ರೆಡ್ಡಿ ಪಕ್ಷ ಬಿಜೆಪಿಗೆ ಸಂಕಷ್ಟವೇ..? ಕಾಂಗ್ರೆಸ್, ಜೆಡಿಎಸ್ ವೇಗಕ್ಕೆ ಕಡಿವಾಣವೇ.?

Social Share

ಬೆಂಗಳೂರು,ಡಿ.26- ಒಂದು ಕಾಲದಲ್ಲಿ ಬಿಜೆಪಿಯ ತನು,ಮನ,ಧನ ಎಲ್ಲವೂ ಆಗಿದ್ದ ಬಳ್ಳಾರಿಯ ಗಣಿಧಣಿ ಜನಾರ್ಧನ ರೆಡ್ಡಿ ಅವರನ್ನು ಪಕ್ಷಕ್ಕೆ ಪುನಃ ಸೇರ್ಪಡೆ ಮಾಡಿಕೊಳ್ಳಲಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಸಿಡಿದೆದ್ದು ಹೊಸ ರಾಜಕೀಯ ಪಕ್ಷ ಕಟ್ಟಿದ್ದಾರೆ.

ರಾಷ್ಟ್ರೀಯ ಪಕ್ಷಗಳ ಅಬ್ಬರದಲ್ಲಿ ಇಂದು ಘಟಾನುಘಟಿ ಪ್ರಾದೇಶಿಕ ಪಕ್ಷಗಳೇ ಮಖಾಡೆ ಮಲಗಿ ಮೋದಿ – ಅಮಿತ್ ಷಾ ಮುಂದೆ ಶರಣಾಗುತ್ತಿರುವ ಸಂದರ್ಭದಲ್ಲಿ ಜರ್ನಾನರೆಡ್ಡಿ ಅವರ ಹೊಸ ಪಕ್ಷ ಅಸ್ಥಿತ್ವ ಉಳಿಸಿಕೊಳ್ಳಲಿದೆಯೇ ಇಲ್ಲವೇ ಇದು ಕೂಡ ಹತ್ತರಲ್ಲಿ ಹನ್ನೊಂದು ಆಗಲಿದಿಯೇ ಎಂಬ ಸಹಜ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಜರ್ನಾನರೆಡ್ಡಿ ಹೊಸ ಪಕ್ಷ ಬರಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಸಂಕಷ್ಟ ತಂದೊಡ್ಡಲಿದೆಯೇ ಇಲ್ಲವೇ ಕಾಂಗ್ರೆಸ್ ಹಾಗೂ ಜೆಡಿಎಸ್ ವೇಗಕ್ಕೆ ಕಡಿವಾಣ ಹಾಕಲಿದಿಯೇ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಪ್ರಾರಂಭವಾಗಿದೆ.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳ ಹುಟ್ಟುವಿಕೆ ಹಾಗೂ ವಿನಾಶ ಹೊಂದಿರುವ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ, ಇಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಯೋಗ ಅಷ್ಟೊಂದು ಯಶಸ್ವಿಯಾಗಿಲ್ಲ ಎಂಬುದಕ್ಕೆ ನೂರಾರು ನಿದರ್ಶನಗಳನ್ನು ಕಾಣಬಹುದು.

ತಮಿಳುನಾಡಿನ ಕರಾವಳಿಯಲ್ಲಿ ಚಂಡಮಾರುತ ಎಚ್ಚರಿಕೆ ಕೇಜ್ ಅಳವಡಿಕೆ

ಮೈಸೂರು ಮೂಲದ ಸಾಹುಕಾರ ಚೆನ್ನಯ್ಯನವರ ಪ್ರಜಾಪಕ್ಷ, ಶಾಂತವೇರಿ ಗೋಪಾಲಗೌಡರ ಸಂಯುಕ್ತ ಮತ್ತು ಪ್ರಜÁ ಸೋಷಿಯಲಿಸ್ಟ್ ಪಕ್ಷಗಳು, ಕೆಂಗಲ್ ಹನುಮಂತಯ್ಯನವರ ಸುರಾಜ್ಯ ಪಕ್ಷ, ಕೆ.ಎಚ್. ಪಾಟೀಲರ ರೆಡ್ಡಿ ಕಾಂಗ್ರೆಸ್ ಪಕ್ಷ, ದೇವರಾಜ್ ಅರಸುರವರ ಅರಸು ಕಾಂಗ್ರೆಸ್, ಗುಂಡೂರಾಯರ ಇಂದಿರಾ ಕಾಂಗ್ರೆಸ್,

