ಸೂರತï, ಜ 6- ಇಂದು ಮುಂಜಾನೆ ಗುಜರಾತ್‍ನ ಸೂರತ್ ಜಿಲ್ಲಾಯಲ್ಲಿ ಕಾರ್ಖಾನೆಯೊಂದರ ಬಳಿ ನಿಲ್ಲಿಸಿದ್ದ ರಾಸಾಯನಿಕ ಟ್ಯಾಂಕನಿಂದ ಸೋರಿಕೆಯಾದ ವಿಷಕಾರಿ ಹೊಗೆಯನ್ನು ಸೇವಿಸಿ 6 ಕಾರ್ಮಿಕರು ಸಾವನ್ನಪ್ಪಿಲ್ಲಾರೆ ಮತ್ತು ಸುಮಾರು 20 ಮಂದಿ ಪ್ರಜ್ಞಾಹೀನರಾಗಿದ್ದಾರೆ.
ಮುಂಜಾನೆ 4.20 ರ ಸುಮಾರಿಗೆ ಸಚಿನ್ ಕೈಗಾರಿಕಾ ಪ್ರದೇಶದಲ್ಲಿರುವ ಡೈಯಿಂಗ್ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಾಸಾಯನಿಕ ಟ್ಯಾಂಕರ್‍ನಿಂದ ವಿಷಕಾರಿ ಹೊಗೆ ಸೋರಿಕೆ ಯಾರಿಗೂ ತಿಳಿದಿರಲಿಲ್ಲ ಕಾರ್ಖಾನೆಯ ಒಳಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಮುಂಜಾನೆ ಕೆಲವರು ವಾಸನೆ ಬರುತ್ತಿದೆ ಎಂದು ಹೊರಗೆ ಬಂದಾಗ ಉಸಿರಾಟದ ಸಮಸ್ಯಯಾಗಿ 26 ಕಾರ್ಮಿಕರು ಪ್ರಜ್ಞಾಹೀನರಾಗಿ ಬಿದ್ದರು ಎಂದು ಅಕಾರಿಗಳು ತಿಳಿಸಿದ್ದಾರೆ.
ಅವರೆಲ್ಲರನ್ನು ಹೊಸ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಇದುವರೆಗೆ ಕನಿಷ್ಠ ಐದು ಕಾರ್ಮಿಕರು ಸಾವನ್ನಪ್ಪಿದ್ದಾ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸಂತ್ ಪರೀಕ್ ತಿಳಿಸಿದ್ದಾರೆ.
ಟ್ಯಾಂಕರ್‍ನ ವಾಲ್ವï ನಿಂದ ಸೋರಿಕೆಯಾಗಿದ್ದು ಅನ್ನು ಮುಚ್ಚುವಲ್ಲಿ ಅಗ್ನಿಶಾಮಕ ದಳದವರು ಯಶಸ್ವಿಯಾದರು. ಸುದ್ದಿ ತಿಳಿಯುತ್ತಿದ್ದಂತೆ ಜನರು ಕಾರ್ಖಾನೆ ಬಳಿ ಜಮಾಯಿಸಿದು ರಾಸಾಯನಿಕ ಅಪಾಯ ತಿಳಿಸಿ ಪೋಲಿಸರು ದೂರದಲ್ಲೆ ತಡೆದಿದ್ದರು .ಕಾರ್ಖಾನೆ ಅಕ್ಕಪಕ್ಕದ ಪರಿಶೀಲನೆ ನಡೆಸಲಾಗಿದೆ .ಎಲ್ಲಿಯವರೆಗೆ ಗಾಳಿಯಲ್ಲಿ ರಾಸಾಯನಿಕ ಹರಡಿದೆ ಎಂಬುದರ ಬಗ್ಗೆ ಕಾರ್ಯಾಚರಣೆ ನಡೆಸಲಾಗಿದೆ
