Saturday, September 23, 2023
Homeಅಂತಾರಾಷ್ಟ್ರೀಯಯಶಸ್ವಿ ಜಿ-20 : ಭಾರತದ ಆರ್ಥಿಕ ಕಾರಿಡಾರನ್ನು ಕೊಂಡಾಡಿದ ಹಲವು ರಾಷ್ಟ್ರಗಳು

ಯಶಸ್ವಿ ಜಿ-20 : ಭಾರತದ ಆರ್ಥಿಕ ಕಾರಿಡಾರನ್ನು ಕೊಂಡಾಡಿದ ಹಲವು ರಾಷ್ಟ್ರಗಳು

- Advertisement -

ವಾಷಿಂಗ್ಟನ್, ಸೆ. 12- ಜಿ 20 ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಿದ ಭಾರತವನ್ನು ದೊಡ್ಡ ಯಶಸ್ವಿ ಎಂದು ಬಣ್ಣಿಸಿರುವ ಅಮೆರಿಕಾ ಭಾರತ ಮತ್ತು ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್ ಅನ್ನು ಶ್ಲಾಘಿಷಿಸಿದೆ. ಭಾರತ ಮಧ್ಯಪ್ರಾಚ್ಯ ಮತ್ತು ಯುರೋಪ್ ಆರ್ಥಿಕ ಕಾರಿಡಾರ್‌ನಿಂದ ಹೊಸ ಸಂಪರ್ಕ ಯುಗ ಆರಂಭವಾಗಲಿದ್ದು, ಏಷ್ಯಾ ಹಾಗೂ ಇತರೆ 2 ಖಂಡಗಳ ನಡುವೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಅಮೆರಿಕಾ ಹೇಳಿದೆ.

ಮಹತ್ವಾಕಾಂಕ್ಷೆಯ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಅನ್ನು ಅಮೆರಿಕಾ, ಭಾರತ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುರೋಪಿಯನ್ ಒಕ್ಕೂಟದ ನಾಯಕರು ಜಂಟಿಯಾಗಿ ಘೋಷಣೆ ಮಾಡಲಾಗಿತ್ತು.

- Advertisement -

ಇಂದಿನ ಪಂಚಾಂಗ ಮತ್ತು ಇಂದಿನ ರಾಶಿಭವಿಷ್ಯ(12-09-2023)

ಭಾರತದ ಈ ಕ್ರಮವನ್ನು ಅಮೆರಿಕಾದ ಸ್ಟೇಟ್ ಡಿಪಾರ್ಟ್‍ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರು, ಇದು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಒಂದು ಹೆಗ್ಗುರುತಾಗಿದೆ. ಇದು ಯುರೋಪ್‍ನಿಂದ ಏಷ್ಯಾಕ್ಕೆ ಸಂಪರ್ಕದ ಹೊಸ ಯುಗವನ್ನು ಪ್ರಾರಂಭಿಸಲಿದೆ ಎಂದು ನಾವು ನಂಬುತ್ತೇವೆ. ಎರಡು ಖಂಡಗಳ ನಡುವೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಶಕ್ತಿ ಮತ್ತು ಡಿಜಿಟಲ್ ಸಂಪರ್ಕದ ಸಹಕಾರಕ್ಕೂ ಮುನ್ನುಡಿ ಬರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಅತ್ಯಂತ ಯಶಸ್ವಿ ಎಂದು ಬಣ್ಣಿಸಿದ ಅವರು, ರಷ್ಯಾ ಮತ್ತು ಚೀನಾದ ಪ್ರಮುಖರು ಗೈರುಹಾಜರಾಗಿದ್ದರೂ ಅಲ್ಲಿನ ಪ್ರತಿನಿಗಳು ಭಾಗವಹಿಸಿದ್ದರು. ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಪ್ರತಿಯೊಬ್ಬರೂ ಗೌರವಿಸಬೇಕೆಂಬ ಜಿ20 ಘೋಷಣೆಯನ್ನು ನಾವು ಒಪ್ಪಿಕೊಳ್ಳುತ್ತೇವೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದು, ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.

#G20Summit, #IndiaMiddleEastEuropecorridor, #boosts #railcompanies, #stocks,

- Advertisement -
RELATED ARTICLES
- Advertisment -

Most Popular