ಎ.ಕೆ. ಸುಬ್ಬಯ್ಯನವರ ಕನ್ನಡನಾಡು, ಬಂಗಾರಪ್ಪವನರ ಕರ್ನಾಟಕ ಕ್ರಾಂತಿ ರಂಗ- ಕರ್ನಾಟಕ ಕಾಂಗ್ರೆಸ್, ರಾಮಕೃಷ್ಣ ಹೆಗೆಡೆಯವರ ಲೋಕಶಕ್ತಿ, ಸಾರಿಗೆ ಮತ್ತು ಪತ್ರಿಕೋದ್ಯಮಿ ವಿಜಯ ಸಂಕೇಶ್ವರರ ಕನ್ನಡನಾಡು, ಶ್ರೀರಾಮುಲುರವರ ಬಿಎಸ್‍ಅರ್ ಪಕ್ಷ, ಪ್ರಭಾಕರ ರೆಡ್ಡಿಯವರ ಕನ್ನಡ ಪಕ್ಷ,

ವಾಟಾಳ್ ನಾಗರಾಜರ ಕನ್ನಡ ಚಳುವಳಿ ವಾಟಾಳ್ ಪಕ್ಷ, ಲಂಕೇಶರ ಪ್ರಗತಿ ರಂಗ, ನೈಸ್‍ರೋಡ್ ಖ್ಯಾತಿಯ ಅಶೋಕ್ ಖೇಣಿಯವರ ಕರ್ನಾಟಕ ಮಕ್ಕಳ ಪಕ್ಷ, ಕೆಲವು ಬುದ್ಧಿಜೀವಿಗಳು ಮತ್ತು ಚಿಂತಕರಿಂದ ಸರ್ವೋದಯ ಕರ್ನಾಟಕ ಪಕ್ಷ, ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷ,

ಕನ್ನಡ ಚಲನಚಿತ್ರ ನಟ ಉಪೇಂದ್ರರ ಪ್ರಜಾಕೀಯ, ನಿವೃತ್ತ ಪೋಲಿಸ್ ಅಧಿಕಾರಿ ಅನುಪಮಾ ಶೆಣೈ ಅವರ ಭಾರತೀಯ ಜನಶಕ್ತಿ ಕಾಂಗ್ರೆಸ್, ಶಾಸಕ ವರ್ತೂರು ಪ್ರಕಾಶರ ನಮ್ಮ ಕಾಂಗ್ರೆಸ್, ಮಹದಾಯಿ-ಕಳಸಾ-ಬಂಡೂರಿ ಹೋರಾಟದ ಸಮಯದಲ್ಲಿ ಹುಟ್ಟಿದ ಜನಸಾಮಾನ್ಯ ಕಾಂಗ್ರೆಸ್ ಇವು ಕಳೆದ ಆರು ದಶಕದಲ್ಲಿ ಕರ್ನಾಟಕದಲ್ಲಿ ಉದಯಿಸಿ ಮತ್ತು ಬಹುತೇಕ ಅಸ್ತಮಿಸಿದ ಪ್ರಾದೇಶಿಕ ಪಕ್ಷಗಳಾಗಿವೆ.

ದೇವೇಗೌಡರ ಜಾತ್ಯಾತೀತ ಜನತಾದಳವು ರಾಷ್ಟ್ರೀಯ ಪಕ್ಷವೋ, ಪ್ರಾದೇಶಿಕ ಪಕ್ಷವೋ ಎಂಬ ಗೊಂದಲದಲ್ಲಿದೆ. ಅದರ ಪ್ರಭಾವ ಕೆಲವೇ ಪ್ರದೇಶಕ್ಕೆ ಸೀಮಿತವಾಗಿದ್ದು, ಅದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಲಿಲ್ಲ ಮತ್ತು ರಾಷ್ಟ್ರೀಯ ಪಕ್ಷವಾಗಿಯೂ ಕಾಣಿಸುತ್ತಿಲ್ಲ.

ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿದು, ಕೇಂದ್ರದಲ್ಲಿ ಕಿಂಗ್ ಮೇಕರ್ ಆಗಿ, ದೆಹಲಿಗೆ ಸಡ್ಡು ಹೊಡೆದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದ್ದರೆ, ಇದು ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ಅಧಿಕಾರ ಹೋಗಲಿ, ಚುನಾವಣೆಯಲ್ಲಿ ಒಂದು ಗೌರವಾನ್ವಿತ ಸೀಟುಗಳನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ? ಇವುಗಳಲ್ಲಿ ಕೆಲವು ಪಕ್ಷಗಳು ಖಾತೆಗಳನ್ನು ತೆರೆಯಲೂ ಅಸಮರ್ಥವಾಗಿ ಮುಳುಗಿವೆ. ಕೆಲವು ಪಕ್ಷಗಳು ಒಂದಂಕಿ ಸೀಟುಗಳಿಗೆ ತೃಪ್ತಿಪಟ್ಟರೆ, ಒಂದೆರಡು ಪಕ್ಷಗಳು ಕಷ್ಟದಲ್ಲಿ ಎರಡಂಕಿ ತಲುಪಿವೆ.

ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗಡೆ, ಬಂಗಾರಪ್ಪ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದರಾದರೂ ಯಶಸ್ಸು ಕಾಣಲಿಲ್ಲ. ಬಂಗಾರಪ್ಪ ಕರ್ನಾಟಕ ಕಾಂಗ್ರೆಸ್ ಕಟ್ಟಿದಾಗ ಇಡೀ ರಾಜ್ಯದಲ್ಲಿ 10 ಸ್ಥಾನಗಳನ್ನು ಗೆಲ್ಲಲಷ್ಟೇ ಸಾಧ್ಯವಾಯಿತು. ಅದೇ ರೀತಿ ರಾಮಕೃಷ್ಣ ಹೆಗಡೆ ಲೋಕಶಕ್ತಿ ಕಟ್ಟಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಲೋಕಸಭೆಗೆ ಸ್ರ್ಪಧಿಸಿದಾಗ ಮೂರು ಸ್ಥಾನಗಳು ಮಾತ್ರ ದಕ್ಕಿದವು. ನಂತರ ಅವು ಕಾರಣಾಂತರಗಳಿಂದ ಇತರ ಪಕ್ಷಗಳಲ್ಲಿ ವಿಲೀನಗೊಂಡವು.

ಜನತಾ ಪರಿವಾರದ ಪಳೆಯುಳಿಕೆಯಾಗಿ ಉಳಿದಿರುವ ಜೆಡಿಎಸ್, ಮಾಜಿ ಪ್ರಧಾನಿ ದೇವೇಗೌಡರಿಂದಾಗಿ ಹಳೆ ಮೈಸೂರು ಪ್ರಾಂತದಲ್ಲಿ ಗಟ್ಟಿಯಾಗಿ ಉಳಿದುಕೊಂಡಿದೆ. ಇಡೀ ರಾಜ್ಯದಲ್ಲಿ ತನ್ನ ಶಕ್ತಿ ವೃದ್ಧಿಸಿಕೊಳ್ಳಲು ಹೆಣಗುತ್ತಿದೆ. ಪರಿಸ್ಥಿತಿಗಳ ಪ್ರಯೋಜನ ಪಡೆದು ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಸಮ್ಮಿಶ್ರ ಸರಕಾರದಲ್ಲಿ ಭಾಗವಹಿಸಿ ಅಧಿಕಾರದ ರುಚಿಯನ್ನೂ ಕಂಡಿದೆ.

ದೇಶದ ಬಹುತೇಕ ಹಿಂದಿ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳ ಸರ್ಕಾರಗಳು ಇವೆ. ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರ (ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಮೈತ್ರಿ ಸರ್ಕಾರ)ಗಳಲ್ಲಿ ಪ್ರಾದೇಶಿಕ ಪಕ್ಷಗಳ ಸರ್ಕಾರ ಇವೆ ದಲ್ಲಿ ಪ್ರಾದೇಶಿಕ ಪಕ್ಷದ ಪರಿಕಲ್ಪನೆ ಚುರುಕುಗೊಳ್ಳುತ್ತದೆ ಮತ್ತ ಅದೇ ವೇಗದಲ್ಲಿ ಮಣ್ಣುಗೂಡುತ್ತದೆ ಕೂಡ.ಸುವರ್ಣ ವಿಧಾನಸೌಧದಲ್ಲಿ ಕೋವಿಡ್ ಲಸಿಕಾ ಕೇಂದ್ರ ಆರಂಭ

ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆಯನ್ನು ಜನಸಾಮಾನ್ಯರಲ್ಲಿ ಬಿಂಬಿ ಸುವಲ್ಲಿ, ಅಚ್ಚೊತ್ತುವುದರಲ್ಲಿ ಅವರ ಚಿಂತನೆಯನ್ನು ಬದಲಿ ಸುವುದರಲ್ಲಿ ಈ ಪಕ್ಷಗಳ ಧುರೀಣರು ವಿಫಲರಾದದ್ದು ಈ ಪಕ್ಷಗಳ ಹಿನ್ನಡೆಗೆ ಕಾರಣವಾಯಿತು.

