ಬೆಂಗಳೂರು,ಮಾ.17- ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಒಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಸಿ 35 ಸಾವಿರ ಬೆಲೆಯ ಗಾಂಜಾ, 900ರೂ. ನಗದು, ಬೈಕ್ ಹಾಗೂ ಇನ್ನಿತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಂಗೇರಿ ಉಪನಗರದ ನಾಗದೇವನಹಳ್ಳಿ, ಎಸ್‍ಎಂವಿ ಲೇಔಟ್ ನಿವಾಸಿ ಶ್ರೀನಿವಾಸ ಅಲಿಯಾಸ್ ಚಿನ್ನಿ(50) ಬಂಧಿತ ಆರೋಪಿ. ವಿಶ್ವೇಶ್ವರಯ್ಯ ಲೇಔಟ್, 1ನೇ ಬ್ಲಾಕ್, ಉಳ್ಳಾಳು ಕಡೆಗೆ ಹೋಗುವ 80 ಅಡಿ ರಿಂಗ್ ರಸ್ತೆಯ ದಿ ಪಬ್ ಹೌಸ್ ಬಳಿ ಶಿರ್ಕೆ ಕಡೆಗೆ ಹೋಗುವ ರಸ್ತೆ ಬದಿಯ ಹೊಂಗೆ ಮರದ ಕೆಳಗೆ ವ್ಯಕ್ತಿಯೊಬ್ಬ ಗಾಂಜಾ ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಪೊಲೀಸರಿಗೆ ಲಭಿಸಿದೆ.
ನಾಳೆ 108 ಅಡಿ ಮಾದಪ್ಪ ಪ್ರತಿಮೆ ಲೋಕಾರ್ಪಣೆ
ತಕ್ಷಣ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ 35 ಸಾವಿರ ಬೆಲೆಯ 1 ಕೆಜಿ 100 ಗ್ರಾಂ ಗಾಂಜಾ, 900ರೂ.ನಗದು, ಕೃತ್ಯಕ್ಕೆ ಉಪಯೋಗಿಸಿದ್ದ 30 ಚಿಕ್ಕಚಿಕ್ಕ ಜಿಪ್‍ಲಾಕ್ ಪ್ಲಾಸ್ಟಿಕ್ ಕವರ್‍ಗಳು, ಬ್ಯಾಗ್‍ಗಳು, ನೀಲಿ ಬಣ್ಣದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಅಪ್ಪು ಜನ್ಮದಿನ : ಸಮಾಧಿ ಬಳಿಗೆ ಹರಿದು ಬಂದ ಅಭಿಮಾನಿ ಸಾಗರ
ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಲಕ್ಷ್ಮಣ ಬಿ ನಿಂಬರಗಿ, ಸಹಾಯಕ ಪೊಲೀಸ್ ಆಯುಕ್ತರಾದ ಪರಮೇಶ್ವರ್ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಪ್ರವೀಣ್‍ಕುಮಾರ್ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
Ganja, selling, accused, arrested,