ಗಂಧದಗುಡಿ ಕಣ್ತುಂಬಿಕೊಂಡು ‘ಪುನೀತ’ರಾದ ಅಭಿಮಾನಿಗಳು, ಅಪ್ಪು ಕನಸಿನ ಚಿತ್ರಕ್ಕೆ ಗ್ರಾಂಡ್ ಓಪನಿಂಗ್

Social Share

ಬೆಂಗಳೂರು,ಅ.28- ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರವನ್ನು ವಿಶ್ವದಾದ್ಯಂತ ಅಭಿಮಾನಿಗಳು ನೋಡಿ ಆನಂದಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ಶುರುವಾದ ಶೋಗಳು ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿವೆ. ರಾಜ್ಯಾದ್ಯಂತ ಅಪ್ಪು ಫ್ಯಾನ್ಸ್‍ಗಳು ಸಾವಿರಾರು ಟಿಕೆಟ್‍ಗಳನ್ನು ಕೊಂಡು ಎಲ್ಲರಿಗೂ ಹಂಚುತ್ತಿದ್ದಾರೆ.

ಥಿಯೇಟರ್‍ಗಳ ಮುಂದೆ ಪುನೀತ್ ರಾಜ್‍ಕುಮಾರ್ ಅವರ ದೊಡ್ಡ ದೊಡ್ಡ ಕಟೌಟ್‍ಗಳನ್ನು ಹಾಕಿ, ಅನ್ನಸಂತಪಣೆ ಮಾಡುತ್ತಾ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದು ವಿಶೇಷವಾಗಿತ್ತು.

ನವರಂಗಿ ಆಟವಾಡಲು ಹೋಗಿ ಪೊಲೀಸ್ ಅತಿಥಿಯಾದ ಬಾಲಿವುಡ್ ನಿರ್ಮಾಪಕ

ಒಂದು ವಾರದ ಹಿಂದಿನಿಂದಲೇ ಆನ್‍ಲೈನ್‍ನಲ್ಲಿ ಟಿಕೆಟ್‍ಗಳು ಬುಕಿಂಗ್ ಆಗಿದ್ದು, ತಮ್ಮ ನೆಚ್ಚಿನ ನಾಯಕ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿ ಬೀಳುತ್ತಿದ್ದರು. ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರವನ್ನು ಆನಂದಿಸಬೇಕೊ ಅಥವಾ ತಮ್ಮ ನೆಚ್ಚಿನ ನಾಯಕನನ್ನು ಕಳೆದುಕೊಂಡು ದುಃಖಿಸಬೇಕೋ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದದ್ದು ಕಂಡು ಬಂತು.

ಕನ್ನಡ ನಾಡಿನ ಅರಣ್ಯ ಸಂಪತ್ತು ಮತ್ತು ಸಂಸ್ಕøತಿ, ಕಲೆಯ ಕುರಿತು ಪುನೀತ್ ರಾಜಕುಮಾರ್ ಅವರಿಗೆ ಇದ್ದ ಕಾಳಜಿ, ಅಭಿಮಾನ, ಪ್ರೀತಿ, ಗೌರವ ಇವೆಲ್ಲವೂ ಗಂಧದಗುಡಿಯಲ್ಲಿ ಗೋಚರವಾಗುತ್ತದೆ. ಪರಿಸರ ಪ್ರೇಮಿ ಅಮೋಘ ವರ್ಷ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಅಪ್ಪು ಅವರ ಸಮಾಜಮುಖಿ ಚಿಂತನೆಗಳು ಅನಾವರಣಗೊಂಡಿದೆ.

