10 ಲಕ್ಷ ಮೌಲ್ಯದ ಗಾಂಜಾ ವಶ

Social Share

ಬೆಂಗಳೂರು, ಜು.12- ಆಂಧ್ರ ಪ್ರದೇಶದ ವಿಶಾಖ ಪಟ್ಟಣದಿಂದ ಮಾದಕ ವಸ್ತು ಗಾಂಜಾವನ್ನು ಖರೀದಿಸಿಕೊಂಡು ನಗರಕ್ಕೆ ತಂದು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಅಂತರ್‍ರಾಜ್ಯ ಆರೋಪಿಯೊಬ್ಬನನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿ, 10 ಲಕ್ಷ ಬೆಲೆ ಬಾಳುವ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬಸವನಪುರ ಗ್ರಾಮದ ಟಿ ಜಾನ್ ಕಾಲೇಜಿನ ಬಳಿ ಮಾದಕ ವಸ್ತು ಗಾಂಜ ಮಾರಾಟ ಮಾಡುತ್ತಿದ್ದ ಮೂಲತಃ ಆಂಧ್ರ ಪ್ರದೇಶದ ವಿಜಯವಾಡ ನಿವಾಸಿಯನ್ನು ಬಂಸಲಾಗಿದೆ. ಆರೋಪಿಯಿಂದ 25 ಕೆಜಿ ತೂಕದ ಮಾದಕ ವಸ್ತು ವಶಪಡಿಸಕೊಳ್ಳಲಾಗಿದೆ. ಅದರ ಒಟ್ಟು ಮೌಲ್ಯ 10 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.

ಆರೋಪಿಯನ್ನು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಆರೋಪಿಯು ವಿಶಾಖ ಪಟ್ಟಣದಿಂದ ಗಾಂಜವನ್ನು ಒಂದು ಕೆಜಿಗೆ 5 ಸಾವಿರ ರೂ.ನಂತೆ ಖರೀದಿಸಿ ನಗರ ತಂದು ಬನ್ನೇರುಘಟ್ಟ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ ಕಡೆಗಳಲ್ಲಿ ಬಿಡಿ ಬಿಡಿಯಾಗಿ ವಿದ್ಯಾರ್ಥಿಗಳಿಗೆ, ಮಾದಕ ವೆಸನಿಗಳಿಗೆ ಮಾರಾಟ ಮಾಡಿ ಹಣ ಗಳಿಸುತಿದುದ್ದು ಗೊತ್ತಾಗಿದೆ.

ಆಗ್ನೇಯ ವಿಭಾಗದ ಉಪಪೊಲೀಸ್ ಆಯುಕ್ತ ಸಿ.ಕೆ. ಬಾಬ ಅವರ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತ ಸುಧಾಕರ್ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಚಂದ್ರಕಾಂತ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿ ಗಾಂಜ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article