ್ತಿರುವ ಸಮಸ್ಯೆಗಳ ಕುರಿತು ಈ ಅವಯಲ್ಲಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಗಳಿವೆ.

#G20Summit, #AllPartyMeeting #BJPGovt

Articles You Might Like

Share This Article