ಗಣೇಶ ಮೂರ್ತಿಗಳ ವಿಸರ್ಜನೆಗೆ ಸಿದ್ದಗೊಂಡಿವೆ 458 ಸ್ಥಳಗಳು

Social Share

ಬೆಂಗಳೂರು,ಆ.29- ಗಣೇಶಮೂರ್ತಿಗಳ ವಿಸರ್ಜನೆಗೆ ಪಾಲಿಕೆ ಸಕಲ ಸಿದ್ದತೆ ಪೂರ್ಣಗೊಳಿಸಿದೆ. ನಗರದಾದ್ಯಂತ ಗಣೇಶ ವಿಸರ್ಜನೆಗೆ 458 ಸ್ಥಳಗಳು ಸಿದ್ಧಗೊಳಿಸಲಾಗಿದೆ. ಸಾರ್ವಜನಿಕರ ಗಣೇಶಮೂರ್ತಿಗಳ ವಿಸರ್ಜನೆಗೆ ನಗರದಲ್ಲಿ 421 ಸಂಚಾರಿ ಟ್ಯಾಂಕರ್‍ಗಳನ್ನು ಸ್ಥಾಪಿಸಲಾಗಿದೆ.

ಜೊತೆಗೆ ದೊಡ್ಡ ಗಣೇಶ ವಿಗ್ರಹಗಳ ವಿಸರ್ಜನೆಗೆ 37 ಕಲ್ಯಾಣಿಗಳನ್ನು ಅಣಿಗೊಳಿಸಲಾಗಿದೆ. ಮನೆ, ಕಚೇರಿ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ವಿಸರ್ಜನೆಗೆ ಒಟ್ಟಾರೆ 458 ಸ್ಥಳಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಸಾರ್ವಜನಿಕರು ತಮ್ಮ ಮನೆಗಳ ಬಳಿಯೇ ಗಣೇಶ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಪಾಲಿಕೆಯ 8 ವಲಯಗಳ 27 ವಿಧಾನಸಭಾ ಕ್ಷೇತ್ರಗಳಲ್ಲಿ 421 ತಾತ್ಕಾಲಿಕ ಸಂಚಾರಿ ಟ್ಯಾಂಕರ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ.
5 ಇಂಚಿನಿಂದ 3 ಅಡಿ ಎತ್ತರದ ಎಲ್ಲ ಮಣ್ಣಿನ ಗಣೇಶ ಮೂರ್ತಿಗಳನ್ನು ಮೊಬೈಲ್ ಟ್ಯಾಂಕರ್‍ಗಳಲ್ಲಿ ವಿಸರ್ಜಿಸಲು ಅವಕಾಶ ಮಾಡಿಕೊಡಲಾಗಿದೆ.

ದೊಡ್ಡ ಮೂರ್ತಿಗಳನ್ನು ವಿಸರ್ಜನೆ ಮಾಡಲು ಒಟ್ಟು 37 ತಾತ್ಕಾಲಿಕ ಕಲ್ಯಾಣಿಗಳ ವ್ಯವಸ್ಥೆ. ಪಾಲಿಕೆ ವ್ಯಾಪ್ತಿಯ ಕಲ್ಯಾಣಿಗಳು, ಮೊಬೈಲ್ ಟ್ಯಾಂಕರ್‍ಗಳ ವಿವರ. ಪೂರ್ವ ವಲಯದಲ್ಲಿ ಹಲಸೂರು ಕೆರೆಯಲ್ಲಿ ಕಲ್ಯಾಣಿ ನಿರ್ಮಾಣ ಮಾಡಲಾಗಿದ್ದು, 107 ಮೊಬೈಲ್ ಟ್ಯಾಂಕರ್‍ಗಳ ವ್ಯವಸ್ಥೆ ಮಾಡಲಾಗಿದೆ.

