ಬೈಕ್‍ಗೆ ಟಿಟಿ ವಾಹನ ಡಿಕ್ಕಿ, ಗಾರ್ಮೆಂಟ್ಸ್ ಉದ್ಯೋಗಿ ಸಾವು

Social Share

ಬೆಂಗಳೂರು, ಜ.3- ಅತಿ ವೇಗವಾಗಿ ಬಂದ ಟಿಟಿ ವಾಹನವೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಗಾರ್ಮೆಂಟ್ಸ್ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.

ಮೂಲತಃ ಪಾವಗಡದ ಲೋಹಿತ್(23) ಮೃತಪಟ್ಟ ಗಾರ್ಮೆಂಟ್ಸ್ ಉದ್ಯೋಗಿ. ಇವರು ಕೆಂಗೇರಿ ಉಪನಗರದಲ್ಲಿ ವಾಸವಾಗಿದ್ದರು. ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಔಟರ್ ರಿಂಗ್ ರಸ್ತೆಯ ಉಲ್ಲಾಳ ಲೇಕ್ ಸಮೀಪ ಬೈಕ್‍ನಲ್ಲಿ ಕೆಂಗೇರಿ ಉಪನಗರದ ಕಡೆಗೆ ಬರುತ್ತಿದ್ದಾಗ ಅತಿ ವೇಗವಾಗಿ ಬಂದ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಲೋಹಿತ್ ಗಂಭೀರ ಗಾಯಗೊಂಡರು.

ವೇದಿಕೆ ಬಿಟ್ಟಿಳಿಯದ ನಾಯಕರು, ತಳಮಟ್ಟದಲ್ಲಿ ಸೊರಗುತ್ತಿರುವ ಕಾಂಗ್ರೆಸ್

ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ.

ಸುದ್ದಿ ತಿಳಿದು ಕಾಮಾಕ್ಷಿ ಪಾಳ್ಯ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Garments employee, dies, bike, accident,

Articles You Might Like

Share This Article