ಗೌರಿ-ಗಣೇಶ ಹಬ್ಬ : ಗಗನಕ್ಕೇರಿದ ಹೂ-ಹಣ್ಣಿನ ಬೆಲೆ, ಆದರೂ ಮಾರುಕಟ್ಟೆಗಳಲ್ಲಿ ಜನಜಂಗುಳಿ

Social Share

ಬೆಂಗಳೂರು,ಆ.29-ಕೊರೊನಾ ಕಾಟದಿಂದಾಗಿ ಕಳೆದ ಎರಡು ವರ್ಷಗಳಿಂದ ಹಬ್ಬ ಆಚರಿಸಲು ಸಾಧ್ಯವಾಗದ ಹಿನ್ನಲ್ಲೆಯಲ್ಲಿ ಈ ಬಾರಿ ಗೌರಿ-ಗಣೇಶ ಹಬ್ಬ ಕಳೆ ಕಟ್ಟಿದ್ದು, ಬೆಲೆ ಏರಿಕೆಯ ನಡುವೆಯೂ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಜನ ಗೌರಿ-ಗಣೇಶ ಹಬ್ಬಕ್ಕೆ ಭರ್ಜರಿ ಶಾಪಿಂಗ್ ನಡೆಸುತ್ತಿದ್ದಾರೆ.

ಎರಡು ವರ್ಷಗಳ ನಂತರ ಹಬ್ಬ ಆಚರಣೆಗೆ ಅವಕಾಶ ಸಿಕ್ಕಿರುವುದರಿಂದ ಈ ಬಾರಿ ಗೌರಿ-ಗಣೇಶ ಹಬ್ಬ ಆಚರಣೆಗೆ ಜನ ಮುಗಿಬಿದ್ದಿದ್ದಾರೆ. ಹೀಗಾಗಿ ನಗರದ ಕೆ.ಆರ್ ಮಾರ್ಕೆಟ್ ಜನರಿಂದ ತುಂಬಿ ತುಳುಕುತ್ತಿದೆ ಮಾತ್ರವಲ್ಲ ನಗರದಲ್ಲಿರುವ ಎಲ್ಲಾ ಮಾರುಕಟ್ಟೆಗಳಲ್ಲೂ ಜನ ಜಂಗುಳಿ ಕಂಡು ಬರುತ್ತಿದ ಹೂವು, ಹಣ್ಣು ಸೇರಿದಂತೆ ಹಬ್ಬದ ಸಾಮಾಗ್ರಿಗಳ ಖರೀದಿ ಬಲು ಜೋರಾಗಿದೆ.

ಜನ ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ವ್ಯಾಪಾರ ನಡೆಸುತ್ತಿರುವ ಬೆನ್ನಲ್ಲೆ ಹಣ್ಣು-ಹೂವಿನ ಬೆಲೆ ಗಗನಕ್ಕೇರಿದೆ.
ವಸ್ತುಗಳ ಹಳೆ ದರ – ಇಂದಿನ ದರ – ನಾಳೆಯ ಸಾಧ್ಯತೆ ದರ
ಹೂಗಳ ದರ ವಿವರ.
ಗರಿಕೆ 20- 40 -60
ತಾವರೆ ಹೂ .10- 20 – 40
ಸೇವಂತಿಗೆ ಕೆ.ಜಿ -200 – 300- 600
ಗಣಗಲ ಹೂ 450- 600 – 800.
ತುಳಸಿ ಕುಚ್ಚಿಗೆ 30- 80 – 120.
ಚೆಂಡು ಹೂ ಕೆ.ಜಿ 60- 100 – 150.
ಪರ್ಪಲ್ ಬಟನ್ಸ್ 110 – 200 – 250.
ಮಲ್ಲಿಗೆ ಮಾರಿಗೆ. 70- 100 – 200
ಮಲ್ಲಿಗೆ ಕೆ.ಜಿ 700- 1000 – 1500
ಕನಕಾಂಬರ ಮಾರಿಗೆ. 70 – 100- 180/200.
ಕನಕಾಂಬರ ಕೆ.ಜಿಗೆ 1000- 1500 – 2000.
ಕಾಕಾಡ. 50 – 70 – 170.
ಕಾಕಾಡ ಕೆ.ಜಿ ಇಂದು 500- 600 – 809/900.
ಮಲ್ಲಿಗೆ ಮೊಗ್ಗು ಕೆ.ಜಿ 1600- 2000 – 2500.
ಪೆಟೆಲ್ಸï 700- 1000 – 2500
ರೋಸ್ ಬಂಚು 80- 150 – 200.
ತೋಮಾಲೆ ಹಾರ 2000 – 3009 – 4000.
ಬಿಳಿ ಗುಲಾಬಿ ಒಂದು ಕಟ್ಟು 30- 50 – 80.
ಕೆಂಪು ಗುಲಾಬಿ 40 – 80- 150.
ಪಿಂಕ್ ಗುಲಾಬಿ 30 – 50 – 80.
ಹಣ್ಣುಗಳು ದರದ ವಿವರ.
ಸೀಬೆಕಾಯಿ ಕೆ.ಜಿಗೆ .30 -50 – 70 ಕೆ.ಜಿ.
ಏಲಕ್ಕಿ ಬಾಳೆ ಕೆ.ಜಿಗೆ 60- 80 – 100.
ಸೀತಾಫಲ ಕೆ.ಜಿಗೆ 80 – 100 – 150.
ಮೂಸಂಬಿ 50- 70 – 80.
ಸೇಬು 100- 120 – 150/180.
ಬ್ಯಾಲದಕಾಯಿ ಇಂದು ಮೂರಕ್ಕೆ 20- 50 – 80.
ಬಾಳೆಕಂಬ ಜೊತೆಗೆ 20 – 50 – 80
ಮಾವಿನ ಎಲೆ 10 – 50 – 60.

Articles You Might Like

Share This Article