ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಗೌತಮ್ ಅದಾನಿ

Social Share

ನವದೆಹಲಿ, ಅ.30- ವಿಶ್ವದಲ್ಲೇ ಮೊದಲ ಭಾರಿಗೆ ಏಷ್ಯಾ ಮೂಲದ ವ್ಯಕ್ತಿಯೊಬ್ಬರು ವಿಶ್ವದ ಅತಿ ಹೆಚ್ಚು ವೈಯಕ್ತಿಕ ಆಸ್ತಿ ಹೊಂದಿರುವ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಭಾರತದ ಗೌತಮ್ ಅದಾನಿ ಈ ಸಾಧನೆ ಮಾಡಿದ್ದಾರೆ.

ಬ್ಲೂಂಬರ್ಗ್ ಬಿಲೆನಿಯರ್ ಇಂಡೆಕ್ಸ್‍ನಲ್ಲಿ ಗುಜರಾತ್ ಮೂಲದ ಗೌತಮ್ ಅದಾನಿ ಪ್ರಾನ್ಸ್‍ನ ಲೂಯಿಸ್ ವಿಟಾನ್‍ನ ಸಂಸ್ಥಾಪಕ ಬರ್ನಾಡ್ ಅರ್ನಾಲ್ಟ್‍ರನ್ನು ಹಿಂದಿಕ್ಕಿದ್ದು ಮೂರನೇ ಸ್ಥಾನಕ್ಕೇರಿದ್ದಾರೆ.

ಅಮೆಜಾನ್‍ನ ಜೆಫ್ ಬೆಜೋಸ್, ಟೆಲ್ಸಾ ಸಂಸ್ಥೆಯ ಎಲೋನ್ ಮಸ್ಕ್ ವಿಶ್ವದ ಮೊದಲ ಮತ್ತು ಎರಡನೇ ಶ್ರೀಮಂತರಾಗಿದ್ದಾರೆ. ನಂತರ ಸ್ಥಾನವನ್ನು 137 ಬಿಲಿಯನ್ ಅಮೆರಿಕಾ ಡಾಲರ್ ಆಸ್ತಿಯ ಒಡೆಯ ಗೌತಮ್ ಅದಾನಿ ಪಡೆದಿದ್ದಾರೆ. ಬರ್ನಾಡ್ ಅರ್ನಾಲ್ಟ್ 136 ಬಿಲಿಯನ್ ಡಾಲರ್ ಆಸ್ತಿ ಒಡೆತನ ಮೂಲಕ ನಾಲ್ಕನೆ ಸ್ಥಾನ ಪಡೆದಿದ್ದಾರೆ.

ಮೊದಲ ಮತ್ತು ಎರಡನೇ ಸ್ಥಾನ ಪಡೆದ ಶ್ರೀಮಂತರು ಅಮೆರಿಕಾ ಮೂಲದವರಾಗಿದ್ದರೆ, ಭಾರತದ ಉದ್ಯಮಿ ಕೂಡ ಈ ಆದ್ಯತಾ ಪಟ್ಟಿಯಲ್ಲಿ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.ರಿಯಲನ್ಸ್‍ನ ಮುಖ್ಯಸ್ಥ ಮುಖೇಶ್ ಅಂಬಾನಿ 91.9 ಬಿಲಿಯನ್ ಡಾಲರ್ ಆಸ್ತಿ ಸಂಪಾದನೆಯ ಮೂಲಕ ವಿಶ್ವದ ವೈಯಕ್ತಿಕ ಶ್ರೀಮಂತರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ.

ಗೌತಮ್ ಅದಾನಿ ಸಂಸ್ಥೆ ಬಂದರು, ಇಂಧನ, ಹಸಿರು ಇಂಧನ, ಅನಿಲ, ವಿಮಾನ ನಿಲ್ದಾಣ ಸೇರಿದಂತೆ ಇತರ ಕ್ಷೇತ್ರಗಳ ಉದ್ದಿಮೆಗಳ ಮೂಲಕ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗಿದೆ. ಭಾರತದ ಟಾಟಾ ಸಂಸ್ಥೆ, ರಿಯಲನ್ಸ್ ಸಂಸ್ಥೆ ಸಂಘಟಿತ ಶ್ರೀಮಂತರ ಪಟ್ಟಿಯಲ್ಲಿವೆ.

Articles You Might Like

Share This Article