ಜಿ-20 ಶೃಂಗ : ಹಣಕಾಸು ಅಜೆಂಡಾಗಳಿಗೆ ಕೇಂದ್ರೀಯ ಬ್ಯಾಂಕ್‍ಗಳ ಬೆಂಬಲ

Social Share

ಬೆಂಗಳೂರು,ಡಿ.15- ಇಲ್ಲಿ ನಡೆದ ಜಿ-20 ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರ ನಿಯೋಗ ಮತ್ತು ಕೇಂದ್ರೀಯ ಬ್ಯಾಂಕ್‍ಗಳ ಗವರ್ನರ್‍ಗಳ ನಿಯೋಗದ ಸಭೆಯಲ್ಲಿ ಭಾರತದ ಅಧ್ಯಕ್ಷ ಸ್ಥಾನಕ್ಕೆ ಮತ್ತು ಹಣಕಾಸು ಅಜೆಂಡಾಗಳಿಗೆ ಒಕ್ಕೊರಲ ಬೆಂಬಲ ವ್ಯಕ್ತವಾಯಿತು.

ಮೂರು ದಿನಗಳ ಕಾಲ ನಡೆದ ಸಭೆಯಲ್ಲಿ ಜಾಗತಿಕ ಆರ್ಥಿಕ ಸವಾಲುಗಳು, ಕಂಡುಕೊಳ್ಳಬೇಕಾದ ಪರಿಹಾರದ ಬಗ್ಗೆ ಸಮಾಲೋಚನೆ ನಡೆಯಿತು. ಭಾರತವು ಜಿ20 ಅಧ್ಯಕ್ಷತೆ ವಹಿಸಿಕೊಂಡ ಬಳಿಕದ ನಡೆದ ಮೊದಲ ಸಭೆ ಇದಾಗಿದೆ. ಜಾಗತಿಕ ಆರ್ಥಿಕ ಸವಾಲುಗಳು, ಹಣದುಬ್ಬರ, ಆಹಾರ ಮತ್ತು ಇಂಧನ ಅಭದ್ರತೆ, ಸ್ಥೂಲ ಆರ್ಥಿಕತೆಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ನಿಯೋಗ ಚರ್ಚೆ ನಡೆಸಿತು.

ಇದರ ಜತೆಗೆ ಪರಿಹಾರ ಕಂಡುಕೊಳ್ಳಲು ಚೌಕಟ್ಟು ರೂಪಿಸುವ ಬಗ್ಗೆ ಚರ್ಚಿಸಲಾಯಿತು. ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‍ಗಳನ್ನು ಬಲಪಡಿಸುವುದು, ಜಾಗತಿಕ ಸಾಲದ ಒತ್ತಡವನ್ನು ಕಡಿಮೆ ಮಾಡುವುದು, ಬಂಡವಾಳ ಹರಿವು ಮತ್ತು ಜಾಗತಿಕ ಹಣಕಾಸು ಸುರಕ್ಷತೆಗೆ ಸಂಬಂಧಿಸಿ ನಿಯೋಗಗಳ ಸದಸ್ಯರು ವಿಚಾರ ಮಂಡನೆ ಮಾಡಿದರು ಎಂದು ಜಿ20 ಪ್ರಕಟಣೆ ತಿಳಿಸಿದೆ.

ಲಾರಿ ಹಗ್ಗಕ್ಕೆ ಸಿಲುಕಿ ಗಾಳಿಯಲ್ಲಿ ತೂರಿ ಬಿದ್ದ ಬೈಕ್ ಸವಾರ

ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಸರ್ಕಾರಗಳು ಏನೇನು ಕ್ರಮಗಳನ್ನು ಕೈಗೊಳ್ಳಬೇಕು, ಹವಾಮಾನ ಬದಲಾವಣೆ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸುದೀರ್ಘ ಚರ್ಚೆಗಳು ನಡೆದಿವೆ ಭವಿಷ್ಯದ ನಗರಗಳಿಗೆ ಹಣಕಾಸು ನೆರವು ನೀಡುವುದು, ಅವುಗಳನ್ನು ಅಂತರ್ಗತ, ಸ್ಥಿತಿಸ್ಥಾಪಕತ್ವ ಉಳ್ಳ ಮತ್ತು ಸಬಲ ನಗರಗಳನ್ನಾಗಿ ರೂಪಿಸಲು ಮೂಲಸೌಕರ್ಯ ಕಲ್ಪಿಸುವ ಬಗ್ಗೆಯೂ ನಿರ್ಧಾರಕ್ಕೆ ಬರಲಾಗಿದೆ.

ಇಂಟರ್ನೆಟ್ ಬಳಸುವ ಹೆಣ್ಣು ಮಕ್ಕಳೇ ಹುಷಾರ್..!

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆರಿಗೆ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವುದು, ತೆರಿಗೆ ವ್ಯವಸ್ಥೆಗೆ ಚೌಕಟ್ಟು ರೂಪಿಸುವುದು ಮತ್ತು ಎರಡು ಸ್ತರದ ತೆರಿಗೆ ನೀತಿ ರೂಪಿಸುವ ಬಗ್ಗೆ ಸದಸ್ಯ ರಾಷ್ಟ್ರಗಳ ನಿಯೋಗಗಳು ಒಮ್ಮತಕ್ಕೆ ಬಂದಿವೆ ಎಂದು ಮೂಲಗಳು ತಿಳಿಸಿವೆ. ಇಂದು ಇವರೆಲ್ಲಾ ವಿಧಾನಸೌಧಕ್ಕೆ ಭೇಟಿ ನೀಡಿ ಗಾಂಧಿ ಪ್ರತಿಮೆಗೆ ನಮನ ಸಲ್ಲಿಸಿದರು.

G20 Finance, Central Bank, Deputies, Meeting,

Articles You Might Like

Share This Article