ಪಶ್ಚಿಮ ವಲಯದಲ್ಲಿ ಸ್ಯಾಂಕಿ ಕೆರೆಯಲ್ಲಿ ಕಲ್ಯಾಣಿ ಹಾಗೂ 48 ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ.
ದಕ್ಷಿಣ ವಲಯದ ಯಡಿಯೂರು ಕೆರೆ ಹಾಗೂ ಎಸಿಐ ಲೇಔಟ್‍ನಲ್ಲಿ ಕಲ್ಯಾಣಿಗಳ ಜತೆಗೆ 51 ಟ್ಯಾಂಕರ್ ಸಿದ್ಧಗೊಳಿಸಲಾಗಿದೆ.
ದಾಸರಹಳ್ಳಿ ವಲಯದ ಚೊಕ್ಕಸಂದ್ರ ಕೆರೆದಲ್ಲಿ ಕಲ್ಯಾಣಿ ಹಾಗೂ 18 ಮೊಬೈಲ್ ಟ್ಯಾಂಕರ್.

ಬೊಮ್ಮನಹಳ್ಳಿ ವಲಯದಲ್ಲಿ ಕೂಡ್ಲು ದೊಡ್ಡಕೆರೆ, ಸಿಂಗಸಂದ್ರ ಕೆರೆ, ಅರಕೆರೆ ಕೆರೆಯಲ್ಲಿ ಕಲ್ಯಾಣಿ ಹಾಗೂ 59 ಮೊಬೈಲ್ ಟ್ಯಾಂಕರ್‍ಸಿದ್ಧವಾಗಿವೆ. ಮಹದೇವಪುರ ವಲಯದಲ್ಲಿ ಬಿ.ನಾರಾಯಣಪುರ ಕೆರೆ, ವಿಭೂತಿಪುರ, ಚೆಲ್ಕೆರೆ, ಕಲ್ಕೆರೆ, ಮೇಡಹಳ್ಳಿ, ಕಾಡುಗೋಡಿ ಕಾಶಿ ವಿಶ್ವನಾಥ ದೇವಸ್ಥಾನ, ವಾಗ್ದವಿ ವಿಲಾಸ್ ರಸ್ತೆ, ಕೈಕೊಂಡನಹಳ್ಳಿ ಕೆರೆ ಮತ್ತು ದೇವರಬೀಸನಹಳ್ಳಿ ಕಲ್ಯಾಣಿ ಹಾಗೂ 21 ಮೊಬೈಲ್ ಟ್ಯಾಂಕರ್‍ಗಳು.

ರಾಜರಾಜೇಶ್ವರಿ ನಗರ ವಲಯದ ಮಾದವಾರ, ಹೇರೋಹಳ್ಳಿ, ಉಲ್ಲಾಳ, ದುಬಾಸಿಪಾಳ್ಯ, ಗಾಂ ನಗರ, ಕೋಣಸಂದ್ರಕೆರೆ, ಜೆ.ಪಿ. ಪಾರ್ಕ್ ಆಟದ ಮೈದಾನದಲ್ಲಿ ಕಲ್ಯಾಣಿ, 113 ಮೊಬೈಲ್ ಟ್ಯಾಂಕರ್‍ಗಳು.

ಯಲಹಂಕ ವಲಯದ ಹೆಬ್ಬಾಳ, ಯಲಹಂಕ, ಅಟ್ಟೂರು, ಅಲ್ಲಾಳಸಂದ್ರ, ಕೋಗಿಲು, ಜಕ್ಕೂರು, ರಾಚೇನಹಳ್ಳಿ ಕೆರೆ, ಸಹಕಾರನಗರ ಗಣಪತಿ ದೇವ ಸ್ಥಾನ, ದೊಡ್ಡಬೊಮ್ಮಸಂದ್ರ ಕೆರೆ, ಬಿಇಎಲ್ ಲೇಔಟ್ ನ ರಾಘವೇಂದ್ರ ಸ್ವಾಮಿ ಮಠ, ಸಿಂಗಾಪುರ ಕೆರೆಯ ಕಲ್ಯಾಣಿ ಸೇರಿದಂತೆ, 4 ಮೊಬೈಲ್ ಟ್ಯಾಂಕರ್‍ಗಳನ್ನು ಪಾಲಿಕೆ ಕಲ್ಪಿಸಿಕೊಟ್ಟಿದೆ.

Articles You Might Like

Share This Article