ಹೊತ್ತಿ ಉರಿದ ಕಸದ ರಾಶಿ, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ

Social Share

ಬೆಂಗಳೂರು,ಫೆ.14- ಕಸದ ರಾಶಿ ಹಾಗೂ ಒಣಹುಲ್ಲಿಗೆ ಹೊತ್ತಿಕೊಂಡ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಬಂಡೆಪಾಳ್ಯ ಪೊಲೀಸ ಠಾಣೆ ವ್ಯಾಪ್ತಿಯ ಬೊಮ್ಮನಹಳ್ಳಿಯ ತಗ್ಗು ಪ್ರದೇಶದಲ್ಲಿ ಬಿಬಿಎಂಪಿ ಹಾಗೂ ಸುತ್ತಮುತ್ತಲಿಂದ ಕಸ ತಂದು ಹಾಕಲಾಗಿತ್ತು.
ನಿನ್ನೆ ಸಂಜೆ ಈ ಕಸದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕಸದ ಸುತ್ತ ಇದ್ದ ಒಣಹುಲ್ಲಿಗೂ ತಾಗಿ ಬೆಂಕಿ ಆವರಿಸಿಕೊಂಡಿದೆ.
ಸುದ್ದಿ ತಿಳಿದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಸರ್ಜಾಪುರದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ನಿರತರಾದರು. ಇಂದು ಮಧ್ಯಾಹ್ನವಾದರೂ ಬೆಂಕಿ ತಹಬದಿಗೆ ಬರದೆ ಸಿಬ್ಬಂದಿ ಹರಸಾಹಸ ಪಡುವಂತಾಯಿತು.
ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದ ದಟ್ಟ ಹೊಗೆ ಆವರಿಸಿದ್ದರಿಂದ ನಿವಾಸಿಗಳು ಆತಂಕಕ್ಕೊಳಗಾದರು. ನಾಲ್ಕು ವಾಹನಗಳಲ್ಲಿ 20ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳು ನಿರಂತರವಾಗಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸುತ್ತಿದ್ದರಾದರೂ ಮಧ್ಯಾಹ್ನದವರೆಗೂ ಬೆಂಕಿ ತಹಬದಿಗೆ ಬಂದಿಲ್ಲ. ಸ್ಥಳದಲ್ಲಿ ಬಂಡೆಪಾಳ್ಯ ಠಾಣೆ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

Articles You Might Like

Share This Article