ಹಬ್ಬ ಮುಗಿದ ಬೆನ್ನಲ್ಲೇ ಗಬ್ಬು ನಾರುತ್ತಿದೆ ಬೆಂಗಳೂರು

Social Share

ಬೆಂಗಳೂರು,ಅ.6- ಮುಂಬರುವ 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಆರ್ಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಆದರೆ, ತೆಲುಗು ಭಾಷಿಕರು ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಎಲ್ಲಾ ರೀತಿಯ ಬೆಂಬಲ ನೀಡಲಾಗುತ್ತದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಲುಗು ಭಾಷೆ ಹೆಚ್ಚಾಗಿರುವ ಕೋಲಾರ, ರಾಯಚೂರು ಸೇರಿದಂತೆ ಗಡಿ ಭಾಗದ ಕ್ಷೇತ್ರಗಳಲ್ಲಿ ನಮ್ಮ ಕ್ಷೇತ್ರದ ಅಭ್ಯರ್ಥಿಗಳಿಗೆ ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ ಎಂದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೇರೆ ರಾಜ್ಯಗಳು ಸೇರಿದಂತೆ 150 ಕ್ಷೇತ್ರಗಳಲ್ಲಿ ಬಿಆರ್ಎಸ್ ಅಭ್ಯರ್ಥಿ ಕಣಕ್ಕಿಳಿಸುವ ಉದ್ದೇಶ ಹೊಂದಿದ್ದು, ಇದು ರಾಷ್ಟ್ರ ರಾಜಕಾರಣದಲ್ಲಿ ಆಗುವ ಬೆಳವಣಿಗೆಯನ್ನು ಆಧರಿಸಿದೆ. ತಾವು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ.

ನಮ್ಮದು ಸಣ್ಣ ಪಕ್ಷ ಕರ್ನಾಟಕದಲ್ಲಿ ಮಾತ್ರ ಸಾಗುವಳಿ ಚೀಟಿ ಇದೆ. ಇಲ್ಲಿ ಕೃಷಿ ಮಾಡುತ್ತೇವೆ. ರಾಷ್ಟ್ರ ರಾಜಕಾರಣದಲ್ಲಿ ಬಗರ್ ಹುಕುಂ ಸಾಗುವಳಿಗೆ ಅರ್ಜಿ ಹಾಕಲ್ಲ. ನಮ್ಮ ಹೋರಾಟ ಶಕ್ತಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದರು.

2023ರ ವಿಧಾನಸಭೆ ಚುನಾವಣೆ ನಂತರ ರಾಷ್ಟ್ರ ರಾಜಕಾರಣದಲ್ಲಿನ ಬದಲಾವಣೆಗೆ ವೇದಿಕೆಯಾಗಬಹುದು. ಕಲ್ಯಾಣ ಕರ್ನಾಟಕದಲ್ಲಿ 15ರಿಂದ 20 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಸುವ ವಿಶ್ವಾಸವಿದೆ ಎಂದು ಹೇಳಿದರು.
ಕಾಂಗ್ರೆಸ್, ಬಿಜೆಪಿಗಿಂತ ಹೆಚ್ಚು ಗೆಲ್ಲುತ್ತೇವೆ.

ಮುಂಬೈ ಕರ್ನಾಟಕ ಭಾಗದಲ್ಲೂ ಪಕ್ಷದ ಅಸ್ಥಿತ್ವ ಸಾಬೀತಾಗಲಿದೆ. ನ.1ರಿಂದ ಪಂಚರತ್ನ ಕಾರ್ಯಕ್ರಮ ಆರಂಭವಾಗಲಿದ್ದು, 130 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಅಂತಿಮ ಗೊಳಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಅಕ್ಟೋಬರ್ 17-18ರಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು.

