ಬೆಂಗಳೂರು,ಫೆ.4- ಬಿಬಿಎಂಪಿಗೆ ಬಜೆಟ್ ರೂಪಿಸುವ ಬಗ್ಗೆ ಚಟುವಟಿಕೆಗಳನ್ನು ಆರಂಭಿಸುತ್ತೇವೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಇರುವ ಆದಾಯದ ಮೂಲಗಳು ಹಾಗೂ ರಾಜ್ಯ ಸರ್ಕಾರದಿಂದ ಬರುವ ಆದಾಯದ ಮೂಲಗಳನ್ನು ಅಂದಾಜಿಸಿ ಬಿಬಿಎಂಪಿ ಬಜೆಟ್ ರೂಪಿಸುವ ಚಟುವಟಿಕೆಯನ್ನು ಸದ್ಯದಲ್ಲೇ ಆರಂಭಿಸಲಾಗುವುದು.
ನಗರದ ಅಭಿವೃದ್ಧಿಯ ಬಗ್ಗೆ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂಬುದನ್ನು ಬಜೆಟ್ನಲ್ಲಿ ಅಳವಡಿಸಲಾಗುವುದು. ಪ್ರತಿ ದಿನದ ಪಾಲಿಕೆಯ ನಿರ್ವಹಣೆಗೆ ಎಷ್ಟು ವೆಚ್ಚ ತಗಲುತ್ತದೆ. ಹಾಗೆಯೇ ಹೊಸ ಕಾಮಗಾರಿಗಳಿಗೆ ಎಷ್ಟು ಅನುದಾನ ಬೇಕಾಗುತ್ತದೆ ಎಂಬುದನ್ನು ನೋಡಬೇಕಾಗುತ್ತದೆ.
ಇದಕ್ಕೆ ಸಂಬಂಧಪಟ್ಟಂತೆ ಸಮಗ್ರ ವರದಿ ರೂಪಿಸಬೇಕಾಗುತ್ತದೆ. ಹೊಸ ಯೋಜನೆಗಳ ಬಗ್ಗೆ ಜನಪ್ರತಿನಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಲಿದ್ದೇವೆ ಎಂದು ಅವರು ಹೇಳಿದರು.
