BIG NEWS: ಬೆಂಗಳೂರಿನಲ್ಲಿ ಸಾಮೂಹಿಕ ಅತ್ಯಾಚಾರ, ಮೂವರ ಬಂಧನ

Social Share

ಬೆಂಗಳೂರು,ನ.29- ಡ್ರಾಪ್ ನೆಪದಲ್ಲಿ ರ‍್ಯಾಪಿಡೋ ಬೈಕ್ ಸೇವೆ ಪಡೆದಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೇರಳ ಮೂಲದ 22 ವರ್ಷದ ಯುವತಿಯೊಬ್ಬಳು ಎಸ್‍ಜಿ ಪಾಳ್ಯ ದಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೋಗಲು ಮಧ್ಯರಾತ್ರಿ 12.30ರ ಸುಮಾರಿನಲ್ಲಿ ರ‍್ಯಾಪಿಡೋ ಆಪ್ ಮೂಲಕ ಬೈಕ್ ಬುಕ್ ಮಾಡಿದ್ದರು. ಮದ್ಯಪಾನ ಮಾಡಿದ್ದ ಯುವತಿ ಮಾರ್ಗಮಧ್ಯೆದಲ್ಲಿ ಅರೆಪ್ರಜ್ಞಾ ವಸ್ಥೆಯಲ್ಲಿದ್ದನ್ನು ಗಮನಿಸಿದ ರ್ಯಾಪಿಡೋ ಬೈಕ್ ಸವಾರ ತನ್ನ ಸ್ನೇಹಿತನಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ.

ಕಾಶ್ಮೀರಿ ಫೈಲ್ಸ್ 2.0 ಚಿತ್ರ ಮಾಡಿ: ಸಂಜಯ್ ರಾವತ್ ಸವಾಲು

ನಂತರ ಆ ಯುವತಿಯನ್ನು ಮನೆಗೆ ಡ್ರಾಪ್ ಮಾಡುವ ಬದಲು ನೀಲಾದ್ರಿ ನಗರದಲ್ಲಿರುವ ತನ್ನ ರೂಮ್‍ಗೆ ಕರೆದೊಯ್ದು ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರವೆಸಗಿದ್ದಾನೆ. ಆ ಸಂದರ್ಭದಲ್ಲಿ ಆರೋಪಿಯ ಗರ್ಲ್ ಫ್ರೆಂಡ್ ಕೂಡ ರೂಮ್‍ನಲ್ಲೆ ಇದ್ದಳು ಎಂಬುದು ಗೊತ್ತಾಗಿದೆ.

ಗಡಿ ವಿವಾದ ಸಮರ್ಥ ವಾದಕ್ಕೆ ಸಿದ್ಧ: CM ಬೊಮ್ಮಾಯಿ

ಮುಂಜಾನೆ 5 ಗಂಟೆ ಸಂದರ್ಭದಲ್ಲಿ ಯುವತಿಗೆ ಪ್ರಜ್ಞೆ ಬಂದಿದೆ. ಇದನ್ನು ಗಮನಿಸಿದ ಆರೋಪಿಗಳು ಯಾರಿಗಾದರೂ ಈ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ನಂತರ ಯುವತಿ ತನ್ನ ಸ್ನೇಹಿತೆಗೆ ವಿಷಯ ತಿಳಿಸಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ಮೂವರು ವಶಕ್ಕೆ:
ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ರ‍್ಯಾಪಿಡೋ ಬೈಕ್ ಸವಾರ ಶಹಾಬುದ್ಧಿನ್(26) ಅಕ್ತರ್(24) ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ವಿದ್ಯಾರ್ಥಿ ವೇತನ ಸ್ಥಗಿತ: ಕೇಂದ್ರದ ತೊಘಲಕ್ ನಿರ್ಧಾರದ ವಿರುದ್ಧ ಸುರ್ಜೆವಾಲ ಆಕ್ರೋಶ

ಸಂತ್ರಸ್ತ ಯುವತಿ ಬಿಟಿಎಂ ಲೇಔಟ್‍ನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ನೀಲಾದ್ರಿ ನಗರದ ಅಪಾರ್ಟ್‍ಮೆಂಟ್ ವೊಂದರಲ್ಲಿ ವಾಸವಾಗಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಕಳೆದ ಶುಕ್ರವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Gang, rape, Bengaluru, three, arrested,

Articles You Might Like

Share This Article