ಗೌರಿ ಹತ್ಯೆ ಆರೋಪಿಗಳಿಗೆ ಬೆಳಗಾವಿಯ ಗನ್ ಸೆಂಟರ್ನಲ್ಲಿ ತರಬೇತಿ
ಬೆಂಗಳೂರು, ಜ.21-ಪತ್ರಕರ್ತೆ ಗೌರಿ ಹತ್ಯೆ ಆರೋಪಿ ರಿಷಿಕೇಶ್ನ ಬೆನ್ನತ್ತಿರುವ ಎಸ್ಐಟಿ ಆರೋಪಿಯ ಸಂಪರ್ಕಜಾಲಗಳು ಮತ್ತು ಸಂಚಿನ ಮೂಲವನ್ನು ಪತ್ತೆಹಚ್ಚಲು ತೀವ್ರ ತನಿಖೆ ಕೈಗೊಂಡಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ರಿಷಿಕೇಶ್ನನ್ನು ಮಹಾರಾಷ್ಟ್ರ ಹಾಗೂ ಬೆಳಗಾವಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದೆ.
ಹತ್ಯೆಗೂ ಮುನ್ನ ಆರೋಪಿಗಳಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯ ಗಡಿಭಾಗದಲ್ಲಿನ ಬೆಳಗಾವಿಯ ಕಾಡಂಚಿನಲ್ಲಿ ನಾಲ್ಕು ದಿನಗಳ ಕಾಲ ಬಂದೂಕಿನ ತರಬೇತಿ ನೀಡಲಾಗಿತ್ತು ಎಂಬ ಮಾಹಿತಿ ಇದೆ. ಹೀಗಾಗಿ ಎಸ್ಐಟಿ ತಂಡದ ಪೊಲೀಸರು ರಿಷಿಕೇಶ್ನನ್ನು ಬೆಳಗಾವಿಯ ಅರಣ್ಯ ಭಾಗಕ್ಕೆ ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತರಬೇತಿ ಅವಧಿಯಲ್ಲಿ ಎಷ್ಟು ಸುತ್ತು ಗುಂಡು ಹಾರಿಸಲಾಯಿತು, ಯಾರೆಲ್ಲ ಭಾಗವಹಿಸಿದ್ದರು ಎಂಬ ಮಾಹಿತಿಯನ್ನು ಕಲೆ ಹಾಕುವ ಪ್ರಯತ್ನ ಮಾಡಿದೆ.
ಜೊತೆಗೆ ಆರೋಪಿ ರಿಷಿಕೇಶ್ ಮಹಾರಾಷ್ಟ್ರದ ಔರಂಗಬಾದ್ನಲ್ಲಿ ಪತಂಜಲಿ ಉತ್ಪನ್ನಗಳ ಮಾರಾಟ ಮಳಿಗೆ ನಡೆಸುತ್ತಿದ್ದು, ಎಸ್ಐಟಿ ತಂಡ ಅಲ್ಲಿಗೂ ತೆರಳಿ ಮಾಹಿತಿ ಪಡೆದುಕೊಂಡಿದೆ.