ಇದಕ್ಕೂ ಮೇಲಾಗಿ ಈ ಯಾವ ಪಕ್ಷಗಳೂ ಒಂದು ಸದೃಢ ನೆಲೆಗಟ್ಟು, ಅದರ್ಶ, ಯೋಜನೆಗಳು, ತತ್ವ, ನೀತಿ- ನಿರೂಪಣೆಯ ಮೇಲೆ ಉದಯಿಸಲಿಲ್ಲ. ಈ ಪಕ್ಷಗಳ ಹಿಂದೆ ಇರುವವರು, ಅವರು ಈ ಹಿಂದೆ ಇರುವ ಪಕ್ಷಗಳಿಂದ ನಿರ್ಲಕ್ಷಿಸಲ್ಪಟ್ಟ, ಹೊರಹಾಕಲ್ಪಟ್ಟ, ವರ್ಚಸ್ಸನ್ನು ಕಳೆದುಕೊಂಡ ಧುರೀಣರು ಇರುತ್ತಿದ್ದು, ತಮ್ಮ ಹಠ ಸಾಧಿಸಲು, ತಾವಿನ್ನೂ ರಾಜಕೀಯದಲ್ಲಿ ಪ್ರಸ್ತುತ ಎಂದು ತೋರಿಸಲು, ರಾಜಕೀಯ ದ್ವೇಷ ಮತ್ತು ಪ್ರತಿಕಾರ ಸಾಧಿಸಲು, ಪುನಃ ವೇದಿಕೆ ಏರಲು, ಕನಿಷ್ಠ ಕೆಲವು ಸೀಟುಗಳನ್ನಾದರೂ ಗಳಿಸಿ ಅಧಿಕಾರ ಹಂಚುವಿಕೆಯ ಚೌಕಾಶಿಯಲ್ಲಿ ಮೇಲುಗೈ ಸಾಧಿಸಲು? ಹೀಗೆ ಜನಸಾಮಾನ್ಯರಿಗೆ ಅರ್ಥವಾಗದ ರಾಜಕೀಯ ತಂತ್ರದ ಅಗೋಚರ ಅಜೆಂಡಾಗಳು ಇತ್ತೇ ವಿನಃ ಪ್ರಣಾಳಿಕೆಗಳಲ್ಲಿ ತೋರಿಸುವ ಕನ್ನಡ ನಾಡು, ನುಡಿ, ಅಸ್ಮಿತೆ ನಾಡಿನ ಅಭಿವೃದ್ಧಿಗಳೆಲ್ಲವೂ ತೋರಿಕೆಗೆ ಸೀಮಿತವಾದವು.

ಪ್ರಾದೇಶಿಕ ಪಕ್ಷಗಳು ಮುನ್ನೆಲೆಗೆ ಬಂದರೆ ತಮ್ಮತನ ಸಂಕಷ್ಟದಲ್ಲಿ ಸಿಲುಕಬಹುದು ಎನ್ನುವ ಅವ್ಯಕ್ತ ಚಿಂತನೆ ಇದ್ದು, ಅವರು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಒಲವು ತೋರಿಸುವುದು ಕಷ್ಟ.ಈ ನಿಟ್ಟಿನಲ್ಲಿ ಕರ್ನಾಟಕದ ರಾಜಕಾರಣಿಗಳು ಬಹು ಹಿಂದೆ ಇರುವುದೇ ಪ್ರಾದೇಶಿಕ ಪಕ್ಷ ನೆಲೆ ಕಾಣದಿರುವ ಹಿಂದಿನ ಕಾರಣ. ಸದ್ಯೋಭವಿಷ್ಯದಲ್ಲಿ ಇಂಥ ಜನಪ್ರಿಯ ಮತ್ತು ವರ್ಚಸ್ವಿ ಧುರೀಣರು ಹೊರ ಹೊಮ್ಮುವ ಸಾಧ್ಯತೆ ಕೂಡಾ ಕಡಿಮೆ.

Gali Janardhana Reddy, new party, BJP, Congress, JDS,

Articles You Might Like

Share This Article