ಹುಲಿ ಎಂದೂ ಹುಲ್ಲು ತಿನ್ನಲ್ಲ : ಸ್ವಪಕ್ಷೀಯರ ವಿರುದ್ಧವೇ ರೆಡ್ಡಿ ಕೆಂಡಾಮಂಡಲ

Social Share

ಬಳ್ಳಾರಿ,ನ.5- ಹುಲಿ ಬೇಟೆಗೆ ನಿಂತರೆ, ಬೇಟೆಯಾಡಿಯೇ ತೀರುತ್ತದೆ. ನಾನು ಬೇಟೆಗಿಳಿದೇ ತೀರುತ್ತೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮತ್ತೆ ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಕಾನೂನಿನ ಹೋರಾಟದಲ್ಲಿ ತಾತ್ಕಲಿಕವಾಗಿ ಹಿನ್ನಡೆಯಾಗಿರಬಹುದು.

ಹಾಗಂತ ನಾನು ಕೈಕಟ್ಟಿ ಕೂತಿಲ್ಲ. ಹುಲಿ ಬೇಟೆಗೆ ಇಳಿದಾಗ ಎಂದೂ ಕೂಡ ಹುಲ್ಲು ತಿನ್ನುವುದಿಲ್ಲ. ತಿನ್ನುವುದು ಮಾಂಸವೇ ಎಂದು ಪರೋಕ್ಷವಾಗಿ ತಮ್ಮ ರಾಜಕೀಯ ಎದುರಾಳಿಗಳ ವಿರುದ್ಧವೂ ಗುಡುಗಿದರು.
ಒಬ್ಬ ಹುಡುಗ ನನ್ನನ್ನು ನೋಡಿ ಹುಲಿ ಬಂತು ಎಂದು ಕೂಗಿದ.

ಸುಮ್ಮನೆ ಇದ್ದರೆ ನಮ್ಮನ್ನು ರಾಜಕೀಯವಾಗಿ ಮುಗಿಸಲು ನಮ್ಮಿಂದ ಬೆಳೆದವರೇ ಖೆಡ್ಡಾ ತೋಡುತ್ತಾರೆ. ಕೆಲವು ಬಾರಿ ಸೌಮ್ಯವಾಗಿಯೂ ವರ್ತಿಸಬೇಕು ಮತ್ತೊಂದು ಬಾರಿ ಹುಲಿಯಂತೆಯೂ ಇರಬೇಕೆಂದು ಹೇಳಿದರು.

ಕೆಲವರು ನನ್ನಿಂದಲೇ ಬೆಳೆದು ರಾಜಕೀಯದಲ್ಲಿ ಮುಂದೆ ಬಂದವರು ಈಗ ಬಳ್ಳಾರಿ ಬಿಟ್ಟರೆ ಹೋದರೆ ಸಾಕು ಎಂದು ಯೋಚಿಸುತ್ತಿದ್ದಾರೆ. ಭಗವಂತ ಅಂಥವರಿಗೆ ಒಳೆಯದನ್ನೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ. ಸದ್ಯಕ್ಕೆ ನಾನು ಯಾರ ವಿರುದ್ದವೂ ಮಾತನಾಡುವುದಿಲ್ಲ ಎಂದರು.

ಕಳೆದ ಒಂದೂವರೆ ವರ್ಷದಿಂದಲೂ ನಾನು ಮನೆ ಬಿಟ್ಟು ಆಚೆ ಬಂದಿಲ್ಲ. ಜಿಲ್ಲೆಯ ರಾಜಕಾರಣದಲ್ಲೂ ಹಸ್ತಕ್ಷೇಪ ಮಾಡಿಲ್ಲ. ಆದರೆ ಕೆಲವರು ಜನಾರ್ಧನ ರೆಡ್ಡಿ ಬಳ್ಳಾರಿಯಿಂದ ಹೊರ ಹೋದರೆ ನಾವು ರಾಜಕೀಯವಾಗಿ ಮತ್ತಷ್ಟು ಬೆಳೆಯಬಹುದು ಎಂದುಕೊಂಡಿದ್ದಾರೆ ಎಂದು ಹೇಳಿದರು.

ರಾಜ್ಯದ ಹಲವೆಡೆ ನಿಷೇಧಿತ PFI ಪದಾಧಿಕಾರಿಗಳ ಮನೆಗಳ ಮೇಲೆ NIA ದಾಳಿ

ಸುಮ್ಮನೆ ಕೂತರೆ ಜನರು ನಮ್ಮನ್ನು ಕೈಲಾಗದವರು ಎಂದುಕೊಳ್ಳುತ್ತಾರೆ. ನಾನು ಸುಮ್ಮನೆ ಕೂರುವ ವ್ಯಕ್ತಿಯಲ್ಲ. ರಾಜಕೀಯವಾಗಿ ಹೋರಾಟ ಹೇಗೆ ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದರು.

ಬಳ್ಳಾರಿ ಅಭಿವೃದ್ಧಿಗೆ ನಮ್ಮ ಕುಟುಂಬ ಬದ್ದವಾಗಿದೆ. ಅಕಾರ ಇರಲಿ, ಇಲ್ಲದಿರಲಿ ಜಿಲ್ಲೆಯಲ್ಲಿ ಆಗಬೇಕಾದ ಕೆಲಸಕಾರ್ಯಗಳಿಗೆ ನಾವು ಎಂದೂ ಅಡ್ಡಿಪಡಿಸಿಲ್ಲ. ನಮ್ಮ ಸಹೋದರ ಸೋಮಶೇಖರ ರೆಡ್ಡಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ ಎಂದು ಜನಾರ್ಧನ ರೆಡ್ಡಿ ಸಮರ್ಥಿಸಿಕೊಂಡವರು.

Articles You Might Like

Share This Article