ಬೆಂಗಳೂರು, ಆ.6- ಹಿಜಾಬ್, ಹಲಾಲ್ ನಂತರ ಈಗ ಮತ್ತೊಂದು ಧರ್ಮ ಹೋರಾಟ ಶುರುವಾಗಿದೆ. ಬರುವ ಗಣೇಶ ಹಬ್ಬದ ಸಂದರ್ಭದಲ್ಲಿ ಯಾರೂ ಕೂಡ ಅನ್ಯಧರ್ಮೀಯರು ತಯಾರಿಸಿದ ಮೂರ್ತಿಗಳನ್ನು ಖರೀದಿಸಬಾರದು ಎಂಬ ಅಭಿಯಾನ ಶುರುವಾಗಿದೆ.
ವಿಘ್ನನಿವಾರಕನ ಚೌತಿ ಸಂದರ್ಭದಲ್ಲಿ ಹೊಸ ಸಮಸ್ಯೆಗಳು ಎದುರಾಗುತ್ತಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಮತ್ತೊಂದು ತಲೆ ನೋವು ಶುರುವಾಗಿದೆ. ಶ್ರೀರಾಮ ಸೇನೆ ವತಿಯಿಂದ ಮುಸಲ್ಮಾರ ಅಂಗಡಿಗಳ ಬದಲಾಗಿ ಹಿಂದೂಗಳ ಅಂಗಡಿಗಳಲ್ಲಿ ಸಿಂಗಾರದ ಇತರ ವಸ್ತುಗಳನ್ನು ಖರೀದಿ ಮಾಡುವಂತೆ ಅಭಿಯಾನ ನಡೆಸಲಾಗುತ್ತಿದೆ.
ರಾಜ್ಯದಲ್ಲಿರುವ ಎಲ್ಲಾ ಗಣೇಶ ಉತ್ಸವ ಸಮಿತಿಗಳು ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಶ್ರೀರಾಮ ಸೇನೆಯ ಸಂಚಾಲಕ ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ. ಹಬ್ಬಕ್ಕೆ ಬೇಕಾಗಿರುವ ವಸ್ತುಗಳನ್ನು ಹಿಂದೂಗಳ ಕೇವಲ ಅಂಡಿಗಳಲ್ಲಿ ಖರೀದಿ ಮಾಡಿ ಹಬ್ಬವನ್ನು ಸಗಡ ಸಂಭ್ರಮದಿಂದ ಆಚರಿಸಿ ಡಿಜಿ ಬಳಸುವ ಬದಲು ಮೈಕ್‍ಸೆಟ್‍ನ್ನು ಸಾಧ್ಯವಾದಷ್ಟು ಬಳಸುವಂತೆ ಹೇಳಿದ್ದಾರೆ.
ಈಗಾಗಲೇ ಲೌಡ್‍ಸ್ಪಿಕರ್ ನಿಯಮಗಳನ್ನು ಕೆಲವರು ಉಲ್ಲಂಘಿಸುತ್ತಿದ್ದಾರೆ. ಆದರೆ ರಾಜ್ಯಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.