ಸ್ನೇಹಿತನ ನಂಬಿ ತೆರಳಿದ ಬಾಲಕಿಯ ಮೇಲ ಸಾಮೂಹಿತ ಅತ್ಯಾಚಾರ

Social Share

ಲಖ್ನೋ,ಸೆ.24- ಸ್ನೇಹಿತನನ್ನು ನಂಬಿ ಆತನ ಹಿಂದೆ ತೆರಳಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಪ್ರತಾಪಘಡ ಜಿಲ್ಲೆಯ ದೇಲುಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗಜೇಡ್ ಅರಣ್ಯಪ್ರದೇಶದಲ್ಲಿ ನಡೆದಿದೆ.

ನನ್ನ ಮಗಳ ಸ್ನೇಹಿತನಾದ ಶಿವಂ ಎಂಬಾತ ಬೈಕ್‍ನಲ್ಲಿ ಕರೆದೊಯ್ದಿದ್ದಾನೆ. ಈಕೆಯ ಬರುವಿಕೆಗೆ ಕಾಡಿನಲ್ಲಿ ಇಬ್ಬರು ಕಾದು ನಿಂತಿದ್ದರು. ಆಗ ಎಲ್ಲ ಸೇರಿ ನನ್ನ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಬಾಲಕಿಯ ಚಿಕ್ಕಮ್ಮ ಆರೋಪಿಸಿದ್ದಾರೆ.

ಈ ವೇಳೆ ಆರೋಪಿಗಳು ಘಟನೆಯ ವಿಡಿಯೋ ಮಾಡಿದ್ದು, ಸುದ್ದಿಯನ್ನು ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ. ಬಾಲಕಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಆರೋಪಿಗಳಿ ಪರಾರಿಯಾಗಿದ್ದಾರೆ.

ರಸ್ತೆಬದಿಯಲ್ಲಿ ಬಾಲಕಿಯನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕೆಲ ಪರಿಚಿತ ಹುಡುಗರು ಮಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದು, ಇದೀಗ ಪೊಲೀಸರು ನಮ್ಮ ಮಗಳನ್ನು ಭೇಟಿಯಾಗಲು ಬಿಡುತ್ತಿಲ್ಲ ಎಂದು ಸಂತ್ರಸ್ತೆಯ ತಂದೆ ರೋಧಿಸಿದ್ದಾರೆ.

ಸಂಬಂಧಿಕರ ದೂರಿನ ಮೇರೆಗೆ ಶಿವಂ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Articles You Might Like

Share This Article