ಇಸ್ಲಾಮಾಬಾದ್,ಮೇ.27-ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಹಿರಿಯ ಉಪಾಧ್ಯಕ್ಷೆ ಮರ್ಯಮ್ ನವಾಜ್ ಅವರು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಅವರಿಗೆ ಇನ್ನು ನಿಮ್ಮ ಆಟ ಮುಗಿಯಿತು ಎಂದು ಲೇವಡಿ ಮಾಡಿದ್ದಾರೆ.
ಪಾಕಿಸ್ತಾನದ ವೆಹಾರಿಯಲ್ಲಿ ಪಿಎಂಎಲ್-ಎನ್ ಯುವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿರುವ ಅವರು, ನಿಮ್ಮ ಪಕ್ಷದ ಹಲವಾರು ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಹೀಗಾಗಿ ನಿಮ್ಮ ಆಟ ಇನ್ನು ನಡೆಯುವುದಿಲ್ಲ ಎಂದು ಅವರು ಕಿಚಾಯಿಸಿದ್ದಾರೆ.
ಮೇ 9 ರ ಮೇಹೆಮ್ ಅನ್ನು ಅನುಸರಿಸಲು 70 ಕ್ಕೂ ಹೆಚ್ಚು ವಕೀಲರು ಮತ್ತು ಪಕ್ಷದ ನಾಯಕರು ಪಾಕಿಸ್ತಾನ್ ತೆಹ್ರೀಕï-ಇ-ಇನ್ಸಾಫ್‍ನಿಂದ ಹೊರ ಹೋಗುತ್ತಿದ್ದಾರೆ. ನಾಯಕನೇ ನರಿಯಾಗಿರುವಾಗ ಜನರು ಹೇಗೆ ನಿಲ್ಲುತ್ತಾರೆ? ಕಳೆದ ವರ್ಷ ಏಪ್ರಿಲ್‍ನಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಅಕಾರದಿಂದ ವಜಾಗೊಂಡ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಪಹಾಸ್ಯ ಮಾಡಿದ್ದಾರೆ.
ಈಗಾಗಲೇ ಇಮ್ರಾನ್‍ಖಾನ್ ಪಕ್ಷದ ಹಲವಾರು ಹಿರಿಯ ನಾಯಕರುಗಳನ್ನು ಪೊಲೀಸರು ಬಂಸಿರುವುದರಿಂದ ನೂರಾರು ಮಂದಿ ಪಕ್ಷ ತೊರೆಯುತ್ತಿರುವ ಹಿನ್ನೆಲೆಯಲ್ಲಿ ಮರ್ಯಮ್ ಅವರು ಈ ಹೇಳಿಕೆ ನೀಡಿದ್ದಾರೆ.
#GameOver, #NawazSharif, #Daughter, #MaryamNawaz, #Mocks, #ImranKhan,