ವಿಶ್ವದ ಅತಿ ಉದ್ದದ ನದಿ ವಿಹಾರಕ್ಕೆ ಗಂಗಾ ವಿಲಾಸ್ ಐಷಾರಾಮಿ ಕ್ರೂಸ್ ರೆಡಿ

Social Share

ಲಕ್ನೋ,ಜ.11- ಕಳೆದ ಡಿಸಂಬರ್ 22 ರಂದು ಕೋಲ್ಕತ್ತಾದಿಂದ ಹೊರಟ್ಟಿದ್ದ ಗಂಗಾ ವಿಲಾಸ ಐಷರಾಮಿ ಕ್ರೂಸ್ ವಾರಣಾಸಿ ತಲುಪಿದೆ. ವಾರಣಾಸಿಯ ರಾಮನಗರ ಬಂದರಿಗೆ ಜ.7 ರಂದು ಆಗಮಿಸಬೇಕಿದ್ದ ಕ್ರೂಸ್ ಹವಾಮಾನ ವೈಪರೀತ್ಯದಿಂದಾಗಿ 4 ದಿನಗಳ ಕಾಲ ತಡವಾಗಿ ಬಂದರು ತಲುಪಿದೆ.

ರಾಮನಗರ ಬಂದರಿಗೆ ಆಗಮಿಸಿದ ಕ್ರೂಸ್‍ಗೆ ಭವ್ಯ ಸ್ವಾಗತ ಕೋರಲಾಯಿತು. ಐಷಾರಾಮಿ ಕ್ರೂಸ್ ಯಾತ್ರೆಗೆ ಜ. 13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. 80 ಪ್ರಯಾಣಿಕರ ಸಾಮಥ್ರ್ಯದ 18 ಸೂಟ್‍ಗಳನ್ನು ಹೊಂದಿರುವ ಈ ಕ್ರೂಸ್ ಅಸ್ಸಾಂನ ದಿಬ್ರುಗಡಲ್ಲಿರುವ ಅತಿ ಉದ್ದದ ಜಲಮಾರ್ಗದಲ್ಲಿ ಪ್ರಯಾಣ ಬೆಳೆಸಲಿದೆ.

ಪ್ರಯಾಣಿಕರೊಂದಿಗೆ 51 ದಿನಗಳ ಕಾಲ ಪ್ರಯಾಣ ಬೆಳೆಸಲಿರುವ ಈ ಕ್ರೂಸ್ 15 ದಿನಗಳ ಕಾಲ ಬಾಂಗ್ಲಾ ದೇಶವನ್ನು ಹಾದು ಹೋಗಿ ನಂತರ ಅಸ್ಸಾಂನ ಬ್ರಹ್ಮಪುತ್ರ ನದಿಯ ಮೂಲಕ ದಿಬ್ರುಗಡ ತಲುಪಲಿದೆ.

ಐಷಾರಾಮಿ ಕ್ರೂಸ್ ಭಾರತ ಮತ್ತು ಬಾಂಗ್ಲಾದೇಶದ 5 ರಾಜ್ಯಗಳ ಮೂಲಕ 3,200 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ವರದಿಗಳ ಪ್ರಕಾರ, ಇದು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ ಮತ್ತು ಬಾಂಗ್ಲಾದೇಶದ ಒಟ್ಟು 27 ನದಿ ವ್ಯವಸ್ಥೆಗಳ ಮೂಲಕ ಹಾದುಹೋಗುತ್ತದೆ. ಏತನ್ಮಧ್ಯೆ, ವಿಹಾರವು ಮೂರು ಪ್ರಮುಖ ನದಿಗಳಾದ ಗಂಗಾ, ಬ್ರಹ್ಮಪುತ್ರ ಮತ್ತು ಮೇಘನಾ ಮೂಲಕವೂ ಹಾದುಹೋಗುತ್ತದೆ.

ಪೌರ ಕಾರ್ಮಿಕರ ಕೈಗೆ ಬಂತು ಹೈಟೆಕ್ ಕಸ ಗುಡಿಸುವ ಯಂತ್ರಗಳು

ಅಧಿಕೃತ ಹೇಳಿಕೆಯ ಪ್ರಕಾರ, ವಿಶ್ವ ಪರಂಪರೆಯ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ನದಿ ಘಟ್ಟಗಳು ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾ, ಅಸ್ಸಾಂನ ಗುವಾಹಟಿ, ಬಿಹಾರದ ಪಾಟ್ನಾ ಮತ್ತು ಜಾರ್ಖಂಡ್‍ನ ಸಾಹಿಬ್‍ಗಂಜ್‍ನಂತಹ ಪ್ರಮುಖ ನಗರಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ 51 ದಿನಗಳ ವಿಹಾರ ಇದಾಗಿರಲಿದೆ.

ಗಂಗಾ ವಿಲಾಸ್ ವಿಶ್ವದ ಅತಿ ಉದ್ದದ ನದಿ ವಿಹಾರ ಎಂದು ಗಮನಿಸಬೇಕು. ಹಡಗು 62 ಮೀಟರ್ ಉದ್ದ, 12 ಮೀಟರ್ ಅಗಲವಿದ್ದು, ಜಲಮಾರ್ಗದಲ್ಲಿ ಆರಾಮವಾಗಿ ಸಾಗುತ್ತದೆ. ಇದು ಮೂರು ಡೆಕ್‍ಗಳು ಮತ್ತು 18 ಸೂಟ್‍ಗಳನ್ನು ಹೊಂದಿದೆ, ಪ್ರವಾಸಿಗರಿಗೆ ಸ್ಮರಣೀಯ ಮತ್ತು ಐಷಾರಾಮಿ ಅನುಭವವನ್ನು ಒದಗಿಸಲು ಎಲ್ಲಾ ಸೌಕರ್ಯಗಳನ್ನು ಹೊಂದಿದೆ.

Ganga Vilas, luxury, cruise, reaches, Varanasi,

Articles You Might Like

Share This Article