ತೆಲಂಗಾಣದಲ್ಲಿ ರೈತರಿಗೆ 24 ಗಂಟೆ ವಿದ್ಯುತ್ ನೀಡುವ ರೈತ ಬಂಧು ಹಾಗೂ ದಲಿತ ಬಂಧು ಕಾರ್ಯಕ್ರಮ ಮೆಚ್ಚುಗೆಯಾಗಿದೆ. ಅಕಾಲಿಕವಾಗಿ ರೈತ ಮೃತಪಟ್ಟರೆ 5 ಲಕ್ಷ ರೂ. ಎಲ್ಐಸಿ ವಿಮಾ ಹಣ ಬರಲಿದೆ ಎಂದರು.
ಈ ಕಾರ್ಯಕ್ರಮಗಳು ಹೆಚ್ಚು ಉಪಯುಕ್ತವಾಗಿದೆ. ಇದನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಲಾಗುವುದು. ರೈತ ಬಂಧು ಮತ್ತು ದಲಿತ ಬಂಧು ಕಾರ್ಯಕ್ರಮದ ವೀಕ್ಷಣೆಗೆ ಪ್ರತಿ ಜಿಲ್ಲೆಯಿಂದ 500 ಮಂದಿಯನ್ನು ಕಳುಹಿಸಿಕೊಡಲು ಸಲಹೆ ಮಾಡಿದ್ದಾರೆ ಎಂದು ಹೇಳಿದರು.

ಅಕ್ಟೋಬರ್ 8ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನತಾ ಮಿತ್ರ ಸಮಾರೋಪ ನಡೆಯಲಿದ್ದು, ಅಂದಿನಿಂದಲೇ ಬಿಬಿಎಂಪಿ ಚುನಾವಣಾ ಪ್ರಚಾರ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಜೋಡೋ ಯಾತ್ರೆ:

ರಾಜ್ಯದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ಜೋಡೋ ಯಾತ್ರೆಯಾಗಿದೆ ಎಂದು ಟೀಕಿಸಿದ ಅವರು, ಎರಡು ದಿನಗಳ ವಿಶ್ರಾಂತಿಗಾಗಿ ಆಗಮಿಸಿದ ಕಾಂಗ್ರೆಸ್ ಅನಾಯಕಿ ಸೋನಿಯಾಗಾಂ ಅವರು 5-10 ನಿಮಿಷ ಯಾತ್ರೆಯಲ್ಲಿ ಭಾಗಿಯಾಗುವುದರಿಂದ ಜನರ ಪರಿಸ್ಥಿತಿ ಬದಲಾಗುವುದಿಲ್ಲ. ಜನರ ಸಮಸ್ಯೆ ಅರಿಯಲು ಯಾತ್ರೆ ಮಾಡುತ್ತಿಲ್ಲ ಎಂದರು.

ಈಗಾಗಲೇ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದರೂ ಏನಾಯಿತು ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ನೆಲಕಚ್ಚಿದಾಗ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಸಂಮೃದ್ಧವಾಗಿದ್ದಾಗಲೇ ಏನೂ ಮಾಡಿಲ್ಲ. ಈಗ ಖರ್ಗೆ ಅಧ್ಯಕ್ಷರಾಗುವುದರಿಂದ ರಾಜ್ಯದಲ್ಲಿ ಏನೂ ಪರಿಣಾಮವಾಗುವುದಿಲ್ಲ. 6 ತಿಂಗಳಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿರುವುದರನ್ನು ಇಲ್ಲಿಗೆ ಬಿಡುವುದಿಲ್ಲಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಡಾ.ಶ್ರೀನಿವಾಸಮೂರ್ತಿ, ಆರ್. ಮಂಜುನಾಥ್, ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್ ಮಹಾನಗರ ಅಧ್ಯಕ್ಷ ಆರ್. ಪ್ರಕಾಶ್, ಮುಖಂಡರಾದ ಮುನೇಗೌಡ ಉಪಸ್ಥಿತರಿದ್ದರು.

Articles You Might Like

Share This Article