ಗಾಂಧಿನಗರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲಾಗುವುದು : ಮೇಯರ್ ಸಂಪತ್ ರಾಜ್

mayor-sampath-raj
ಬೆಂಗಳೂರು,ಜು.2- ನಗರದ ಹೃದಯ ಭಾಗದಲ್ಲಿರುವ ಗಾಂಧಿನಗರವನ್ನು ಮಾದರಿ ಪ್ರದೇಶವನ್ನಾಗಿ ಅಭಿವೃದ್ಧಿ ಪಡಿಸ ಲಾಗುವುದು ಎಂದು ಮೇಯರ್ ಸಂಪತ್ ರಾಜ್ ಇಂದಿಲ್ಲಿ ತಿಳಿಸಿದ್ದಾರೆ.  ಅಧಿಕಾರಿಗಳೊಂದಿಗೆ ಗಾಂಧಿನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಉದ್ದಿಮೆದಾರರು, ಚಲನಚಿತ್ರ ರಂಗದವರು ಹೆಚ್ಚಾಗಿ ದ್ದಾರೆ. ಇಲ್ಲಿ ವಾಹನಗಳಿಗಿಂತ ಪಾದಚಾರಿಗಳ ಸಂಖ್ಯೆಯೇ ಹೆಚ್ಚಾಗಿದೆ. ಹಾಗಾಗಿ ಈ ಪ್ರದೇಶ ವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಾಲಿಕೆ ತೀರ್ಮಾನಿಸಿದೆ ಎಂದರು.

ಪದೇ ಪದೇ ರಸ್ತೆ ಅಗೆಯು ವುದನ್ನು ತಪ್ಪಿಸಲು 6 ಕಡೆ ಟೆಂಡರ್‍ಶೂರ್ ಮಾದರಿಯಲ್ಲಿ ರಸ್ತೆ ನಿರ್ಮಾಣ ಮಾಡಲಾಗುವುದು. ಈ ಮಾದರಿಯಲ್ಲಿ ರಸ್ತೆ ನಿರ್ಮಾಣ ವಾದರೆ ಪದೇ ಪದೇ ರಸ್ತೆ ಅಗೆಯುವಂತಿಲ್ಲ. ಕೇಬಲ್ ಕಾಟವೂ ಇರುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಪಾದಚಾರಿಗಳ ಹಿತದೃಷ್ಟಿ ಯಿಂದ ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸಲಾಗುವುದು ಎಂದರು.  ಈ ಭಾಗದಲ್ಲಿರುವ ಉದ್ಯಾನವನಗಳನ್ನು ಆಕರ್ಷಣೀ ಯವಾಗಿ ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ. ಶೀಘ್ರವೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳ ಲಾಗಿದೆ ಎಂದರು.

ಇದಕ್ಕೂ ಮುನ್ನ ಶಾಸಕ ದಿನೇಶ್ ಗುಂಡೂರಾವ್ ಅವರೊಂದಿಗೆ ಮಂತ್ರಿಮಾಲ್ ಹಿಂಭಾಗದ ಸರ್ವೀಸ್ ರಸ್ತೆ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿ ಪರಿಶೀಲನೆ ನಡೆಸಿದ ಅವರು, ಈ ರಸ್ತೆಯನ್ನು ಅಭಿವೃದ್ದಿಪಡಿಸಿದರೆ ವಾಹನಗಳ ಸಂಚಾರ ಡೈವರ್ಟ್ ಆಗುತ್ತದೆ. ಅಲ್ಲದೆ ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿ ವಾಹನ ದಟ್ಟಣೆ ತಗ್ಗಲಿದೆ ಎಂದರು.

ಶಿವಾನಂದ ವೃತ್ತದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಿಸಲಾಗುತ್ತಿದ್ದು,ಇನ್ನು 8 ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಲೋಕಾ ರ್ಪಣೆಗೊಳ್ಳಲಿದೆ. ಈ ಸ್ಟೀಲ್‍ಬ್ರಿಡ್ಜ್ ಎತ್ತರವಾಗಿರು ವುದರಿಂದ ಕಾಮಗಾರಿಯಲ್ಲಿ ವಿಳಂಬ ವಾಗುತ್ತಿದ್ದು, ಇದರ ವೇಗವನ್ನು ಹೆಚ್ಚಿಸಿ ಶೀಘ್ರ ಸಾರ್ವಜನಿಕರ ಸೇವೆಗೆ ಲೋಕಾರ್ಪಣೆ ಗೊಳಿಸಲಾಗುವುದು ಎಂದರು.

Sri Raghav

Admin