ಪರಿಸರವನ್ನು ಉಳಿಸಿ-ಬೆಳೆಸಿ ಎಂದು ಸಾರುವ ಈ ಚಿತ್ರ ಇಂದಿನ ಸಮಾಜಕ್ಕೆ ದೊಡ್ಡ ಸಂದೇಶವಾಗಿ ನಿಲ್ಲುತ್ತದೆ. ಡಾ. ರಾಜಕುಮಾರ್ ಹುಟ್ಟೂರಾದ ಗಾಜನೂರು, ನಾಗರಹೊಳೆ ಅರಣ್ಯ, ಮಲೆನಾಡು, ಮಂಗಳೂರು, ಕಾಳಿ ನದಿ ಹೀಗೆ ಕರ್ನಾಟಕದ ನಾಲ್ಕು ದಿಕ್ಕುಗಳ ವನ್ಯ ಸಂಪತ್ತು ಸೇರಿದಂತೆ, ಅನೇಕ ವಿಷಯಗಳು ಈ ಸುಂದರ ದೃಶ್ಯ ಕಾವ್ಯದಲ್ಲಿ ಅನಾವರಣಗೊಂಡಿದವೆ. ಅಶ್ವಿನಿ ಪುನೀತ್ ರಾಜಕುಮಾರ್ ತನ್ನ ಪ್ರೀತಿಯ ಪತಿಗಾಗಿ ನಿರ್ಮಾಣ ಮಾಡಿದ ಚಿತ್ರ ಇದು.

ನಿನ್ನೆ ರಾತ್ರಿ ಸಿನಿ ಪ್ರಮುಖರಿಗೆ ಸೆಲೆಬ್ರಿಟಿ ಶೋ ಅನ್ನ ಆಯೋಜಿಸಲಾಗಿತ್ತು. ಚಿತ್ರ ನೋಡಿದ ಸಿನಿ ತಾರೆಯರು ಗಂಧದ ಗುಡಿ ಅದ್ಭುತವಾಗಿ ಮೂಡಿಬಂದಿದೆ. ಆದರೆ, ಅದನ್ನು ನೋಡಲು ಅಪ್ಪು ಇಲ್ಲ ಎಂದು ದುಃಖವನ್ನು ತೋಡಿಕೊಂಡರು.

ಕೆಲವರಂತೂ ದುಃಖ ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತರು. ಚಿತ್ರದಲ್ಲಿ ಕೆಲವು ಸನ್ನಿವೇಶಗಳನ್ನು ನೋಡಿದಾಗ,ಅಪ್ಪು ಅವರಿಗೆ ಮೊದಲೇ ಸಾವಿನ ಸೂಚನೆ ಇತ್ತೇ ಎಂಬುದು ಎಲ್ಲರ ಪ್ರಶ್ನೆ ಆಗಿಬಿಡುತ್ತದೆ.

ವಿಜಯೇಂದ್ರಗೆ ಸಿಎಂ ಸ್ಥಾನ ಸಿಗಲೆಂದು ಅಶ್ವಮೇಧ ಯಾಗ

ಕ್ರಿಕೆಟಿಗರಾದ ವಿ.ವಿ.ಎಸ್.ಲಕ್ಷ ್ಮಣ್, ಅನಿಲ್ ಕುಂಬ್ಳೆ, ಶ್ರೀನಾಥ್, ದ್ರಾವಿಡ್ ಸೇರಿದಂತೆ ಭಾರತದ ಅನೇಕ ಸಿನಿ ತಂತ್ರಜ್ಞರು ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದ ಗುಡಿಗೆ ಶುಭಕೋರಿದರು.

ತನ್ನ ನೆಚ್ಚಿನ ತಮ್ಮ ಅಪ್ಪು ಅಭಿನಯದ ಗಂಧದಗುಡಿ ಚಿತ್ರವನ್ನು ಹೃದಯ ಭಾರ ಮಾಡಿಕೊಂಡು ವೀಕ್ಷಿಸಿದ ರಾಘಣ್ಣ, ನರ್ತಕಿ ಚಿತ್ರಮಂದಿರದ ಮುಂದೆ ಅಭಿಮಾನಿಗಳೊಂದಿಗೆ ಮೈಮರೆತು ಕುಣಿದದ್ದು ವಿಶೇಷವಾಗಿತ್ತು.

Articles You Might Like

Share This Article